ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

Date:

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ ಮುಂಬರುವ ಮುಂಗಾರು ಅಧಿವೇಶನದಲ್ಲಿ ದನಿ ಎತ್ತರಿಸಿ ಸದ್ದು ಮಾಡಲು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ಸಿಕ್ಕ ಸುಲಭದ ಸರಕಾಗಿದೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಕೂಡ ಬರ, ಮಳೆ, ಡೆಂಘೀಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲಾಗದೆ, ಒಳಜಗಳಕ್ಕೇ ಒತ್ತುಕೊಡತೊಡಗಿದೆ.

ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ, ಕಿತ್ತಾಟ, ಕಾಲೆಳೆದಾಟ ಜೋರಾಗಿದೆ. ಮಗಳನ್ನು ಗೆಲ್ಲಿಸಿಕೊಂಡ ಸತೀಶ್ ಜಾರಕಿಹೊಳಿ, ಗೆದ್ದ ಹುಮ್ಮಸ್ಸಿನಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮೊದಲಿಗೆ ದನಿ ಎತ್ತಿದರು. ತಾವೇ ಮುಂದಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಓಡಾಡಿ ಸೋತ, ಸಚಿವ ಕೆ.ಎನ್. ರಾಜಣ್ಣ ಮತ್ತು ಡಾ. ಜಿ. ಪರಮೇಶ್ವರ್, ಸೋತ ಬಗ್ಗೆ ಸೊಲ್ಲೆತ್ತದಿರಲಿ ಎಂದು ಸತೀಶ್‌ರೊಂದಿಗೆ ದನಿಗೂಡಿಸಿದರು. ಇತ್ತ ಕಡೆಯಿಂದ ಸೋತ ರಾಮಲಿಂಗಾ ರೆಡ್ಡಿ ಕೂಡ, ಯಾರೂ ಎಗರಾಡದಿರಲಿ ಎಂದು ಜಮೀರ್ ಅಹಮದ್ ಖಾನ್ ಮತ್ತು ಎಂ.ಬಿ. ಪಾಟೀಲ್‌ರನ್ನು ಜೊತೆಗಿಟ್ಟುಕೊಂಡು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಎಂಬ ಗುರಾಣಿ ಹಿಡಿದುಕೊಂಡರು.

- Advertisement -

ಈ ಹೆಚ್ಚುವರಿ ಡಿಸಿಎಂ ಬೇಡಿಕೆ ಎನ್ನುವುದು ಡಿ.ಕೆ. ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಬೇಕಾದ ಪ್ರಬಲ ಅಸ್ತ್ರ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಸಹೋದರ ಡಿ.ಕೆ. ಸುರೇಶ್ ಸೋತಿದ್ದಾರೆ. ಸೋತ ಸಂದರ್ಭದಲ್ಲಿಯೇ ಒಬ್ಬರಿಗೆ ಒಂದು ಸ್ಥಾನ- ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ- ಎಂಬುದನ್ನೂ ಮುನ್ನೆಲೆಗೆ ತಂದು ಡಿ.ಕೆ. ಶಿವಕುಮಾರ್ ಕಟ್ಟಿಹಾಕುವುದು, ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡವರ ಷಡ್ಯಂತ್ರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಸಿದ್ದರಾಮಯ್ಯನವರ ಬಣದ ಷಡ್ಯಂತ್ರಕ್ಕೆ ಡಿ.ಕೆ.ಶಿವಕುಮಾರ್ ನಡೆ ಒತ್ತು ಕೊಡುವಂತಿದೆ. ಬೆಂಗಳೂರು ನಗರ ಅಭಿವೃದ್ಧಿ ಹಿನ್ನೆಲೆಗೆ ಸರಿದಿದೆ. ಬಿಬಿಎಂಪಿ ಅಧಿಕಾರಿಗಳ ಆಡುಂಬೊಲವಾಗಿದೆ. ನಗರಜೀವನ ನರಕವಾಗಿದೆ. ಇವುಗಳ ನಡುವೆಯೇ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗುತ್ತಿರುವುದು, ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ತೊಡಕುಂಟಾಗುತ್ತಿರುವುದು ಡಿ.ಕೆ. ಶಿವಕುಮಾರ್ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡತೊಡಗಿದೆ. ಅದಕ್ಕಾಗಿ ಅವರು, ಎಲ್ಲರಿಗಿಂತ ಮೊದಲೇ ಚನ್ನಪಟ್ಟಣ ಉಪಚುನಾವಣೆಗಾಗಿ ತಾಲೀಮು ಆರಂಭಿಸಿರುವುದು, ಪಕ್ಷದ ವಲಯದಲ್ಲಿ ವಿಚಿತ್ರವಾಗಿ ಕಾಣತೊಡಗಿದೆ. ಸಾಲದು ಎಂದು, ಹೆಚ್ಚುವರಿ ಡಿಸಿಎಂ ಬೇಡಿಕೆಗೆ ಪ್ರತಿರೋಧ ಒಡ್ಡಲು, ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಬಳಸಿಕೊಳ್ಳಲಾಯಿತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ‘ಮುಖ್ಯಮಂತ್ರಿ ಕುರ್ಚಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಿ’ ಎಂದು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದೂ ನಡೆದುಹೋಯಿತು. ಇದಕ್ಕೆ ಪ್ರತ್ಯುತ್ತರವಾಗಿ, ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಏರ್ಪಡಿಸಿ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶಿಸುವ ಯೋಚನೆಯೂ ನಡೆಯುತ್ತಿದೆ.

ಹೆಚ್ಚುವರಿ ಡಿಸಿಎಂ ಬೇಡಿಕೆ, ಮುಖ್ಯಮಂತ್ರಿ ಸ್ಥಾನ, ಒಬ್ಬರಿಗೆ ಒಂದೇ ಹುದ್ದೆ, ಚನ್ನಪಟ್ಟಣ ಉಪಚುನಾವಣೆ ಮತ್ತು ಅಹಿಂದ ಸಮಾವೇಶ- ಇದಿಷ್ಟೂ ಕಾಂಗ್ರೆಸ್ ಪಕ್ಷದ ಆಂತರಿಕ ಸಮಸ್ಯೆಗಳು. ಪಕ್ಷದ ಹೈಕಮಾಂಡ್ ನಿರ್ಧರಿಸುವ ವಿಚಾರಗಳು. ಆದರೆ, ಕಾಂಗ್ರೆಸ್ ನಾಯಕರಿಗೆ ಯಾವುದರ ಬಗ್ಗೆ ಎಲ್ಲಿ, ಎಷ್ಟು ಮಾತನಾಡಬೇಕು ಎಂಬ ಸೂಕ್ಷ್ಮವೇ ತಿಳಿದಿಲ್ಲ. ಜನ ಬಿಜೆಪಿಯನ್ನು ಸೋಲಿಸಿ ನಮ್ಮನ್ನೇಕೆ ಗೆಲ್ಲಿಸಿದರು ಎಂಬ ಕನಿಷ್ಠ ತಿಳಿವಳಿಕೆಯೂ ಇಲ್ಲ. ಇವರು ಜನರಾಜಕಾರಣ ಮಾಡಿದವರೂ ಅಲ್ಲ, ಜನರ ಸಮಸ್ಯೆಗಳ ಬಗ್ಗೆ ಚಿಂತಿಸುವವರೂ ಅಲ್ಲ ಎನ್ನುವುದು ಅವರ ಆಡಳಿತವೇ ಸಾಬೀತು ಮಾಡುತ್ತಿದೆ.

ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಸೇರಿದ ಮುಡಾ ಸೈಟು ಹಂಚಿಕೆ ಹಗರಣವೂ ತಳಕುಹಾಕಿಕೊಂಡಿದೆ. ಮುಖ್ಯಮಂತ್ರಿಗಳ ರಕ್ಷಣೆಗೆ ಡಾ.ಎಚ್.ಸಿ. ಮಹದೇವಪ್ಪ, ಎಂ. ಲಕ್ಷ್ಮಣ್, ನಾಗರಾಜ ಯಾದವ್, ಎ.ಎಸ್. ಪೊನ್ನಣ್ಣ ನಿಂತು ಸಮರ್ಥಿಸಿಕೊಂಡಿದ್ದಾಗಿದೆ. ಸಾಲದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್, ‘ಮುಡಾಕ್ಕೆ ಸಂಬಂಧಿಸಿದಂತೆ ಇಲಾಖೆ ತನಿಖೆ ನಡೆಯುತ್ತಿದೆ, ಎಸ್ಐಟಿ ರಚನೆಯ ಅಗತ್ಯವಿಲ್ಲ’ ಎಂದಿದ್ದೂ ಆಗಿದೆ. ಇದೆಲ್ಲದಕ್ಕೂ ಕಳಶವಿಟ್ಟಂತೆ, ‘ಇದು ಹಗರಣವೇ ಅಲ್ಲ, ಬದಲಿ ನಿವೇಶನ ಹಂಚಿಕೆ. ಸರಿ ಇಲ್ಲವೆಂದರೆ ನಮಗೆ ಬರಬೇಕಾದ 62 ಕೋಟಿ ಕೊಟ್ಟುಬಿಡಲಿ’ ಎಂದಿರುವ ಸಿದ್ದರಾಮಯ್ಯನವರ ಮಾತು, ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಆಡುವಂಥದ್ದಲ್ಲ, ಒಪ್ಪುವಂಥದ್ದೂ ಅಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಅಸಲಿಗೆ, ಮುಖ್ಯಮಂತ್ರಿಗಳ ಮಡದಿ ಪಾರ್ವತಿಯವರ ಸಹೋದರರು, 3.16 ಎಕರೆ ಜಮೀನನ್ನು ದಾನ ಕೊಡುವಷ್ಟು ಶ್ರೀಮಂತರಲ್ಲ. ಅಷ್ಟಕ್ಕೂ ಅದು ಅವರ ಪಿತ್ರಾರ್ಜಿತ ಆಸ್ತಿಯಲ್ಲ. 1985ರಲ್ಲಿ ಸಾರ್ವಜನಿಕ ಹರಾಜಿನಲ್ಲಿ ದಲಿತ ಸಮುದಾಯದ ಜವರ ಎಂಬುವವರು ಖರೀದಿಸಿದ್ದು. ಆ ನಂತರ ಆ ಜಮೀನನ್ನು ಪಾರ್ವತಿಯವರ ಸಹೋದರ ಮಲ್ಲಿಕಾರ್ಜುನ ಖರೀದಿಸಿ, ಅದನ್ನು ಪಾರ್ವತಿಯವರಿಗೆ ದಾನವಾಗಿ ನೀಡಿದ್ದು.

ಈಗ ಇದು ವಿವಾದವಾಗಿದೆ. ವಿರೋಧ ಪಕ್ಷ ಬಿಜೆಪಿಗೆ ಸುಖಾಸುಮ್ಮನೆ ಸರಕು ಸಿಕ್ಕಿದೆ. ವಿಪಕ್ಷನಾಯಕ ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಕುಮಾರಸ್ವಾಮಿ- ಎಲ್ಲರೂ ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದಿದ್ದಾರೆ. ಇವರ ಬೆಂಬಲಕ್ಕೆ ಗೋದಿ ಮೀಡಿಯಾ ಇದೆ. ಅವರ ದನಿ ದೊಡ್ಡದಾಗಿದೆ. ನೈತಿಕವಾಗಿ ಸಮರ್ಥಿಸಿಕೊಳ್ಳಲೂ ಆಗದ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ.

ಏತನ್ಮಧ್ಯೆ, ಸಚಿವರ ಡಾ.ಎಚ್.ಸಿ. ಮಹದೇವಪ್ಪನವರ ಮನೆಯಲ್ಲಿ ನಿನ್ನೆ ದಲಿತ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಮತ್ತು ಮುಖಂಡರ ಸಭೆ ನಡೆದಿದೆ. ಎಸ್ಸಿಎಸ್ಪಿ/ಟಿಎಸ್ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿರುವ ಬಗ್ಗೆ, ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಬೆಂಬಲಕ್ಕೆ ನಿಂತ ಬಗ್ಗೆ ಚರ್ಚೆಯಾಗಿದೆ. ದಲಿತರಿಗೆ ಮೀಸಲಿಟ್ಟ ಅನುದಾನವನ್ನು ದಲಿತರಿಗೇ ಬಳಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂಬ ಒಕ್ಕೊರಲಿನ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಈ ಎಲ್ಲ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ ಮುಂಬರುವ ಮುಂಗಾರು ಅಧಿವೇಶನದಲ್ಲಿ ದನಿ ಎತ್ತರಿಸಿ ಸದ್ದು ಮಾಡಲು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಗೆ ಸಿಕ್ಕ ಸುಲಭದ ಸರಕಾಗಿದೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಕೂಡ ಬರ, ಮಳೆ, ಡೆಂಘೀಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲಾಗದೆ, ಒಳಜಗಳಕ್ಕೇ ಒತ್ತುಕೊಡತೊಡಗಿದೆ.

ಒಟ್ಟಿನಲ್ಲಿ, ಕರ್ನಾಟಕದ ಜನ ಬಿಜೆಪಿಯ ಬಿಗಿ ಹಿಡಿತದಿಂದ ನಾಡನ್ನು ಬಿಡುಗಡೆಗೊಳಿಸಿ ಕಾಂಗ್ರೆಸ್ಸಿಗರ ಕೈ ಕೊಟ್ಟಿದ್ದು, ಆ ಗೆಲುವಿನ ಮೌಲ್ಯವನ್ನೇ ಅವರು ಅರ್ಥಮಾಡಿಕೊಳ್ಳದ್ದು ದುರಂತ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ಈ ದಿನ ಸಂಪಾದಕೀಯ | ಯಾರು ದೇಶದ್ರೋಹಿಗಳು? ಮೋದಿ ಭಾರತದ ಹೊಸ ನಿರೂಪಣೆ ಅಪಾಯಕಾರಿ

ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು, ಬಿಜೆಪಿ ವಿರೋಧಿಗಳನ್ನು,...

ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!

ನಾವು ಒಂದು ವಸ್ತುವನ್ನು ಯುಪಿಐ ಮೂಲಕ ಖರೀದಿಸಿದರೆ, ಅದಕ್ಕೆ ತೆರಿಗೆ ತೆರಬೇಕು....