ದೆಹಲಿಯ ಸರಿತಾ ವಿಹಾರ್ನಲ್ಲಿ ಸಂಚರಿಸುತ್ತಿದ್ದ ತಾಜ್ ಎಕ್ಸ್ಪ್ರೆಸ್ ರೈಲಿನ ಮೂರು ಕೋಚ್ಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ.ದೆಹಲಿಯ ಅಗ್ನಿಶಾಮಕ ದಳದ ವರದಿಯ ಪ್ರಕಾರ ಇಲ್ಲಿಯವರೆಗೂ ಸಾರ್ವಜನಿಕರಿಗೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಐದು ಅಗ್ನಿ ಶಾಮಕದಳದ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ರೈಲ್ವೆ ಇಲಾಖೆಯ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಅಗ್ನಿ ದುರಂತದಲ್ಲಿ ಇಲ್ಲಿಯವರೆಗೂ ಸಾರ್ವಜನಿಕರಿಗೆ ಯಾವುದೇ ಅನಾಹುತಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
“ಸಂಜೆ 4.41ರ ವೇಳೆಗೆ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ಬಗ್ಗೆ ದೂರವಾಣಿ ಕರೆ ಬಂತು. ಸ್ಥಳಕ್ಕೆ ಆಗಮಿಸಿದಾಗ ತಾಜ್ ಎಕ್ಸ್ಪ್ರೆಸ್ ರೈಲಿನಲ್ಲಿನ ಮೂರು ಕೋಚ್ಗಳಿಗೆ ಬೆಂಕಿ ಹೊತ್ತುಕೊಂಡಿತ್ತು.ರೈಲನ್ನು ನಿಲ್ಲಿಸಲಾಗಿದ್ದು, ರೈಲಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಕೋಚ್ಗೆ ಹಾಗೂ ಕೆಳಗೆರ ಇಳಿಸಲಾಯಿತು. ರೈಲ್ವೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.
