ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಸಹಾಯಾಸ್ತ ನೀಡಲು ಕಣ್ಣೂರು ವಿಶ್ವವಿದ್ಯಾಲಯ ನಿರ್ಧರಿಸಿದೆ. ಹಿಂಸಾಚಾರದಿಂದಾಗಿ ಮಣಿಪುರದಿಂದ ಹೊರಗುಳಿದಿರುವ 70 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ ನೀಡಲು ವಿಶ್ವವಿದ್ಯಾಲಯ ಮುಂದಾಗಿದೆ.
ಹೊಸ ಕೋರ್ಸ್‌ಗಳಿಗೆ ದಾಖಲಾಗುವ ಹಾಗೂ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿರುವ ಮಣಿಪುರದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡಲು ವಿಶ್ವವಿದ್ಯಾಲಯ ಯೋಜಿಸಿದೆ. ಈಗಾಗಲೇ 13 ವಿದ್ಯಾರ್ಥಿಗಳ ತಂಡ ಕೇರಳ ತಲುಪಿದ್ದು, ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಿದ್ದರಾಗಿದ್ದಾರೆ.
“ಕಣ್ಣೂರು ನಮ್ಮ ಸ್ವಂತ ಸ್ಥಳವೆಂದು ಭಾವಿಸಿದ್ದೇವೆ. ಆಹಾರದಲ್ಲಿ ಕೆಲವು ವ್ಯತ್ಯಾಸಗಳಿರಬಹುದು. ಆದರೆ, ನಮ್ಮ ರಾಜ್ಯಕ್ಕಿಂತ ಹೆಚ್ಚೇನೂ ಭಿನ್ನವಾಗಿಲ್ಲ. ನಾವು ನಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅನುಕೂಲ ದೊರೆತಿದೆ” ಎಂದು ಹಿಂಸಾಚಾರದಿಂದ ಮಣಿಪುರ ತೊರೆದು ಕೇರಳಕ್ಕೆ ಬಂದಿರುವ ವಿದ್ಯಾರ್ಥಿನಿ ಕಿಮ್ಸಿ ಹೇಳಿದ್ದಾರೆ.
First batch of students from manipur joined kannur university kerala today. The uvsty had decided to admit students from manipur who couldn't continue education due to violence in the state. (Pic-sfi leaders welcoming them in campus.) pic.twitter.com/UNQVOdpRHI
— Master VJN (@TweetsofVJN) September 19, 2023
ಕಣ್ಣೂರು ವಿಶ್ವವಿದ್ಯಾನಿಲಯವು ಮಣಿಪುರದ ವಿದ್ಯಾರ್ಥಿಗಳಿಗೆ ಯಾವುದೇ ಅರ್ಹತಾ ಮಾನದಂಡ, ಪ್ರಮಾಣಪತ್ರ ಸೇರಿದಂತೆ ಹೆಚ್ಚಿನ ದಾಖಲೆಗಳನ್ನು ಪಡೆಯದೆ ಪ್ರವೇಶ ನೀಡುತ್ತಿದೆ. ಹೊಸದಾಗಿ ದಾಖಲಾಗುತ್ತಿರುವ ವಿದ್ಯಾರ್ಥಿಗಳು ಹಿಂಸಾಚಾರದಿಂದಾಗಿ ತಮ್ಮ ರಾಜ್ಯ ತೊರೆದು ಬಂದಿದ್ದಾರೆ. ಅವರಿಗೆ ಸಹಾಯ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದೆ” ಎಂದು ವಿಶ್ವವಿದ್ಯಾಲಯದ ಆಡಳಿತ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ಮಣಿಪುರದಿಂದ ʼಈ ದಿನʼ ವರದಿ -10 | ತಾಯ್ನಾಡು ಮತ್ತು ಮ್ಯಾನ್ಮಾರ್, ಎರಡೂ ಕಡೆ ಬೆಂಕಿಯ ನಡುವೆ ಸಿಲುಕಿದವರ ಅನುಭವ ಕಥನ
“ನಾವು ಪ್ರಮಾಣಪತ್ರವನ್ನು ಹೊಂದಿರದ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸುತ್ತಿಲ್ಲ. ನಾವು ಮಣಿಪುರದ ವಿಶ್ವವಿದ್ಯಾಲಯಗಳೊಂದಿಗೆ ಸಂವಹನ ನಡೆಸುತ್ತೇವೆ. ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪ್ರಮಾಣಪತ್ರಗಳನ್ನು ನೀಡುವ ಮೊದಲು ಅವರ ಪ್ರಮಾಣಪತ್ರಗಳನ್ನು ಪಡೆಯುತ್ತೇವೆ,” ಎಂದು ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿ ಗೋಪಿನಾಥ್ ರವೀಂದ್ರನ್ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುವುದು. ಅದರಲ್ಲಿಯೂ, ಹಾಸ್ಟೆಲ್‌ಗಳು ಮತ್ತು ಇತರ ಸೌಲಭ್ಯಗಳುಳ್ಳ ವಸತಿ ಕ್ಯಾಂಪಸ್‌ಗಳನ್ನು ಹೊಂದಿರುವ ಕಾಲೇಜುಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.