ಜಮ್ಮು ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆ ಒಂದು ಕುಟುಂಬವನ್ನೇ ಬಲಿ ತೆಗೆದುಕೊಂಡಿದೆ. ತನ್ನ ಎಲ್ಲಾ ಕುಟುಂಬಸ್ಥರನ್ನು ಕಳೆದುಕೊಂಡ ಮೊಹಮ್ಮದ್ ಅಸ್ಲಾಂ “ನನ್ನ ಜಗತ್ತೇ ನಾಶವಾಯಿತು” ಎಂದು ಭಾವುಕರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಗಡಿ ಜಿಲ್ಲೆಯ ದೂರದ ಬುಧಾಲ್ ಗ್ರಾಮದಲ್ಲಿರುವ ಅಸ್ಲಾಂ ಒಂದು ವಾರದೊಳಗೆ ತನ್ನ ಚಿಕ್ಕಪ್ಪ, ಚಿಕ್ಕಮ್ಮ, ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು-ಕಾಶ್ಮೀರ | ನಿಗೂಢ ಕಾಯಿಲೆ; ಒಂದೇ ಗ್ರಾಮದಲ್ಲಿ 10 ಮಕ್ಕಳು ಸೇರಿ 13 ಮಂದಿ ಸಾವು
ಶುಕ್ರವಾರ ಬೆಳಿಗ್ಗೆ ಅಸ್ಲಾಂ ಅವರ ಚಿಕ್ಕಮ್ಮ ಜಟ್ಟಿ ಬೇಗಂ (60) ನಿಗೂಢ ಕಾಯಿಲೆಗೆ ಬಲಿಯಾದರು. ಈ ಮೂಲಕ ಈ ನಿಗೂಢ ಕಾಯಿಲೆಯಿಂದ ಸಾವನ್ನಪ್ಪಿದ್ದವರು ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈವರೆಗೆ ನಾಲ್ವರು ವಯಸ್ಕರು ಮತ್ತು 12 ಮಕ್ಕಳು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಈ ವರ್ಷದ ಜನವರಿ 9ರಿಂದ ಅಸ್ಲಾಂ ಅವರ ಕುಟುಂಬದಲ್ಲಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಅಸ್ಲಾಂ ಅವರ ತಾಯಿಯ ಚಿಕ್ಕಪ್ಪ ಮೊಹಮ್ಮದ್ ಯೂಸುಫ್ (63) ಗುರುವಾರ ನಿಗೂಢ ಕಾಯಿಲೆಯಿಂದ ನಿಧನರಾದರು.
“ಒಂದು ವಾರದಲ್ಲಿ ನನ್ನ ಪ್ರಪಂಚವೇ ನಾಶವಾಗಿದೆ. ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ನಾನು ಕಳೆದುಕೊಂಡಿದ್ದೇನೆ. ಈಗ ನನ್ನ ಏಕೈಕ ಪುತ್ರಿ ಯಾಸ್ಮಿನ್ ಕೌನ್ಸರ್ (15) ಜಮ್ಮುವಿನ ಎಸ್‌ಎಂಜಿಎಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಅವಳು ಬದುಕುಳಿಯುತ್ತಾಳೋ ಇಲ್ಲವೋ ನಮಗೆ ತಿಳಿದಿಲ್ಲ” ಎಂದು ಅಸ್ಲಾಂ ಹೇಳಿದರು. ಇನ್ನು ಯಾಸ್ಮಿನ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗೋಡ್ಸೆಯನ್ನು ಉಳಿಸಿಕೊಳ್ಳಲು ಆತನ ಪೋಷಕರು ಆತನಿಗೆ ಹೆಣ್ಣುಡುಗೆ ತೊಡಿಸಿ ಹೆಣ್ಣಾಗಿ ಬೆಳೆಸಿದ್ದರಂತೆ
2024ರ ಡಿಸೆಂಬರ್ 7ರಿಂದ ಜಮ್ಮು ಕಾಶ್ಮೀರದಲ್ಲಿ ವಿಚಿತ್ರ ಕಾಯಿಲೆಗೆ ಹಲವರು ಬಲಿಯಾಗುತ್ತಿದ್ದಾರೆ. ಒಂದು ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದ ಬಳಿಕ ಹಲವು ಮಂದಿ ಅಸ್ವಸ್ಥರಾಗಿದ್ದರು. ಆದರೆ “ಫಜಲ್ ಅವರ ಮನೆಯ ಕಾರ್ಯಕ್ರಮದಲ್ಲಿ 30-40 ಜನರು ಊಟ ಮಾಡಿದ್ದಾರೆ. ಕೇವಲ ಮೂರು ಕುಟುಂಬದವರು ಮಾತ್ರ ಏಕೆ ಅಸ್ವಸ್ಥರಾಗಿದ್ದಾರೆ” ಎಂದು ಅಸ್ಲಾಂ ಪ್ರಶ್ನಿಸಿದ್ದಾರೆ.
ಸದ್ಯ ಗ್ರಾಮದಲ್ಲಿ ಸಾವಿರಾರು ಮಂದಿಯ ಮಾದರಿಯನ್ನು ಪಡೆಯಲಾಗಿದ್ದು, ಯಾವುದೇ ವೈರಲ್ ಅಥವಾ ಕಾಯಿಲೆ ಪತ್ತೆಯಾಗಿಲ್ಲ. ಆದ್ದರಿಂದ ಈ ವಿಭಿನ್ನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಇದು ಸಾಂಕ್ರಾಮಿಕ ರೋಗವಲ್ಲ ಎಂಬುದು ಸಾಬೀತಾಗಿದೆ ಎಂದು ವರದಿಯಾಗಿದೆ.
