ಲಾರೆನ್ಸ್ ಬಿಷ್ಣೋಯ್‌ ಮುಂಬೈ ಪೊಲೀಸರಿಗೆ ಸಿಗದೇ ಇರೋದೇಕೆ? ಆತನನ್ನು ರಕ್ಷಿಸುತ್ತಿದೆಯೇ ಮೋದಿ-ಶಾ ಸರ್ಕಾರ?

Date:

ಭಾನುವಾರ ಸಂಜೆ, ಮುಂಬೈನಲ್ಲಿ ನಡೆದ ನಟ ಟೈಗರ್ ಶ್ರಾಫ್‌ ಕಾರಿನ ಮೇಲಿನ ದಾಳಿಯ ಹೊಣೆಯನ್ನು ಕುಖ್ಯಾತ ಗ್ಯಾಂಗಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ ತಂಡ ಒಪ್ಪಿಕೊಂಡಿದೆ. ತಾವೇ ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ. ಈ ಹೊಣೆಗಾರಿಕೆಯ ನಡುವೆ, ಮೂವರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

- Advertisement -

ಆದಾಗ್ಯೂ, ಗಮನಾರ್ಹ ಸಂಗತಿ ಎಂದರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಅತ್ಯಂತ ಬಿಗಿ ಭದ್ರತೆಯ ಸಬರ್ಮತಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರುವ ಲಾರೆನ್ಸ್ ಬಿಷ್ಣೋಯ್, ಜೈಲಿನೊಳಗೆ ಕುಳಿತೇ ತನ್ನ ಅಪರಾಧ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ವಿಸ್ತರಿಸುತ್ತಿದ್ದಾನೆ. ಆತನನ್ನು ತಮ್ಮ ಕಷ್ಟಡಿಗೆ ಪಡೆದುಕೊಳ್ಳಲು ವರ್ಷಗಳಿಂದ ಮುಂಬೈ ಪೊಲೀಸರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳು ಯತ್ನಿಸುತ್ತಿವೆ. ಆದರೆ, ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಕಠಿಣ ಕಾನೂನು ತಡೆಗೋಡೆಯು ಇದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಹೀಗಾಗಿಯೇ, ಆತನ ಸುತ್ತಲಿನ ಕಾನೂನು ತೊಡಕುಗಳು, ಗಂಭೀರ ಅಪರಾಧ ಕೃತ್ಯಗಳು ಹಾಗೂ ತೀವ್ರ ರಾಜಕೀಯ ವಿವಾದಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು...

ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಶಿಕ್ಷಣದ ಬಿಕ್ಕಟ್ಟಿನ ವಿರುದ್ಧ ಯುವ ಸಮೂಹ ಬೀದಿಗಿಳಿದಿದೆ. ಪ್ರಧಾನಿ ಎಡಿ ರಾಮಾ ಸರ್ಕಾರದ ವಿರುದ್ಧ ಅಲ್ಬೇನಿಯಾದಲ್ಲಿ ಭುಗಿಲೆದ್ದ ಜನಾಕ್ರೋಶ...

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

2023ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 268ರ ಅಡಿಯಲ್ಲಿ ಅಧಿಕೃತ ಆದೇಶ ಹೊರಡಿಸಿದ್ದು, ಬಿಷ್ಣೋಯ್‌ನನ್ನು ಆ ಜೈಲಿನಿಂದ ಹೊರತರಲು ಅಥವಾ ಬೇರೆಡೆಗೆ ಸ್ಥಳಾಂತರಿಸಲು ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಆ ನಂತರ, ಜಾರಿಗೆ ಬಂದ ‘ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ’ಯ (BNSS) ಸೆಕ್ಷನ್ 303ರ ಅಡಿಯಲ್ಲಿ ಈ ನಿರ್ಬಂಧ ಮುಂದುವರಿದಿದೆ.

ವಿಶೇಷವೆಂದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಚಿವಾಲಯವು 2025ರ ಆಗಸ್ಟ್‌ನಲ್ಲಿ ಈ ಆದೇಶವನ್ನು ಸತತ ಮೂರನೇ ಬಾರಿಗೆ ನವೀಕರಿಸಿದ್ದು, ಆತನನ್ನು ಸಬರ್ಮತಿ ಜೈಲಿನಿಂದ ಹೊರಗೆ ಕೊಂಡೊಯ್ಯದಂತೆ ಸಂಪೂರ್ಣ ರಕ್ಷಣೆ ಕಲ್ಪಿಸಿದೆ. ಇದರಿಂದಾಗಿ ಯಾವುದೇ ರಾಜ್ಯದ ಪೊಲೀಸರಿಗೆ ಆತನನ್ನು ಕಸ್ಟಡಿ ಪಡೆಯುವುದು ಅಸಾಧ್ಯವಾಗಿದ್ದು, ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ನೇರವಾಗಿ ಸಬರ್ಮತಿ ಜೈಲಿನಿಂದಲೇ ಆರೋಪಿಗಳೊಂದಿಗೆ ಸಂವಹನ ನಡೆಸಿದ್ದನು ಎಂದು ಮುಂಬೈ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಈ ರಕ್ಷಣಾ ಆದೇಶದಿಂದಾಗಿ, ನಟನ ಮೇಲಿನ ದಾಳಿಯಲ್ಲಿ ಆತನ ನೇರ ಪಾತ್ರವಿರುವುದು ಮೇಲ್ನೋಟಕ್ಕೆ ದೃಢಪಟ್ಟರೂ ಮುಂಬೈ ಪೊಲೀಸರಿಗೆ ಆತನನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ.

ಇದೇ ಸರಣಿ ಮುಂದುವರಿದು, 2026ರ ಫೆಬ್ರವರಿ 1ರಂದು ಖ್ಯಾತ ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಜುಹು ನಿವಾಸದ ಮೇಲೂ ಐದು ಸುತ್ತಿನ ಗುಂಡಿನ ದಾಳಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟಿರುವವರ ವಿರುದ್ಧ 1,624 ಪುಟಗಳ ಬೃಹತ್ ಎಂಒಸಿಎಸಿಎ ಆರೋಪಪಟ್ಟಿಯನ್ನು ದಾಖಲಿಸಿದ್ದಾರೆ. ಮುಂಬೈನಲ್ಲಿ ಗ್ಯಾಂಗ್‌ನ ಪ್ರಾಬಲ್ಯವನ್ನು ಮೆರೆಯಲು ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲೂ ಬಿಷ್ಣೋಯ್ ಜಾಲದ ಕೈವಾಡವಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ, ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆಯೂ ಗುಂಡಿನ ದಾಳಿ ನಡೆದಿರುವುದು ಈ ಗ್ಯಾಂಗ್‌ನ ದಮನಕಾರೀ ಚಟುವಟಿಕೆಗಳು ಸತತವಾಗಿ ಮುಂದುವರಿದಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಕೇವಲ ಭಾರತದ ಮಟ್ಟಿಗೆ ಸೀಮಿತವಾಗದೆ, ಈ ಅಂತರರಾಷ್ಟ್ರೀಯ ಅಪರಾಧ ಜಾಲವು ಜಾಗತಿಕ ಮಟ್ಟದಲ್ಲಿ ಬೇರೂರಿರುವುದನ್ನು ಅಮೆರಿಕದ ಫೆಡರಲ್ ದೋಷಾರೋಪಣೆಯು ಬಹಿರಂಗಪಡಿಸಿದೆ. 2026ರ ಜುಲೈನಲ್ಲಿ ಬಿಡುಗಡೆಯಾದ ಯುಎಸ್ ಫೆಡರಲ್ ಇಂಡೈಟ್‌ಮೆಂಟ್ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಜೈಲಿನೊಳಗಿಂದಲೇ ನಿಷೇಧಿತ ಮೊಬೈಲ್ ಫೋನ್‌ಗಳು ಮತ್ತು ವಿಒಐಪಿ ಸಾಧನಗಳನ್ನು ಬಳಸಿ ಅಪರಾಧಗಳನ್ನು ನಿರ್ದೇಶಿಸುತ್ತಿದ್ದಾನೆ. ಆತನ ಸಹಚರರಾದ ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರಾ ಮುಂತಾದವರು ಜಾಗತಿಕ ಮಟ್ಟದಲ್ಲಿ ಈ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾರೆ ಎಂದು ದಾಖಲೆಗಳು ತಿಳಿಸುತ್ತವೆ.

ಸಿಧು ಮೂಸೆವಾಲಾ ಹತ್ಯೆಯ ಸಂಚು ಸೇರಿದಂತೆ ಸಲ್ಮಾನ್ ಖಾನ್‌ಗೆ ಬೆದರಿಕೆ ಮತ್ತು ಈಗ ಟೈಗರ್ ಶ್ರಾಫ್ ಹಾಗೂ ರೋಹಿತ್ ಶೆಟ್ಟಿ ಮೇಲಿನ ದಾಳಿಗಳ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಳ್ಳುತ್ತಿದ್ದರೂ, ದೇಶದ ಯಾವುದೇ ರಾಜ್ಯ ಪೊಲೀಸ್ ಏಜೆನ್ಸಿಗಳು ಆತನನ್ನು ತಲುಪದಂತೆ ಕೇಂದ್ರ ಗೃಹ ಸಚಿವಾಲಯವು ತಡೆಗೋಡೆ ನಿರ್ಮಿಸಿರುವುದು ಗಂಭೀರ ಅನುಮಾನಗಳಿಗೆ ಮತ್ತು ತೀವ್ರ ಟೀಕೆಗಳಿಗೆ ಕಾರಣವಾಗಿದೆ.

ಈ ಲೇಖನ ಓದಿದ್ದೀರಾ?: ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಆತನನ್ನು ಆರಂಭದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಆಗ ಎನ್‌ಐಎ ಮತ್ತು ದೆಹಲಿ ಪೊಲೀಸರಿಗೆ ಆತನನ್ನು ವಿಚಾರಣೆ ಡನೆಸಲು ಪ್ರವೇಶಾವಕಾಶಗಳು ಇದ್ದವು. ಆದರೆ, ಆ ಪ್ರವೇಶಾವಕಾಶವನ್ನು ಮೊಟಕುಗೊಳಿಸಿ, ಆತನನ್ನು ಯಾರೂ ಸುಲಭವಾಗಿ ತಲುಪಲಾಗದ ಗುಜರಾತ್ ಜೈಳಿಗೆ ಸ್ಥಳಾಂತರಿಸಿರುವುದು ಮತ್ತು ನಂತರ ಸೆಕ್ಷನ್ 268ರ ಕಾನೂನು ಗೋಡೆಯನ್ನು ನಿರ್ಮಿಸಿರುವುದು ಕೇವಲ ಆಡಳಿತಾತ್ಮಕ ನಿರ್ಣಯವಲ್ಲ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ದೇಶದ ಆಂತರಿಕ ಭದ್ರತೆಯ ಹೊಣೆ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಣ್ಗಾವಲಿನಲ್ಲಿಯೇ ಜೈಲಿನಲ್ಲಿರುವ ಒಬ್ಬ ಕುಖ್ಯಾತ ಅಪರಾಧಿ ವಿದೇಶಗಳಲ್ಲಿ ಮತ್ತು ಮುಂಬೈ ಬೀದಿಗಳಲ್ಲಿ ತನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ಹೇಗೆ ಮುನ್ನಡೆಸಲು ಸಾಧ್ಯ ಎಂಬ ಪ್ರಶ್ನೆಗೆ ಆಡಳಿತದಿಂದ ಯಾವುದೇ ಸ್ಪಷ್ಟ ಉತ್ತರವಿಲ್ಲ. ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಬೆದರಿಕೆ ಸಂದೇಶಗಳನ್ನು ಕಳುಹಿಸುವುದು ಮತ್ತು ಗುಂಡಿನ ದಾಳಿಗಳ ಆದೇಶಗಳನ್ನು ಹೊರಡಿಸುತ್ತಿದ್ದರೂ, ಆತನನ್ನು ಅತ್ಯುನ್ನತ ಭದ್ರತೆಯ ಎನ್‌ಐಎ ಸೌಲಭ್ಯದಲ್ಲಿ ಏಕೆ ಬಂಧಿಸಿಡಲಾಗಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

ಕೇಂದ್ರ ಸರ್ಕಾರ ಮತ್ತು ಲಾರೆನ್ಸ್ ಬಿಷ್ಣೋಯ್ ನಡುವಿನ ಈ ‘ಅನುಕೂಲಕರ’ ವ್ಯವಸ್ಥೆಯ ಹಿಂದಿನ ನೈಜ ಉದ್ದೇಶವೇನು ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಗಳು ಮತ್ತು ಸರ್ಕಾರ ಉತ್ತರಿಸಬೇಕಾದ ತುರ್ತು ಅಗತ್ಯವಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಆಸ್ತಿ ಹರಾಜು ರದ್ದುಪಡಿಸುವ ಅಧಿಕಾರ ಸರ್ಕಾರಿ ಸಂಸ್ಥೆಗಳಿಗೆ ಇದೆ: ಸುಪ್ರೀಂ ಕೋರ್ಟ್

ಸಾರ್ವಜನಿಕ ಆಸ್ತಿಗಳ ಮಾರಾಟ ಅಥವಾ ಗುತ್ತಿಗೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದಾಯ ಗಳಿಸುವ...

ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿದ ಲಡಾಖ್ ಹೋರಾಟಗಾರರು; ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸಲು ನಿರ್ಧಾರ

ಲಡಾಖ್‌ಗೆ ಪ್ರತ್ಯೇಕ ವಿಧಾನಸಭೆ, ಹೆಚ್ಚಿನ ಶಾಸನಾಧಿಕಾರ ಹಾಗೂ ಸಂವಿಧಾನಾತ್ಮಕ ರಕ್ಷಣೆ ನೀಡಬೇಕೆಂಬ...