ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಮುಖ ಚುನಾವಣಾ ವಿಷಯವಾಗಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿಯ ಯಾವುದೇ ಮುಖಂಡರು ಹೇಳಿಕೆ ನೀಡಲು ಬಯಸುತ್ತಿಲ್ಲ. ಅಲ್ಲದೇ, ಈ ಬಗ್ಗೆ ಗೋದಿ ಮಾಧ್ಯಮಗಳು ಕೂಡ ಬಿಜೆಪಿಗರಿಗೆ ಕಠಿಣ ಪ್ರಶ್ನೆಗಳನ್ನು ಕೇಳುತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ.
ಈ ನಡುವೆ ಯೂಟ್ಯೂಬರ್ ಒಬ್ಬ ಉತ್ತರ ಪ್ರದೇಶದ ಬಿಜೆಪಿ ಅಭ್ಯರ್ಥಿಯ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿರುವುದಲ್ಲದೇ, ಟ್ರೋಲ್‌ಗೂ ಕೂಡ ಗುರಿಯಾಗಿದ್ದಾರೆ.
ನಿರುದ್ಯೋಗದ ಕುರಿತು ಹೇಳಿಕೆ ನೀಡುವ ಸಂದರ್ಭ ಬಿಜೆಪಿ ಸಂಸದ ದಿನೇಶ್ ಲಾಲ್ ಯಾದವ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಯೂಟ್ಯೂಬರ್ ಓರ್ವರ ಜೊತೆ ಮಾತನಾಡಿರುವ ದಿನೇಶ್ ಲಾಲ್ ಯಾದವ್, “ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಂಥ ಹಿರಿಯ ಬಿಜೆಪಿ ನಾಯಕರು ಮಕ್ಕಳು ಹುಟ್ಟಿಸದೆ ನಿರುದ್ಯೋಗ ನಿಲ್ಲಿಸಿದ್ದಾರೆ” ಎಂದು ಹೇಳಿದ್ದಾರೆ.
“मोदी जी-योगी जी ने एक भी बच्चा पैदा नही किया ताकि देश में बेरोजगारी न बढ़े’: BJP सांसद निरहुआ 🤣 pic.twitter.com/5oSPa15yv4
— Srinivas BV (@srinivasiyc) April 15, 2024
“ಮೋದಿ ಅಥವಾ ಯೋಗಿಗೆ ಒಬ್ಬರಾದರೂ ಮಕ್ಕಳಿದ್ದಾರೆಯೆ ಹೇಳಿ? ಅವರು ನಿರುದ್ಯೋಗವನ್ನು ತಡೆದಿದ್ದಾರೆ. ಈಗ ಹೇಳಿ ಯಾರು ನಿರುದ್ಯೋಗವನ್ನು ಹೆಚ್ಚಿಸುತ್ತಿದ್ದಾರೆ? ಮಕ್ಕಳಿಗೆ ಜನ್ಮ ನೀಡುವವರು ನಿರುದ್ಯೋಗ ಹೆಚ್ಚಳಕ್ಕೆ ಕಾರಣ. ಮಕ್ಕಳಿಗೆ ಜನ್ಮ ನೀಡುವುದನ್ನು ತಡೆಯಿರಿ ಎಂದು ಸರಕಾರ ಹೇಳುತ್ತಲೇ ಇದೆ. ಆದರೆ, ಅವರು ಅದಕ್ಕೆ ಒಪ್ಪುತ್ತಿಲ್ಲ. ಒಂದರ ನಂತರ ಒಂದು ಮಗುವಿಗೆ ಜನ್ಮ ನೀಡುತ್ತಿರುವ ಜನರೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣ” ಎಂದು ಯಾದವ್ ವಿಚಿತ್ರ ಹೇಳಿಕೆ ನೀಡಿದ್ದಾರೆ.
ಯಾದವ್ ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಯಾದವ್ ಅವರ ಸಂವೇದನಾರಹಿತ ಹೇಳಿಕೆಗೆ ವ್ಯಾಪಕ ಟೀಕೆಗೆ ವ್ಯಕ್ತವಾಗಿದೆ. ಅವರು ಹೇಳಿಕೆಯು ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿಕೊಂಡಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
This video is fake. The Congress, like in MP, is using deepfakes to mislead people, create unrest and sow divisions in the society. Dinesh Lal Yadav, BJP MP from Azamgarh, is filing FIR against IYC President, who is a habitual offender. Complaint also being filed with @ECISVEEP.… https://t.co/MMrvXSw5mc
— Amit Malviya (मोदी का परिवार) (@amitmalviya) April 15, 2024
ಈ ಕುರಿತು ಪ್ರತಿಕ್ರಿಯಿಸಿರುವ ಓರ್ವ ನೆಟ್ಟಿಗರು, “ಬಿಜೆಪಿಯ ಪ್ರಕಾರ, ನಿರುದ್ಯೋಗ ಬಿಜೆಪಿಯ ತಪ್ಪಲ್ಲ. ನೀವು ಹುಟ್ಟದೆ ಇದ್ದಿದ್ದರೆ, ನಿಮಗೆ ಉದ್ಯೋಗದ ಅವಶ್ಯಕತೆ ಬೀಳುತ್ತಿರಲಿಲ್ಲ” ಎಂದು ವ್ಯಂಗ್ಯವಾಡಿದರೆ, “ನೀವೇಕೆ ಜನಿಸಿದಿರಿ? ನೀವು ಹುಟ್ಟಿರುವುದೇ ತಪ್ಪು” ಎಂದು ಮತ್ತೊಬ್ಬ ನೆಟ್ಟಿಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಮೊದಲು ಕಾಂಗ್ರೆಸ್ ಮುಖಂಡ ಬಿ ವಿ ಶ್ರೀನಿವಾಸ್ ಹಂಚಿಕೊಂಡಿದ್ದರು. ವಿಡಿಯೋ ವೈರಲಾಗುತ್ತಿದ್ದಂತೆಯೇ ಬಿಜೆಪಿಗೆ ಇದು ಮುಜುಗರ ತರಿಸಿದೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಸೇರಿದಂತೆ ಹಲವು ಬಿಜೆಪಿ ಮುಖಂಡರು, ” ಇದು ಫೇಕ್ ವೀಡಿಯೊ. ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಚುನಾವಣಾ ಆಯೋಗವನ್ನು ತಮ್ಮ ಪೋಸ್ಟ್‌ಗೆ ಟ್ಯಾಗ್ ಮಾಡಿ ಆಗ್ರಹಿಸಿದ್ದರು.
You know why Godi media doesn’t ask (is scared to?) hard hitting questions to Govt in Power?
When a YouTuber asked a basic question on unemployment to the BJP Azamgarh MP candidate. Here’s how he responds…‘Have less kids to end the problem of unemployment’
‘Modi and Yogi… pic.twitter.com/cW8blk6Pms— Mohammed Zubair (@zoo_bear) April 15, 2024
ಬಳಿಕ ಇದರ ಫ್ಯಾಕ್ಟ್‌ಚೆಕ್ ನಡೆಸಿದ ಆಲ್ಟ್ ನ್ಯೂಸ್‌ನ ಪತ್ರಕರ್ತ ಮುಹಮ್ಮದ್ ಝುಬೇರ್, ಇದು ಫೇಕ್ ಅಲ್ಲ. ನೈಜ ವಿಡಿಯೋ ಎಂದು ಉಲ್ಲೇಖಿಸಿ, ಪೂರ್ಣ ವಿಡಿಯೋವನ್ನು ಹಂಚಿಕೊಂಡಿದ್ದು, “ಗೋದಿ ಮಾಧ್ಯಮಗಳು ಬಿಜೆಪಿಯವರಲ್ಲಿ ನೈಜ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳುವುದಿಲ್ಲ. ಆದರೆ, ಯೂಟ್ಯೂಬರ್ ಒಬ್ಬರು ಆಝಂಗಢ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ನಿರುದ್ಯೋಗದ ಬಗ್ಗೆ ಸಾಮಾನ್ಯ ಪ್ರಶ್ನೆಯನ್ನು ಕೇಳಿದಾಗ ಅವರ ಪ್ರತಿಕ್ರಿಯೆ ಇದು” ಎಂದು ತಿಳಿಸಿದ್ದಾರೆ.
ಎಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ದಿನೇಶ್ ಲಾಲ್ ಯಾದವ್ ಅವರು ಉತ್ತರ ಪ್ರದೇಶದ ಆಝಂಗಢದಿಂದ ಸ್ಪರ್ಧಿಸುತ್ತಿದ್ದಾರೆ. ಮೇ 25ರಂದು ನಡೆಯಲಿರುವ ಆರನೆ ಹಂತದ ಚುನಾವಣೆಯಲ್ಲಿ ಅಝಂಗಢದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
