ಮಹಾರಾಷ್ಟ್ರ ಚುನಾವಣೆ | ಗೆಲ್ಲುತ್ತಿರುವ ಶ್ರೀಮಂತ ಜಿಲ್ಲೆಗಳು ಮತ್ತು ಸೊರಗುತ್ತಿರುವ ಬಡ ಪ್ರದೇಶಗಳು

Date:

Advertisements

ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು ಅತೀ ಶ್ರೀಮಂತ ಹಾಗೂ ಶ್ರೀಮಂತ ಜಿಲ್ಲೆಗಳಿಗೆ ಹೆಚ್ಚಾಗಿ ಆರ್ಥಿಕ ಅಭಿವೃದ್ಧಿಯನ್ನು ವಿಸ್ತರಿಸುತ್ತಿದೆ. ಆದ್ದರಿಂದ ಜಿಲ್ಲೆಗಳ ಅಭಿವೃದ್ಧಿಯ ಜೊತೆಗೆ ಅವರ ಜೀವನ ಮಟ್ಟವು ಉತ್ತಮಗೊಳ್ಳುತ್ತಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ವಿಪಕ್ಷಗಳ ಮಹಾ ವಿಕಾಸ್‌ ಅಘಾಡಿ ಕೂಡ ತಾನು ಆಡಳಿತ ನಡೆಸಿದ ಅವಧಿಯಲ್ಲಿ ಅತ್ಯಂತ ಬಡ ಹಾಗೂ ಬಡ ಜಿಲ್ಲೆಗಳಿಗೆ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ವಿಸ್ತರಿಸುವ ಕೆಲಸ ಮಾಡಿಲ್ಲ. ಯೋಜನೆಗಳು, ಹಣಕಾಸು ನೆರವು ಹರಿದು ಬಂದರೂ ಜಿಲ್ಲೆಯಲ್ಲಿನ ಕೆಲವು ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರ ಜೇಬು ತುಂಬುತ್ತಿದೆ ವಿನಾ ಗ್ರಾಮಗಳ, ಪಟ್ಟಣಗಳ ಒಟ್ಟಾರೆ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ

ದೇಶದ ಮೂರನೇ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು(288) ಹೊಂದಿರುವ ಮಹಾರಾಷ್ಟ್ರಕ್ಕೆ ನವೆಂಬರ್‌ 20 ರಂದು ಚುನಾವಣೆ ನಡೆಯಲಿದೆ. ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈ ಹೊಂದಿರುವ ಮಹಾರಾಷ್ಟ್ರ, ಕಳೆದ 30 ವರ್ಷಗಳಿಂದ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ಕಂಡಿದೆ. 1985ರ ಚುನಾವಣೆಯ ನಂತರ ಯಾವೊಂದು ಪಕ್ಷ ಕೂಡ ಏಕೈಕ ಪಕ್ಷವಾಗಿ ಹೊರಹೊಮ್ಮಿಲ್ಲ, ಅಧಿಕಾರ ಹಿಡಿದಿಲ್ಲ. 1990ರಲ್ಲಿ ಕಾಂಗ್ರೆಸ್ 141 ಸ್ಥಾನ ಗಳಿಸಿದ್ದರೂ ಬಹುಮತದಿಂದ ಕೊಂಚ ಹಿಂದೆ ಇತ್ತು. ಹಾಗೆಯೇ 2019ರ ಚುನಾವಣೆಯಲ್ಲಿ ಬಿಜೆಪಿ 101 ಸೀಟುಗಳನ್ನು ಗೆಲ್ಲುವುದರ ಮೂಲಕ 20 ವರ್ಷಗಳ ನಂತರ ಶತಕ ದಾಟಿದ ಮೊದಲ ಪಕ್ಷ ಎನಿಸಿಕೊಂಡಿತ್ತು. ಹೀಗೆ ಮೂರು ದಶಕಗಳಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಹಲವಾರು ಬದಲಾವಣೆಗಳಾಗಿವೆ.

ಕಾಂಗ್ರೆಸ್, ಎನ್‌ಸಿಪಿ(ಶರದ್ ಪವಾರ್‌ ಬಣ), ಉದ್ಧವ್‌ ಠಾಕ್ರೆ ಶಿವಸೇನೆ ನೇತೃತ್ವದಲ್ಲಿ ‘ಮಹಾ ವಿಕಾಸ್‌ ಅಘಾಡಿ’ ಹಾಗೂ ಆಡಳಿತಾರೂಢ ಬಿಜೆಪಿ, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಹಾಗೂ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಬಣದ ಶಿವಸೇನೆ ಒಳಗೊಂಡ ‘ಮಹಾಯುತಿ’ ಸ್ಪರ್ಧೆಯಲ್ಲಿವೆ. ಇವೆರಡೂ ಮೈತ್ರಿಕೂಟಗಳು ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ. ಸೈದ್ಧಾಂತಿಕ ರಾಜಕೀಯ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ ಆದಾಯ ಅಸಮಾನತೆ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಶ್ರೀಮಂತ, ಮಧ್ಯಮ ಹಾಗೂ ಬಡ ಜಿಲ್ಲೆಗಳ ಮತದಾರರು ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಪಕ್ಷಗಳನ್ನು ಬೆಂಬಲಿಸಿದ್ದರು ಎನ್ನುವುದು ಕೂಡ ಚರ್ಚೆಯಲ್ಲಿದೆ.             

Advertisements

ಕಳೆದ ದಶಕದಲ್ಲಿ, ಮಹಾರಾಷ್ಟ್ರದ ಶ್ರೀಮಂತ ಜಿಲ್ಲೆಗಳು ಬಡ ಜಿಲ್ಲೆಗಳಿಗಿಂತ ಹೆಚ್ಚು ವೇಗವಾಗಿ ಮತ್ತಷ್ಟು ಶ್ರೀಮಂತವಾಗಿ ಅಭಿವೃದ್ಧಿ ಹೊಂದಿವೆ. ಇದಕ್ಕೆ ಕಾರಣವಾದ ಪ್ರಮುಖ ಅಂಶವೆಂದರೆ ಈ ಜಿಲ್ಲೆಗಳು ಸೇವಾ ಕ್ಷೇತ್ರದಲ್ಲಿ ತ್ವರಿತವಾಗಿ ಬೆಳವಣಿಗೆ ಹೊಂದುತ್ತಿವೆ. ಮತ್ತೊಂದೆಡೆ, ಬಡ ಜಿಲ್ಲೆಗಳಲ್ಲಿನ ಆರ್ಥಿಕತೆಯ ಗಣನೀಯ ಭಾಗವು ಕೃಷಿಯ ಮೇಲೆ ಅವಲಂಬಿತವಾಗಿದೆ. ಮಹಾರಾಷ್ಟ್ರದ ಆರ್ಥಿಕ ಮತ್ತು ಅಂಕಿಅಂಶಗಳ ನಿರ್ದೇಶನಾಲಯ ಹಾಗೂ ಲೋಕ ದಾಬ(ಡಿಇಎಸ್‌ಎಲ್‌ಡಿ) ಮಾದರಿ ವಿಶ್ಲೇಷಣೆ ವರದಿಗಳ ಪ್ರಕಾರ 2024ರ ಲೋಕಸಭೆ ಚುನಾವಣೆಯಲ್ಲಿ ಶ್ರೀಮಂತ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾರರು ‘ಎನ್‌ಡಿಎ’ಗೆ ಒಲವು ತೋರಿದರೆ, ಬಡ ಜಿಲ್ಲೆಗಳಲ್ಲಿನ ನಾಗರಿಕರು ‘ಇಂಡಿಯಾ’ ಒಕ್ಕೂಟದಲ್ಲಿ ನಂಬಿಕೆ ಇರಿಸಿದ್ದಾರೆ.

ಡಿಇಎಸ್‌ಎಲ್‌ಡಿ ಸಂಸ್ಥೆ ವಿಶ್ಲೇಷಣೆಯ ಉದ್ದೇಶಕ್ಕಾಗಿ, ಮಹಾರಾಷ್ಟ್ರದ ಜಿಲ್ಲೆಗಳನ್ನು ಅತ್ಯಂತ ಬಡವರು, ಬಡವರು, ಮಧ್ಯಮ ವರ್ಗ, ಶ್ರೀಮಂತರು ಮತ್ತು ಅತ್ಯಂತ ಶ್ರೀಮಂತ ಜಿಲ್ಲೆಗಳೆಂದು ಐದು ಆರ್ಥಿಕ ಗುಂಪುಗಳಾಗಿ ವಿಂಗಡಿಸಿದೆ. 2022-23ರ ಪ್ರಸ್ತುತ ತಲಾ ನಿವ್ವಳ ಜಿಲ್ಲೆಯ ದೇಶೀಯ ಉತ್ಪನ್ನದ (ಎನ್‌ಡಿಡಿಪಿ) ಆಧಾರದ ಮೇಲೆ ‘ಅತಿ ಶ್ರೀಮಂತ’ ವರ್ಗದಲ್ಲಿರುವ ಜಿಲ್ಲೆಗಳ ತಲಾ ಆದಾಯ 3 ಲಕ್ಷ ರೂ ಹೆಚ್ಚು ಹೊಂದಿವೆ. ‘ಶ್ರೀಮಂತ ವರ್ಗ’ದಲ್ಲಿರುವವರ ಜಿಲ್ಲೆಗಳಲ್ಲಿ ತಲಾ ಆದಾಯ 2.4 ಲಕ್ಷದಿಂದ 2.9 ಲಕ್ಷ ರೂ. ವರೆಗೂ ಇದೆ. ‘ಮಧ್ಯಮ’ ವರ್ಗದಲ್ಲಿರುವವರ ಜಿಲ್ಲೆಗಳಲ್ಲಿನ ತಲಾ ಆದಾಯ 2 ಲಕ್ಷದಿಂದ 2.3 ಲಕ್ಷದವರೆಗೂ ಇದೆ. ‘ಬಡ ವರ್ಗ’ದಲ್ಲಿರುವವರು ತಲಾ ಆದಾಯ 1.5 ಲಕ್ಷದಿಂದ 1.9 ಲಕ್ಷದವರೆಗೆ ಇದೆ. ‘ಅತ್ಯಂತ ಬಡ’ ವರ್ಗದಲ್ಲಿರುವವರ ತಲಾ ಆದಾಯ 1 ಲಕ್ಷ ರೂ.ಗಳಿಗಿಂತ ಕಡಿಮೆ ಇದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?

ಮಹಾರಾಷ್ಟ್ರದಲ್ಲಿ ಮುಂಬೈ, ಪುಣೆ ಮತ್ತು ಥಾಣೆ ಅತ್ಯಂತ ಶ್ರೀಮಂತ ಜಿಲ್ಲೆಗಳಾಗಿದ್ದರೆ; ನಂದೂರ್‌ಬಾರ್‌, ವಾಶಿಮ್, ಗಡ್‌ಚಿರೋಲಿ, ಯವತ್ಮಾಲ್, ಹಿಂಗೋಲಿ ಮತ್ತು ಬುಲ್ಧಾನಾ ಅತ್ಯಂತ ಬಡ ಜಿಲ್ಲೆಗಳಾಗಿವೆ. ಅತ್ಯಂತ ಬಡ ಹಾಗೂ ಶ್ರೀಮಂತ ಜಿಲ್ಲೆಗಳ ತಲಾ ಆದಾಯದ ಅಂತರವು 2011 -12ನೇ ಸಾಲಿನಲ್ಲಿ 97,357 ರೂ. ಇತ್ತು. ಕೋವಿಡ್‌ ಸಾಂಕ್ರಾಮಿಕ ಕಾಲದ ಮುಂಚಿನ ಮೂರು ವರ್ಷಗಳಲ್ಲಿ ತಲಾ ಆದಾಯದ ಅಂತರವು 1.7 ಲಕ್ಷ ರೂ. ಮೀರಿದೆ. ಕೋವಿಡ್‌ ವರ್ಷಗಳಲ್ಲಿ ತಲಾದಾಯದ ಮಟ್ಟವು ಸಮ ಪ್ರಮಾಣದಲ್ಲಿತ್ತು. 2022-23ರ ಅವಧಿಯಲ್ಲಿ ಆದಾಯ ಅಸಮಾನತೆ ಮತ್ತಷ್ಟು ಹೆಚ್ಚಾಗಿದ್ದು, ತಲಾದಾಯದ ಅಂತರ 2.4 ಲಕ್ಷ ರೂ. ಮೀರಿದೆ.   

ಒಂದು ದಶಕದ ಹಿಂದೆ ಹೋಲಿಸಿದರೆ 2022 -23ರಲ್ಲಿ ‘ಅತ್ಯಂತ ಬಡ’ ಜಿಲ್ಲೆಗಳ ಸರಾಸರಿ ತಲಾವಾರು ಕೇವಲ 75,000 ರೂ. ಮಾತ್ರ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ‘ಅತಿ ಶ್ರೀಮಂತ’ ವರ್ಗದಲ್ಲಿರುವವರ ತಲಾದಾಯವು 2.2 ಲಕ್ಷ ರೂ.ಗೆ ಏರಿಕೆಯಾಗಿದೆ. ಸರಳವಾಗಿ ಹೇಳುವುದಾದರೆ, ಮಹಾರಾಷ್ಟ್ರದ ಶ್ರೀಮಂತ ಜಿಲ್ಲೆಗಳು ಈ ಅವಧಿಯಲ್ಲಿ ರಾಜ್ಯದ ಬಡ ಜಿಲ್ಲೆಗಳಿಗಿಂತ ಮೂರು ಪಟ್ಟು ವೇಗವಾಗಿ ಶ್ರೀಮಂತವಾಗಿವೆ.

ವಿವಿಧ ಜಿಲ್ಲೆಗಳ ಆರ್ಥಿಕತೆಯ ಸಂಯೋಜನೆಯು ಜಿಲ್ಲೆಗಳ ದೇಶೀಯ ಉತ್ಪನ್ನದಲ್ಲಿನ ಕ್ಷಿಪ್ರ ಬದಲಾವಣೆಯನ್ನು ಸರಳವಾಗಿ ವಿವರಿಸಬಹುದು. ಸಂಯೋಜನೆಯನ್ನು ಮೂರು ವಲಯಗಳಲ್ಲಿ ಅಳೆಯಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಕೃಷಿ, ವೃತ್ತಿಪರ ಹಾಗೂ ವೃತ್ತಿಪರವಲ್ಲದ ಸೇವೆಗಳು ಮತ್ತು ಗಣಿಗಾರಿಕೆಯನ್ನು ಒಳಗೊಂಡಿರುತ್ತದೆ. ದ್ವಿತೀಯ ಹಂತವು ಉತ್ಪಾದನಾ ಉಪಯುಕ್ತತೆಗಳು, ನಿರ್ಮಾಣವನ್ನು ಒಳಗೊಂಡಿದೆ ಮತ್ತು ತೃತೀಯ ಹಂತದ ಸೇವೆಗಳು, ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಹಣಕಾಸು, ರಿಯಲ್ ಎಸ್ಟೇಟ್ ಮುಂತಾದವುಗಳನ್ನು ಒಳಗೊಂಡಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತೃತೀಯ ಅಥವಾ ಸೇವಾ ವಲಯದ ಕಡೆಗೆ ಗಮನಾರ್ಹ ಬದಲಾವಣೆಯಾಗಿದೆ. ವಿಶೇಷವಾಗಿ ‘ಅತ್ಯಂತ ಶ್ರೀಮಂತ’ ಜಿಲ್ಲೆಗಳಲ್ಲಿ ಸೇವಾ ವಲಯವು ಆರ್ಥಿಕ ಅಭಿವೃದ್ಧಿಯಲ್ಲಿ ಶೇ.68 ರಷ್ಟು ಕೊಡುಗೆ ನೀಡುತ್ತದೆ. 2011-12ರಲ್ಲಿ ಹಾಗೂ ಇಂದಿನ ಸೇವಾ ವಲಯದ ಬದಲಾವಣೆಯ ಪ್ರಗತಿ ಶೇ. 56 ರಷ್ಟು ಹೆಚ್ಚಾಗಿದೆ. ಶ್ರೀಮಂತ ಜಿಲ್ಲೆಗಳಲ್ಲೂ ಕೂಡ ಶೇ.61 ರಿಂದ 49ರವರೆಗೆ ಬದಲಾವಣೆಗಳಾಗಿವೆ. ಶ್ರೀಮಂತ ಹಾಗೂ ಅತೀ ಶ್ರೀಮಂತ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಲಯಗಳ ಮೇಲಿನ ಅವಲಂಬನೆ ಬಹುತೇಕ ಕಡಿಮೆಯಾಗಿದೆ.

ಬಡ ಜಿಲ್ಲೆಗಳಲ್ಲಿ ಸೇವಾ ವಲಯಗಳ ಬಹುತೇಕ ಚಟುವಟಿಕೆಗಳು ಗಮನಾರ್ಹವಾಗಿ ಕಡಿಮೆಯಿದೆ. 2022-23ರ ಅವಧಿಯಲ್ಲಿ ಸರಕು ಸೇವೆಗಳ ಮೌಲ್ಯ ಶೇ. 50ರಷ್ಟು ಕಡಿಮೆಯಿದೆ. ಆದರೆ ಆರ್ಥಿಕ ಅಭಿವೃದ್ಧಿಗೆ ಕೃಷಿ ಕ್ಷೇತ್ರದಲ್ಲಿ ನಾಲ್ಕನೇ ಒಂದು ಭಾಗವನ್ನು ನೀಡುತ್ತದೆ.   

ಡಿಇಎಸ್‌ಎಲ್‌ಡಿ ವಿಶ್ಲೇಷಣೆಯ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟಕ್ಕೆ ಅತ್ಯಂತ ಶ್ರೀಮಂತ, ಶ್ರೀಮಂತ ಜಿಲ್ಲೆಯ ಮತದಾರರು ಕ್ರಮವಾಗಿ ಶೇ. 48 ಹಾಗೂ ಶೇ. 46 ರಷ್ಟು ಮತಗಳನ್ನು ನೀಡಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಗೆ ಅತ್ಯಂತ ಬಡ ಹಾಗೂ ಬಡ ವರ್ಗದ ಜಿಲ್ಲೆಗಳ ಮತದಾರರು ಕ್ರಮವಾಗಿ ಶೇ.45 ಹಾಗೂ ಶೇ. 44 ಮತಗಳನ್ನು ನೀಡಿದ್ದಾರೆ. ಮಧ್ಯಮ ವರ್ಗದ ಜಿಲ್ಲೆಗಳ ಮತದಾರರು ಮಹಾಯುತಿಗೆ ಶೇ.43 ಹಾಗೂ ಮಹಾ ವಿಕಾಸ್ ಅಘಾಡಿ(ಎಂವಿಎ) ಒಕ್ಕೂಟಕ್ಕೆ ಮಧ್ಯಮ ವರ್ಗದ ಜಿಲ್ಲೆಗಳಿಂದ ಶೇ.44 ಮತಗಳು ಲಭಿಸಿವೆ.   

ಈ ಅಂಕಿಅಂಶಗಳಿಂದ ತಿಳಿದು ಬರುವ ಮುಖ್ಯವಾದ ಮಾಹಿತಿ ಎಂದರೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು ಅತೀ ಶ್ರೀಮಂತ ಹಾಗೂ ಶ್ರೀಮಂತ ಜಿಲ್ಲೆಗಳಿಗೆ ಹೆಚ್ಚಾಗಿ ಆರ್ಥಿಕ ಅಭಿವೃದ್ಧಿಯನ್ನು ವಿಸ್ತರಿಸುತ್ತಿದೆ. ಆದ್ದರಿಂದ ಜಿಲ್ಲೆಗಳ ಅಭಿವೃದ್ಧಿಯ ಜೊತೆಗೆ ಅವರ ಜೀವನ ಮಟ್ಟವು ಉತ್ತಮಗೊಳ್ಳುತ್ತಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ವಿಪಕ್ಷಗಳ ಮಹಾ ವಿಕಾಸ್‌ ಅಘಾಡಿ ಕೂಡ ತಾನು ಆಡಳಿತ ನಡೆಸಿದ ಅವಧಿಯಲ್ಲಿ ಅತ್ಯಂತ ಬಡ ಹಾಗೂ ಬಡ ಜಿಲ್ಲೆಗಳಿಗೆ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ವಿಸ್ತರಿಸುವ ಕೆಲಸ ಮಾಡಿಲ್ಲ. ಯೋಜನೆಗಳು, ಹಣಕಾಸು ನೆರವು ಹರಿದು ಬಂದರೂ ಜಿಲ್ಲೆಯಲ್ಲಿನ ಕೆಲವು ರಾಜಕಾರಣಿಗಳು, ಉದ್ಯಮಿಗಳು, ಶ್ರೀಮಂತರ ಜೇಬು ತುಂಬುತ್ತಿದೆ ವಿನಾ ಗ್ರಾಮಗಳ, ಪಟ್ಟಣಗಳ ಒಟ್ಟಾರೆ ಅಭಿವೃದ್ಧಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ಕರ್ನಾಟಕದಲ್ಲೂ ಇದೇ ರೀತಿಯ ವಾತಾವರಣ ಕಳೆದ 50 ವರ್ಷಗಳಿಂದಲೂ ಇದೆ. ದಕ್ಷಿಣ ಕರ್ನಾಟಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದರೆ, ಉತ್ತರ ಕರ್ನಾಟಕ ಹಿಂದುಳಿಯುತ್ತಲೆ ಇದೆ. ಕೇಂದ್ರದಿಂದ 371 ಜೆ, ರಾಜ್ಯದಿಂದ ಹೆಚ್ಚಿನ ಹಣಕಾಸು ನೆರವು ದೊರೆತರೂ ಅಭಿವೃದ್ಧಿ ಮಾತ್ರ ಅಲ್ಲಿನ ಜನರಿಗೆ ಗಗನಕುಸುಮವಾಗಿದೆ. ಆದರೆ ಕೆಲವು ರಾಜಕಾರಣಿಗಳು, ಶ್ರೀಮಂತರು, ಬಂಡವಾಳಶಾಹಿಗಳ ಕೋಟಿಗಳು ವರ್ಷದಿಂದ ವರ್ಷಕ್ಕೆ ನೂರಾರು, ಸಾವಿರಾರು ಕೋಟಿಗಳಾಗುತ್ತಿವೆ.

ಬಿಜೆಪಿ ನೇತೃತ್ವದ ಪಕ್ಷ ತಾನು ಅಧಿಕಾರಕ್ಕೆ ಬಂದಾಗಲೆಲ್ಲ ಅತೀ ಹೆಚ್ಚು ಶ್ರೀಮಂತರು, ಶ್ರೀಮಂತರು ಹಾಗೂ ಮೇಲ್‌ ಮಧ್ಯಮವರ್ಗದವರ ಓಲೈಕೆಯತ್ತಲೆ ಹೆಚ್ಚು ಗಮನ ಹರಿಸುತ್ತಿದೆ. ಶೋಷಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಳೆದ ಮೂರು ವರ್ಷಗಳಲ್ಲಿ ಇವೆಲ್ಲವನ್ನು ಮಹಾರಾಷ್ಟ್ರ ಜನತೆ ಗಮನಿಸಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿಗೆ ಹೆಚ್ಚು ಲಾಭವಾಗುವ ಸಾಧ್ಯತೆಯಿದೆ. ಆದರೂ, ನವೆಂಬರ್‌ 23 ರ ಫಲಿತಾಂಶವನ್ನು ಕಾಯಲೇಬೇಕಾಗಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X