ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಬಿಜೆಪಿ ಲೋಕಸಭಾ ಅಭ್ಯರ್ಥಿ ಕಂಗನಾ ರನೌತ್ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಗ್ಗೆ ಹೇಳಿದ ಮಾತು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಡೆ ವೈರಲ್ ಆಗುತ್ತದೆ.
ಹಿಮಾಚಲ ಪ್ರದೇಶದ ಮಂಡಿ ಪ್ರದೇಶದಲ್ಲಿ ಶನಿವಾರ(ಮೇ.04) ಪ್ರಚಾರ ಮಾಡುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಗುಂಡಾಗಿರಿ ಮಾಡುತ್ತಾನೆ, ಆತ ಮೀನು ತಿನ್ನುತ್ತೇನೆ ಎಂದು ಹೇಳಿದರು. ಆದರೆ ವಾಸ್ತವವಾಗಿ ಬಿಹಾರದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬಗ್ಗೆ ಹೇಳಬೇಕಾಗಿತ್ತು. ಆದರೆ ಬಾಯಿತಪ್ಪಿ ಕರ್ನಾಟಕದ ಬಿಜೆಪಿ ನಾಯಕನ ಬಗ್ಗೆ ಮಾತನಾಡಿದ್ದಾರೆ.
ಕಂಗನಾ ರನೌತ್ ಹೇಳಿರುವ ದೃಶ್ಯ ಈಗ ಎಲ್ಲಡೆ ವೈರಲ್ ಆಗುತ್ತಿದೆ. ಬಿಜೆಪಿ ನಾಯಕಿ ತಮ್ಮ ಪಕ್ಷದವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಎಲ್ಲಡೆ ಟ್ರೋಲ್ ಆಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ ಏಪ್ರಿಲ್ 9 ರಂದು ಬಿಹಾರದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೆಲಿಕಾಪ್ಟರ್‌ನಲ್ಲಿ ಮೀನು ಸೇವಿಸಿದ್ದು ಬಹಳಷ್ಟು ಟೀಕೆಗೆ ಒಳಗಾಗಿತ್ತು.
ಕಂಗನಾ ರನೌತ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್, ಆಕೆ ಯಾರು ಎಂದು ಪ್ರಶ್ನಿಸಿದ್ದಾರೆ.
ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈಕೆಯ ವಿರುದ್ಧ ಕಾಂಗ್ರೆಸ್‌ನಿಂದ ವಿಕ್ರಮಾದಿತ್ಯ ಸಿಂಗ್ ಕಣಕ್ಕಿಳಿದಿದ್ದಾರೆ.
Watch: BJP candidate from Mandi Kangana Ranaut says, "Those who do not understand the language of this country and those who understand its culture, how can they run this country" pic.twitter.com/Ub13jkxUST
— IANS (@ians_india) May 4, 2024
