ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ಅಧ್ಯಕ್ಷರಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಗುರುವಾರ ಆಯ್ಕೆಯಾಗಿದ್ದಾರೆ. ಸಂಘದ ಚುನಾವಣೆ ಗುರುವಾರ ನಡೆದಿದ್ದು ಸುಮಾರು 23 ವರ್ಷಗಳ ಬಳಿಕ ಮತ್ತೆ ಕಪಿಲ್ ಸಿಬಲ್ ಆಯ್ಕೆಗೊಂಡಿದ್ದಾರೆ.
ಎಸ್ಸಿಬಿಎ ಅಧ್ಯಕ್ಷ ಸ್ಥಾನಕ್ಕೆ ಕಪಿಲ್ ಸಿಬಲ್ ಮಾತ್ರವಲ್ಲದೆ ಹಿರಿಯ ವಕೀಲರಾದ ಆದಿಶ್ ಸಿ ಅಗರ್ವಾಲಾ, ಪ್ರದೀಪ್ ಕುಮಾರ್ ರೈ, ಪ್ರಿಯಾ ಹಿಂಗೋರಾಣಿ ಮತ್ತು ವಕೀಲರಾದ ತ್ರಿಪುರಾರಿ ರೇ ಮತ್ತು ನೀರಜ್ ಶ್ರೀವಾಸ್ತವ ಸ್ಪರ್ಧಿಸಿದ್ದರು.
ಇದನ್ನು ಓದಿದ್ದೀರಾ? 11 ದಿನದ ನಂತರ ಶೇಕಡವಾರು ಮತದಾನದ ವಿವರ ಪ್ರಕಟ: ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಪ್ರಶ್ನಿಸಿದ ಕಪಿಲ್ ಸಿಬಲ್
ಕಪಿಲ್ ಸಿಬಲ್ ಅವರಿಗೆ ಎಸ್ಸಿಬಿಎ ಅಧ್ಯಕ್ಷಗಿರಿ ಚುನಾವಣೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮತಗಳು ಲಭ್ಯವಾಗಿದ್ದರೆ, ಪ್ರದೀಪ್ ಕುಮಾರ್ ರೈ ಅವರಿಗೆ 650ಕ್ಕೂ ಅಧಿಕ ಮತಗಳು ಲಭಿಸಿದೆ ಎಂದು ವರದಿಯಾಗಿದೆ.
ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಪದವಿ ಪಡೆದ ಸಿಬಲ್ ಅವರು 1989-90ರ ಅವಧಿಯಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ಅವರನ್ನು 1983 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಗಿದೆ.
ಈ ಹಿಂದೆ 1995 ಮತ್ತು 2002ರ ನಡುವೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮಾಜಿ ಸಚಿವರು ಆಗಿದ್ದ ಕಪಿಲ್ ಸಿಬಲ್ ಅವರ ಈ ಹಿಂದೆ ಮೂರು ಬಾರಿ ಎಸ್ಸಿಬಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈಗ ನಾಲ್ಕನೇ ಬಾರಿಗೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ದೇಣಿಗೆ ನೀಡಿ ಲಾಭ ಪಡೆದಿರುವುದು ದೊಡ್ಡ ಹಗರಣ: ಎಸ್ಐಟಿ ತನಿಖೆಗೆ ಕಪಿಲ್ ಸಿಬಲ್ ಆಗ್ರಹ
ಎಸ್ಸಿಬಿಎಯ ಕಾರ್ಯಕಾರಿ ಸಮಿತಿಯಲ್ಲಿ ಕೆಲವು ಹುದ್ದೆಗಳನ್ನು ಮಹಿಳಾ ಸದಸ್ಯರಿಗೆ ಮೀಸಲಿಡುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು. ಮುಂಬರುವ 2024-2025ರ ಎಸ್ಸಿಬಿಎ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿಯ ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಪೀಠ ಹೇಳಿತ್ತು.
Kapil Sibal has just been elected as President of the Supreme Court Bar Association by a landslide.
This is a big win for liberal, secular, democratic, and progressive forces. This is also, in the outgoing PM’s words, a trailer for the changes that will happen very soon…
— Jairam Ramesh (@Jairam_Ramesh) May 16, 2024
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಕ್ಸ್ ಪೋಸ್ಟ್
ಸಿಬಲ್ ಅವರು ಎಸ್ಸಿಬಿಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಪೋಸ್ಟ್ ಮಾಡಿದ್ದು, “ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಈಗಷ್ಟೇ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ. ಇದು ಉದಾರವಾದಿ, ಜಾತ್ಯತೀತ, ಪ್ರಜಾಪ್ರಭುತ್ವ, ಪ್ರಗತಿಪರ ಶಕ್ತಿಗಳಿಗೆ ದೊಡ್ಡ ಗೆಲುವು. ಇದು ರಾಷ್ಟ್ರೀಯವಾಗಿ ಶೀಘ್ರದಲ್ಲೇ ಸಂಭವಿಸುವ ಬದಲಾವಣೆಗಳಿಗೆ ಟ್ರೇಲರ್ ಆಗಿದೆ” ಎಂದು ಹೇಳಿದ್ದಾರೆ.