ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಜಿಮ್‌ನಲ್ಲಿ ‘ಇಸ್ಲಾಂ-ಸ್ನೇಹಿ ಜಿಮ್’ ಆಗಿ ಕಾರ್ಯನಿರ್ವಹಿಸುವ ಹೊಸ ವ್ಯವಸ್ಥೆಯನ್ನು ಆರಂಭಿಸಲಾಗಿದೆ.ಪಾಲಕ್ಕಾಡ್‌ನ ಪುತುನಗರಂ ಎಂಬಲ್ಲಿರುವ ಈ ಜಿಮ್ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ಹೊಸದಾಗಿ ಆರಂಭಿಸಿರುವ ‘ಇಸ್ಲಾಂ-ಸ್ನೇಹಿ’ ನಿಯಮಗಳ ಪ್ರಕಾರ, ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಸಂಗೀತ ಹಾಕುವುದನ್ನು ನಿಷೇಧಿಸಲಾಗಿದೆ. ಹಾಗೆಯೇ, ಜಿಮ್ ಅನ್ನು ಬಳಸಲು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದನ್ನು ಓದಿದ್ದೀರಾ? ಬಾಂಬ್, ಬೆದರಿಕೆಗಳಿಗೆ ಬಗ್ಗದ ಜ್ಞಾನದೀವಿಗೆ: ಬಡವರ ಪಾಲಿನ ಅಕ್ಷರ ಸಂತ ‘ಖಾನ್ ಸರ್’
ವ್ಯಾಯಾಮಕ್ಕೆ ಬರುವವರು ಅನುಸರಿಸಬೇಕಾದ ಉಡುಪಿನ ನಿಯಮಗಳಲ್ಲೂ (ಡ್ರೆಸ್ ಕೋಡ್) ಬದಲಾವಣೆ ಮಾಡಲಾಗಿದೆ. ಧಾರ್ಮಿಕ ನಿಯಮಗಳ ಪ್ರಕಾರ ದೇಹವನ್ನು ಮುಚ್ಚುವಂತೆ ಉಡುಪು ಧರಿಸುವುದು ಕಡ್ಡಾಯವಾಗಿದೆ. ಮುಖ್ಯವಾಗಿ, ಜಿಮ್‌ಗೆ ಬರುವ ಮಹಿಳೆಯರು ಹಿಜಾಬ್ ಸೇರಿದಂತೆ ದೇಹವನ್ನು ಸಂಪೂರ್ಣವಾಗಿ ಆವರಿಸುವಂತಹ ಬಟ್ಟೆಗಳನ್ನೇ ಧರಿಸಬೇಕು ಎಂದು ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಈ ಹೊಸ ಯೋಜನೆಯ ಆರಂಭದ ಕುರಿತು ಪ್ರಕಟಣೆ ಹೊರಡಿಸಲಾಗಿತ್ತು.
ಕೇರಳದಲ್ಲಿ ಆರಂಭವಾಗಿರುವ ಈ ಹೊಸ ಇಸ್ಲಾಂ-ಸ್ನೇಹಿ ಜಿಮ್ ಯೋಜನೆಯ ಬಗ್ಗೆ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. “ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕಿಂತ ಷರಿಯಾ ಕಾನೂನಿಗೆ ಹೆಚ್ಚು ಮನ್ನಣೆ ನೀಡುತ್ತಿದೆ. ಮುಸ್ಲಿಂ ಲೀಗ್‌ನ ನಿಯಂತ್ರಣದಲ್ಲಿರುವ ಕಾಂಗ್ರೆಸ್, ಮುಸ್ಲಿಮರ ಓಲೈಕೆಗಾಗಿ ಇಂತಹ ಷರಿಯಾ ಆಧಾರಿತ ಜಿಮ್‌ಗಳಿಗೆ ಮುಕ್ತ ಅವಕಾಶ ನೀಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿವೆ.





