ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧನ ಮೃತದೇಹವು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಳೆದ ರಾತ್ರಿ ಅನಂತ್‌ನಾಗ್‌ನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ಉಗ್ರರುವ ಅಪಹರಣ ಮಾಡಿದ್ದ ಇಬ್ಬರು ಯೋಧರಲ್ಲಿ ಹಿಲಾಲ್ ಅಹ್ಮದ್ ಭಟ್ ಎಂಬವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಅಪಹರಣಕ್ಕೊಳಗಾಗಿದ್ದ ಇಬ್ಬರು ಯೋಧರ ಪೈಕಿ ಓರ್ವ ಯೋಧ ತಪ್ಪಿಸಿಕೊಂಡಿದ್ದರು. ಆದರೆ ಹಿಲಾಲ್ ಉಗ್ರರ ವಶದಲ್ಲಿದ್ದರು. ಕೋಕರ್‌ನಾಗ್‌ನ ಕಜ್ವಾನ್ ಅರಣ್ಯ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಯೋಧ ನಾಪತ್ತೆಯಾಗಿದ್ದಾರೆ ಎಂದು ಚಿನಾರ್ ಕಾರ್ಪ್ಸ್ ದೃಢಪಡಿಸಿತ್ತು.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಎನ್‌ಕೌಂಟರ್‌ನಲ್ಲಿ ಸೇನಾ ಅಧಿಕಾರಿ ಹುತಾತ್ಮ, ಮುಂದುವರಿದ ಕಾರ್ಯಾಚರಣೆ
“ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಕೆಚ್ಚೆದೆಯ ವೀರ, ರೈಫಲ್‌ಮ್ಯಾನ್ ಹಿಲಾಲ್ ಅಹ್ಮದ್ ಭಟ್ ತ್ಯಾಗವನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಎಂದೆಂದಿಗೂ ಸ್ಫೂರ್ತಿ ನೀಡುತ್ತದೆ. ಭಾರತೀಯ ಸೇನೆಯು ಆಳವಾದ ಸಂತಾಪ ವ್ಯಕ್ತಪಡಿಸುತ್ತದೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ” ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಆಫ್ ಆರ್ಮಿ ಎಕ್ಸ್‌ನಲ್ಲಿ ಹೇಳಿದೆ.
OP KOKERNAG, #Anantnag
— Chinar Corps🍁 – Indian Army (@ChinarcorpsIA) October 9, 2024
Based on intelligence input, a joint counter terrorist operation was launched by #IndianArmy alongwith @JmuKmrPolice & other agencies in Kazwan Forest #Kokernag on 08 Oct 24. Operation continued overnight as one soldier of Territorial Army was reported… pic.twitter.com/h1HV51ROKS
“ಗುಪ್ತಚರ ಮಾಹಿತಿಯ ಆಧಾರದ ಮೇಲೆ ಅಕ್ಟೋಬರ್ 8ರಂದು ಕಜ್ವಾನ್ ಅರಣ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೋಲೀಸ್ ಮತ್ತು ಏಜೆನ್ಸಿಗಳೊಂದಿಗೆ ಭಾರತೀಯ ಸೇನೆಯು ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪ್ರಾದೇಶಿಕ ಸೇನೆಯ ಒಬ್ಬ ಯೋಧ ನಾಪತ್ತೆಯಾಗಿರುವುದರಿಂದ ಕಾರ್ಯಾಚರಣೆಯು ರಾತ್ರಿಯಿಡೀ ಮುಂದುವರೆದಿತ್ತು” ಎಂದು ಚಿನಾರ್ ಕಾರ್ಪ್ಸ್ ಆಫ್ ಆರ್ಮಿ ತಿಳಿಸಿದೆ.
