ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಅಬ್ಬರ ಬ್ಯಾಟಿಂಗ್ ಮಾಡಿರುವ ಭಾರತ ತಂಡದ ಯಶಸ್ವಿ ಜೈಸ್ವಾಲ್ 60 ವರ್ಷಗಳ ದಾಖಲೆ ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಪಡೆದಿದ್ದು, ತಮ್ಮ ಹೆಸರಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ವಿಶಾಖ ಪಟ್ಟಣದ ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಸ್ಕ್ರೀಜ್‌ಗೆ ಇಳಿದ ಜೈಸ್ವಾಲ್, ಶತಕ ಸಿಡಿಸಿದ್ದಾರೆ. ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಅಜೇಯರಾಗಿ 179 ರನ್ ಗಳಿಸಿ, ಹೊಸ ದಾಖಲೆ ಬರೆದಿದ್ದಾರೆ.
ಈ ಹಿಂದೆ, 1964ರಲ್ಲಿ ಇದೇ ಇಂಗ್ಲೆಂಡ್ ತಂಡ ವಿರುದ್ಧ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ಬುಧಿ ಅವರು 170 ರನ್ ಗಳಿಸಿ, ದಾಖಲೆ ಬರೆದಿದ್ದರು. ಇದೀಗ, ಆ ದಾಖಲೆಯನ್ನು ಜೈಸ್ವಾಲ್ ಮುರಿದಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ 151 ಎಸೆತಗಳಿಗೆ ಜೈಸ್ವಾಲ್ ಶತಕ ಬಾರಿಸಿದ್ದರು. ಬಳಿಕ, ಮೊದಲ ದಿನದಾಟ ಮುಗಿಯುವ ಹೊತ್ತಿಗೆ 257 ಎಸತಗಳನ್ನು ಎದುರಿಸಿ, 5 ಸಿಕ್ಸ್ ಹಾಗೂ 17 ಫೋರ್‌ಗಳೊಂದಿಗೆ 179 ರನ್ ಗಳಿಸಿ, ಹೊಸ ದಾಖಲೆ ಬರೆದಿದ್ದರು. ಎರಡನೇ ದಿನವೂ ಆಟ ಮುಂದುವರೆಸಿದ ಜೈಸ್ವಾಲ್ 209 ರನ್‌ಗಳಿಸಿ ಔಟಾಗಿದ್ದಾರೆ.
ದ್ವಿತೀಯ ಟೆಸ್ಟ್‌ನಲ್ಲಿ ಭಾರತ ತಂಡ 396 ರನ್‌ಗಳಿಗೆ ಆಲ್‌ಔಟ್ ಆಗಿದೆ.