ರಷ್ಯಾದಿಂದ ನಾವು ಹಲವು ಬಾರಿ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಂಡಿದ್ದೇವೆ. ಇದು 12ಕ್ಕೂ ಹೆಚ್ಚು ಬಾರಿಯಿರಬೇಕು. ಇದು ಸ್ನೇಹವೊ ಅಥವಾ ಗುಲಾಮಗಿರಿಯೋ? ಮೋದಿ ರಷ್ಯಾಕ್ಕೆ ದಿಗ್ಬ್ರಮೆಗೊಳಿಸುವ ರೀತಿ ಮಾರಾಟವಾಗಿದ್ದಾರೆ ಎಂದು ಬಿಜೆಪಿಯ ಮಾಜಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ಮೋದಿ ಬಳಕೆಯಲ್ಲಿಲ್ಲದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ರಷ್ಯಾಕ್ಕೆ ತೆರಳಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ರಷ್ಯಾವು ತನ್ನ ಹಳೆಯ ಸ್ನೇಹಿತ ಚೀನಾಕ್ಕೆ 8 ವರ್ಷದ ಹಿಂದೆಯೇ ಮಾರಾಟ ಮಾಡಿದೆ. ಮೋದಿ ಖರೀದಿ ಮಾಡುತ್ತಿರುವ ಶಸ್ತ್ರಗಳು ಈಗ ನಿರುಪಯುಕ್ತವಾಗಿವೆ. ಚೀನಾವು ರಷ್ಯಾದಿಂದ ಅತ್ಯಾಧುನಿಕ ಶಸ್ತ್ರಗಳನ್ನು ಖರೀದಿಸುತ್ತಿದೆ. ಇವು ಭಾರತಕ್ಕೆ ಲಭ್ಯವಾಗುವುದಿಲ್ಲ. ಈ ವಿಷಯ ಖಂಡಿತಾ ನಮ್ಮ ಸಂಸತ್ತಿನಲ್ಲಿ ಚರ್ಚೆಯಾಗಬೇಕಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
ಪುಟಿನ್ ಅವರು ಮಾನಸಿಕವಾಗಿ ಹಾಗೂ ಮಿಲಿಟರಿಯಾಗಿ ಚೀನಾದ ಕ್ಸಿಯವರ ಸ್ನೇಹಿತ. ಒಂದು ವೇಳೆ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದರೆ ರಷ್ಯಾ ತನ್ನ ಮಿತ್ರ ರಾಷ್ಟ್ರಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಮೋದಿ ಚೀನಾಕ್ಕೆ ನಡುಗುತ್ತಿದ್ದು, ಪುಟಿನ್ ಅವರಲ್ಲಿ ಕಾಪಾಡಿ ಎಂದು ಬೇಡಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?
ಚೀನಾವು ವಿಶ್ವದಲ್ಲಿ ಮಿಲಿಟರಿಗಾಗಿ ಅತ್ಯಂತ ಹೆಚ್ಚು ಹಣ ವೆಚ್ಚ ಮಾಡುತ್ತಿರುವ ಎರಡನೇ ರಾಷ್ಟ್ರವಾಗಿದೆ. ಭಾರತ ಹಾಗೂ ಅಮೆರಿಕದಿಂದ ಮತ್ತಷ್ಟು ಮನಸ್ತಾಪ ಎದುರಾದ ಮೇಲೆ ಇತ್ತೀಚಿನ ವರ್ಷಗಳಲ್ಲಿ ತನ್ನ ರಕ್ಷಣಾ ವೆಚ್ಚವನ್ನು ಮತ್ತಷ್ಟು ಏರಿಸುತ್ತಿದೆ.
2023ರಲ್ಲಿ ಅಂದಾಜು 296 ಬಿಲಿಯನ್ ಡಾಲರ್ ಹಣವನ್ನು ಮಿಲಿಟರಿ ಬಳಕೆಗಾಗಿ ಚೀನಾ ವೆಚ್ಚ ಮಾಡಿದೆ. ಇದು 2022ಕ್ಕಿಂತ ಶೇ.6 ರಷ್ಟು ಹೆಚ್ಚು. ಅಲ್ಲದೆ ಕಳೆದ 29 ವರ್ಷಗಳಿಂದ ಮಿಲಿಟರಿ ವೆಚ್ಚಕ್ಕಾಗಿ ಅತ್ಯಂತ ಹೆಚ್ಚು ಹಣವನ್ನು ವೆಚ್ಚ ಮಾಡುತ್ತ ಬಂದಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ, ಮಿಲಿಟರಿಗಾಗಿ ವಾರ್ಷಿಕ 83.6 ಬಿಲಿಯನ್ ಡಾಲರ್ ವೆಚ್ಚ ಮಾಡುವ ಭಾರತ ನಾಲ್ಕನೇ ಸ್ಥಾನದಲ್ಲಿದೆ. ರಷ್ಯಾ 109 ಬಿಲಿಯನ್ ಡಾಲರ್ ವೆಚ್ಚ ಮಾಡುವುದರೊಂದಿಗೆ ರಕ್ಷಣಾ ವೆಚ್ಚದಲ್ಲಿ ಮೂರನೇ ಸ್ಥಾನದಲ್ಲಿದೆ.
ಆಪ್ತ ಗೆಳೆಯ ಬಂಡವಾಳಿಗರಿಗೆ ಬ್ಯುಸಿನೆಸ್ ಕೊಡಿಸಲು ಹೋಗಿರಬೇಕು,,, ಚುನಾವಣೆಯಲ್ಲಿ ಚಂದಾ ಕೊಟ್ಟವರು ಸುಮ್ಮನೆ ಬಿಡುವುದಾ