ಆಂಧ್ರ ಪ್ರದೇಶ | ಪುಟ್ಟ ಮಕ್ಕಳು ಮಾತಾಡಿದಂತೆ ಪವನ್ ‌ಕಲ್ಯಾಣ್ ಮಾತನಾಡಬಾರದು: ಮಂದಕೃಷ್ಣ ಮಾದಿಗ ಆಕ್ರೋಶ

Date:

Advertisements

ಪವನ್ ಕಲ್ಯಾಣ್ ಖಾತೆಯಲ್ಲಿ ಏನಾದರೂ ಲೋಪ ದೋಷಕಂಡು ಬಂದರೆ, ಬೇರೆ ಸಚಿವರು ಬಂದು ಆ ಖಾತೆಯನ್ನು ನಾನು ನಿಭಾಯಿಸುತ್ತೇನೆ ಎಂದರೆ ಹೇಗಿರುತ್ತದೆ? ಕ್ಯಾಬಿನೆಟ್ ಅಂದರೆ ಒಂದು ಕುಟುಂಬ ಇದ್ದಹಾಗೆ. ಅದನ್ನು ಕುಟುಂಬದಲ್ಲಿಯೇ ಚರ್ಚಿಸಿಕೊಳ್ಳಬೇಕು. ಚಿಕ್ಕಮಕ್ಕಳ ರೀತಿ ಬಜಾರಿನಲ್ಲಿ ಬಂದು ಮಾತನಾಡಬಾರದು. ಜನಸೇನಾ ಎಂದರೆ ಕಮ್ಮ, ಕಾಪು ಎರಡು ಜಾತಿಗಳಿಗೆ ಸೀಮಿತನಾ ಅಥವಾ ಎಲ್ಲರ ಪಕ್ಷವ ಎಂದು ದಲಿತ ಸಮುದಾಯದ ಹಿರಿಯ ಮುಖಂಡ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸ್ಥಾಪಕ ಮಂದಕೃಷ್ಣ ಮಾದಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಳಮೀಸಲಾತಿ ವಿಚಾರವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಭೇಟಿಯಾಗಿ ಒಳಮೀಸಲಾತಿ ಜಾರಿಯಾಗುವವರಿಗೂ ಉದ್ಯೋಗ ಅಧಿಸೂಚನೆಗಳನ್ನು ಹೊರಡಿಸಬಾರದು ಮತ್ತು ಇತರೆ 31 ಅಂಶಗಳ ಕುರಿತು ಚರ್ಚಿಸಿ ಹೊರಬಂದು ಪತ್ರಕರ್ತರ ಪ್ರಶ್ನೆಗಳಿಗೆ ಮಂದಕೃಷ್ಣ ಮಾದಿಗ ಉತ್ತರಿಸಿದ್ದಲ್ಲದೇ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾತಿನ ಧಾಟಿಯ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತಿಚಿಗೆ ಪವನ್‌ಕಲ್ಯಾಣ್ ನಾನೇದರೂ ಗೃಹಮಂತ್ರಿ ಆಗಿದ್ದರೆ ಆ ಕಥೆಯೇ ಬೇರೆ ಇತ್ತು. ಈಗಲೂ ಆ ಖಾತೆಯನ್ನು ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ ಎಂದು ಅವರದೇ ಸರ್ಕಾರದ ಒಂದು ಖಾತೆಯ ಬಗ್ಗೆ ವಿವಾದಾಸ್ಪದವಾಗಿ ಮಾತನಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀರ್ವ ಸ್ವರೂಪದ ಚರ್ಚೆಗೆ ಕಾರಣವಾಗುತ್ತಿದೆ.

Advertisements

ಈ ವಿಷಯದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಂದಕೃಷ್ಣ ಮಾದಿಗ, “ಗೃಹಮಂತ್ರಿ ಅನಿತಾ ವಂಗಲಪೂಡಿ ಮಾದಿಗ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು. ಆಕೆಯನ್ನು ಅವಮಾನಿಸುವ ರೀತಿಯಲ್ಲಿ ಪವನ್‌ ಕಲ್ಯಾಣ್ ಮಾತನಾಡಿರುವುದು ದುರದೃಷ್ಟಕರ” ಎಂದು ಕಿಡಿಕಾರಿದ್ದಾರೆ.

“ಶಾಂತಿ ಭದ್ರತೆಗೆ ಧಕ್ಕೆ ಆಗುತ್ತಿದ್ದರೆ ಅದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಎಲ್ಲರೂ ಜವಾಬ್ದಾರಿಯೇ ಆಗುತ್ತಾರೆ. ಸಾರ್ವಜನಿಕ ಸಭೆಯಲ್ಲಿ ಈ ರೀತಿ ಮಾತನಾಡಿರುವುದು ದುರದೃಷ್ಟಕರ. ನಮ್ಮ ಸಮುದಾಯ ಜನರು ಪವನ್‌ ಕಲ್ಯಾಣ್ ಅವರ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.

WhatsApp Image 2024 11 06 at 11.35.47 AM 1

“ಕ್ಯಾಬಿನೆಟ್ ಎಂಬುದು ಕುಟುಂಬ ಇದ್ದಹಾಗೆ. ಅದನ್ನು ಅದರ ಒಳಗೆಯೇ ಚರ್ಚೆ ಮಾಡಿಕೊಳ್ಳಬೇಕು. ಚಿಕ್ಕಮಕ್ಕಳ ಹಾಗೆ ಬೀದಿಯಲ್ಲಿ ನಿಂತು ಮಾತಾಡಬಾರದು” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಂದಕೃಷ್ಣ ಮಾದಿಗ, “ಇವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ಒಬ್ಬ ದಲಿತನಿಗಾದರೂ ಅವರು ಸೀಟು ಕೊಟ್ಟಿದ್ದಾರ? ಚುನಾವಣಾ ಸಮಯದಲ್ಲಿಯೇ ಆತನ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದೇವೆ. ಮಾದಿಗ ಸಮುದಾಯಕ್ಕೆ ಒಂದು ಸೀಟು ಕೊಟ್ಟಿಲ್ಲ. ಜನಸೇನಾದಿಂದ ಮೂರು ಜನ ಸಚಿವರಲ್ಲಿ ಒಂದು ಸಚಿವ ಸ್ಥಾನವನ್ನಾದರೂ ಎಸ್ಸಿ,ಎಸ್ಟಿ, ಬಿಸಿಗೆ ಕೊಡಬಹುದಿತ್ತು ಆದರೆ ಕೊಟ್ಟಿಲ್ಲ” ಎಂದು ಜರೆದಿದ್ದಾರೆ.

ಇದನ್ನು ಓದಿದ್ದೀರಾ? ಉಡುಪಿ | ವಕ್ಫ್ ವಿರುದ್ಧ ರಾಜಕೀಯ ಪ್ರೇರಿತ ಆರೋಪ: ಮುಸ್ಲಿಂ ಬಾಂಧವ್ಯ ವೇದಿಕೆಯ ಮುಖಂಡ ಮುಷ್ತಾಕ್ ಹೆನ್ನಾಬೈಲ್

ಜನಸೇನಾ ಪಕ್ಷ ಕೇವಲ ಕಮ್ಮ, ಕಾಪು ಎರಡು ಸಮುದಾಯಗಳಿಗೆ ಮಾತ್ರ ಸೀಮಿತವಾ? ಅವರು ಮಾತ್ರವಲ್ಲ ಎಲ್ಲರೂ ಮತಹಾಕಿದ್ದಾರೆ ಎಂಬುದು ಮರೆಯಬಾರದು. ಕಾಪು ಸಮುದಾಯ ದೊಡ್ಡಣ್ಣನ ಪಾತ್ರ ಪೋಷಿಸಬೇಕು ಎಂದು ಹೇಳುತ್ತಾರೆ ಎಂದು ಪತ್ರಕರ್ತರು ಹೇಳಿದಾಗ, “ದೊಡ್ಡಣ್ಣ ಅಂದರೆ ಎಲ್ಲರಿಗೂ ಅವಕಾಶಗಳನ್ನು ಕೊಟ್ಟು ಸಲಹುವುದು. ಅವರು ಕಾಪು ಸಮುದಾಯಕ್ಕೆ ಮಾತ್ರ ದೊಡ್ಡಣ್ಣ. ನಮಗಲ್ಲ” ಎಂದು ದಲಿತ ಸಮುದಾಯದ ಹಿರಿಯ ಮುಖಂಡ ಮಂದಕೃಷ್ಣ ಮಾದಿಗ ಪ್ರತ್ಯುತ್ತರ ನೀಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X