ಮಹಿಳೆಯೊಬ್ಬರು 10 ವರ್ಷದ ನಂತರ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಪ್ರಕರಣವನ್ನು ಮಧ್ಯ ಪ್ರದೇಶ ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಬಗ್ಗೆ ಜುಲೈ 2ರಂದು ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಸಂಜಯ್ ದ್ವಿವೇದಿ, ಇಬ್ಬರು ಪರಸ್ಪರ 10 ವರ್ಷಗಳಿಗೂ ಹೆಚ್ಚು ಕಾಲ ಸ್ವಂತ ಇಚ್ಛೆಯಿಂದ ಸಂಬಂಧ ಹೊಂದಿದ್ದಾರೆ. ಪ್ರಕರಣದಲ್ಲಿ ಕಾನೂನಿನ ಪ್ರಕ್ರಿಯೆಯ ದುರುಪಯೋಗತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಅರ್ಜಿದಾರ ಮಹಿಳೆ ನವೆಂಬರ್ 2021ರಲ್ಲಿ ಕಾಂತಿ ಜಿಲ್ಲೆಯ ಮಹಿಳಾ ಠಾಣೆಗೆ ಅತ್ಯಾಚಾರ ಸೇರಿದಂತೆ ಎರಡು ಪ್ರಕರಣಗಳಲ್ಲಿ ದೂರು ನೀಡಿದ್ದರು. ಆರೋಪಿಯು ತಮಗೆ ಈ ಪ್ರಕರಣದಲ್ಲಿ ಮುಕ್ತಿ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಮಹಿಳೆ ಮತ್ತು ಪುರುಷ ಸುಶಿಕ್ಷಿತರಾಗಿದ್ದು, ತಮ್ಮ ಸ್ವಂತ ಇಚ್ಛೆ ಮೇಲೆ 10 ವರ್ಷಗಳಿಗೂ ಹೆಚ್ಚು ಕಾಲ ಸಂಬಂಧವಿಟ್ಟುಕೊಂಡಿದ್ದರು. ಮದುವೆಯಾಗಲು ಒಪ್ಪದ ಕಾರಣ ಸಂಬಂಧ ಮುರಿದುಬಿದ್ದಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣವನ್ನು ಐಪಿಸಿ 375ರ ಅಡಿಯಲ್ಲಿ ದಾಖಲಿಸಿರುವಂತೆ ಅತ್ಯಾಚಾರ ಪ್ರಕರಣವೆಂದು ಪರಿಗಣಿಸಲಾಗುವುದಿಲ್ಲ. ಇದು ಕಾನೂನಿನ ದುರುಪಯೋಗದಂತೆ ಕಂಡುಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಪುರುಷನ ವಿರುದ್ಧ ಐಪಿಸಿ ಸೆಕ್ಷನ್ 366(ಮದುವೆಗೆ ಒತ್ತಾಯಿಸಲು ಮಹಿಳೆಯನ್ನು ಪ್ರೇರೇಪಿಸುವುದು) ಅನ್ವಯವಾಗುವುದಿಲ್ಲ.ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಪಡಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.