ರಾಜ್ಯದಲ್ಲಿ ಏಪ್ರಿಲ್ 26ರಂದು ಶುಕ್ರವಾರ ನಡೆಯುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಬದಲಿಸಬೇಕೆಂದು ಕೇರಳ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್ ಸಮಿತಿಯ ಉಸ್ತುವಾರಿ ಅಧ್ಯಕ್ಷ ಎಂ ಎಂ ಹಸನ್ ಹಾಗೂ ವಿಪಕ್ಷ ನಾಯಕ ವಿ ಡಿ ಸತೀಶನ್ ಅವರು ಕೇಂದ್ರ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಚುನಾವಣೆ ಹಮ್ಮಿಕೊಂಡಿರುವುದರಿಂದ ಹಲವು ಚುನಾವಣಾ ಅಧಿಕಾರಿಗಳು,ಮತಗಟ್ಟೆ ಏಜೆಂಟ್‌ಗಳು ಹಾಗೂ ಮತದಾರರಿಗೆ ಆನಾನುಕೂಲವಾಗುತ್ತದೆ. ಆದ ಕಾರಣ ಕೇರಳದ ಚುನಾವಣಾ ದಿನಾಂಕವನ್ನು ಬದಲಿಸಬೇಕು ಎಂದು ಹಸನ್ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು
ಕೇರಳದಲ್ಲಿ ಶುಕ್ರವಾರ ಹಾಗೂ ಭಾನುವಾರ ಚುನಾವಣೆಗಳನ್ನು ಹಮ್ಮಿಕೊಂಡರೆ ಹಲವರಿಗೆ ಅನಾನುಕೂಲವಾಗಲಿದೆ. ಈಸ್ಟರ್ ಅಥವಾ ರಂಜಾನ್ ಹಬ್ಬದ ದಿನಗಳಲ್ಲಿ ಮತದಾನವನ್ನು ಹಮ್ಮಿಕೊಳ್ಳದಿರುವುದೆ ಒಳ್ಳೆಯದು ಎಂದು ಹಸನ್ ತಿಳಿಸಿದ್ದಾರೆ.
ಕಾಂಗ್ರೆಸ್‌ನ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹಾಗೂ ಇತರ ಪ್ರಮುಖ ಮುಸ್ಲಿಂ ಸಂಘಟನೆಗಳು ಕೂಡ ಶುಕ್ರವಾರದಂದು ಚುನಾವಣಾ ದಿನಾಂಕವನ್ನು ಹಮ್ಮಿಕೊಳ್ಳುವುದರಿಂದ ಇಸ್ಲಾಂ ಸಮುದಾಯದ ಹಲವರು ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದರಿಂದ ಚುನಾವಣಾ ಕೆಲಸಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿತ್ತು.
ಬಿಜೆಪಿ ನಾಯಕರು ಕೂಡ ಚುನಾವಣಾ ದಿನಾಂಕವನ್ನು ಬದಲಿಸುವಂತೆ ಮನವಿ ಮಾಡಿದ್ದರು.
