ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್‌ಗೆ ದೊಡ್ಡ ಸೋಲು: ಪ್ರಶಾಂತ್ ಕಿಶೋರ್

Date:

Advertisements

ಆಂಧ್ರ ಪ್ರದೇಶದ ವೈ ಎಸ್‌ ಜಗನ್‌ ಮೋಹನ್‌ ನೇತೃತ್ವದ ವೈಎಸ್‌ಆರ್‌ಸಿ ಪಕ್ಷಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಸೋಲು ಉಂಟಾಗಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.

2019ರ ಚುನಾವಣೆಯಲ್ಲಿ ಭರ್ಜರಿ ವಿಜಯಗಳಿಸಲು ಪ್ರಶಾಂತ್ ಕಿಶೋರ್ ತಂಡ ಪ್ರಮುಖ ಪಾತ್ರ ವಹಿಸಿತ್ತು.

ಹೈದರಾಬಾದ್‌ನಲ್ಲಿ ನಡೆದ ಮಾಧ್ಯಮವೊಂದರ ಸಂವಾದದಲ್ಲಿ ಭಾರತದ ಪೂರ್ವ ಚುನಾವಣಾ ಚಿತ್ರಣಗಳ ಬಗ್ಗೆ ಮಾತನಾಡಿದರು. “ಜಗನ್‌ನನ್ನು ಸೋಲಿಸಲು ತುಂಬ ಕಷ್ಟವಿದೆ ನನಗೆ ಅನಿಸುತ್ತಿದೆ. ಅವರು ಸಂಕಷ್ಟದ ಸಂದರ್ಭದಲ್ಲಿದ್ದಾರೆ. ಅವರು ಸೋಲುತ್ತಾರೆ. ನನ್ನ ಬಳಿ ಅಂಕಿಅಂಶಗಳಿಲ್ಲ ಅಥವಾ ಆಂಧ್ರ ಪ್ರದೇಶದ ಬಗ್ಗೆ ಯಾವುದೇ ಅನುಭವಗಳಿಲ್ಲ. ಆದರೆ ಅವರು ದೊಡ್ಡದಾಗಿ ಸೋಲುತ್ತಾರೆಂದು ನನ್ನ ಮನಸ್ಸು ಹೇಳುತ್ತಿದೆ. ಬರಿ ಸೋಲಲ್ಲ ದೊಡ್ಡ ಸೋಲು” ಎಂದು ಹೇಳಿದರು.

Advertisements

ಪ್ರಶಾಂತ್ ಸದ್ಯ ಬಿಹಾರದಲ್ಲಿ ಜಾನ್‌ ಸೂರಜ್‌ ಅಭಿಯಾನವನ್ನು ಮುನ್ನಡೆಸುತ್ತಿದ್ದು, ವೃತ್ತಿಪರ ಚುನಾವಣಾ ತಂತ್ರಗಾರಿಕೆಯಿಂದ ದೂರವುಳಿದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬ್ರ್ಯಾಂಡ್ ಬೆಂಗಳೂರು’ ಬಡವರು ಬದುಕಲು ಯೋಗ್ಯವಾದ ನಗರವೂ ಆಗಲಿ

“ಅವರು ರಾಜ್ಯವನ್ನು ಹೇಗೆ ಮುನ್ನಡೆಸಿದರು ಎಂಬುದರ ಪರಿಸ್ಥಿತಿ ಇದಾಗಿದೆ. ಆಂಧ್ರ ಬಹುಶಃ ಮಧ್ಯಮ ವರ್ಗ ಆದಾಯ ವಿಭಾಗಕ್ಕೆ ಸೇರುವ ಸಾಧ್ಯತೆಯಿದೆ. ಮಧ್ಯಮ ಆದಾಯವುಳ್ಳ ರಾಜ್ಯದಲ್ಲಿ ನೀವು ಆದಾಯ ಉತ್ಪತ್ತಿ ಹಾಗೂ ಹೊಸ ಮೂಲ ಸೌಲಭ್ಯಗಳ ಬಗ್ಗೆ ಮಾತನಾಡದೆ ಹಂಚುವುದರ ಕಡೆ ಗಮನ ಹರಿಸುತ್ತಿದ್ದರೆ ಬಹು ದೊಡ್ಡ ಗಂಡಾಂತರವನ್ನು ತಂದುಕೊಳ್ಳುತ್ತೀರಿ. ಜಗನ್ ಸರ್ಕಾರವು ಹೆಚ್ಚುವರಿ ಸಾಲದ ವೆಚ್ಚದಲ್ಲಿಯೂ ಸಹ ನಿರುದ್ಯೋಗಿಗಳಿಗೆ ಪಾವತಿ ಹಾಗೂ ನೇರ ಲಾಭ ವರ್ಗಾವಣೆಗಳ ಕಡೆ ಹೆಚ್ಚು ಆದ್ಯತೆ ನೀಡುತ್ತಿದೆ. ಇದು ಕಡಿಮೆ ಆದಾಯವುಳ್ಳ ರಾಜ್ಯಕ್ಕೆ ಪ್ರಯೋಜನವಾಗುತ್ತದೆ ಆದರೆ ಆಂಧ್ರ ಪ್ರದೇಶದಲ್ಲಿ ನಗರೀಕರಣ ಶೇ.50 ರಷ್ಟಿದೆ. ಜನರಿಗೆ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳು ಹೆಚ್ಚು ಸರಿ ಹೊಂದುವುದಿಲ್ಲ. ಏಕೆಂದರೆ ಜನಸಂಖ್ಯೆಯಲ್ಲಿ ಅರ್ಧದಷ್ಟು ಅರ್ಹರಿರುವುದಿಲ್ಲ, ನೀವು ಅರ್ಹರನ್ನು ತಲುಪುವುದಿಲ್ಲ” ಎಂದರು.

ಪ್ರಶಾಂತ್ ಕಿಶೋರ್ ಕೆಲವು ತಿಂಗಳ ಹಿಂದೆ ವಿಜಯವಾಡದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಮೂರು ಗಂಟೆಗಳ ಕಾಲ ಚರ್ಚಿಸಿದ್ದಾರೆ. ಭೇಟಿಯ ಬಗ್ಗೆ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, ಅವರ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X