ತನ್ನ ಮೇಲೆ ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದು, ಇದರಿಂದ ನನಗೆ ಸೋಂಕು ತಗುಲುವುದಕ್ಕೆ ಕಾರಣವಾಗಿದೆ ಎಂಬ ಆರೋಪವನ್ನು ಮಧ್ಯ ಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ವಜಾಗೊಳಿಸಿದೆ.
31 ವರ್ಷದ ಮಹಿಳೆಯೊಬ್ಬರು 40 ವರ್ಷದ ಪತಿಯ ಜೊತೆ ವಾಸಿಸುವ ಸಂದರ್ಭದಲ್ಲಿ ಮಾಡಿರುವ ಆರೋಪವನ್ನು ಇಂದೋರ್ ಪೀಠ ತಳ್ಳಿಹಾಕಿತು.
ಈ ಬಗ್ಗೆ ತೀರ್ಪು ನೀಡಿದ ನ್ಯಾಯಮೂರ್ತಿ ಪ್ರೇಮ್ ನಾರಾಯಣ್ ಸಿಂಗ್ ಅವರ ಪೀಠವು “ಪತಿ ತನ್ನ ಹೆಂಡತಿಗಿಂತ ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಅವರ ಜೊತೆ ಯಾವುದೇ ಲೈಂಗಿಕ ಸಂಭೋಗ ಅಥವಾ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ. ಆದ್ದರಿಂದ ಒಪ್ಪಿಗೆಯು ಅಪ್ರಸ್ತುತವಾಗಿದೆ” ಎಂದು ತೀರ್ಪಿನಲ್ಲಿ ಹೇಳಿದರು.
“ಈ ಸಂದರ್ಭಗಳಲ್ಲಿ, ಎಫ್‌ಐಆರ್‌ನಲ್ಲಿ ಮಾಡಲಾದ ಆರೋಪಗಳು ಅರ್ಜಿದಾರರ ವಿರುದ್ಧ ಐಪಿಸಿಯ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ. ಅದರಂತೆ, ಅರ್ಜಿದಾರರನ್ನು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧದಿಂದ ಬಿಡುಗಡೆ ಮಾಡಲಾಗುತ್ತದೆ” ಎಂದು ನ್ಯಾಯಾಲಯ ಆದೇಶ ನೀಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ
ನ್ಯಾಯಮೂರ್ತಿ ಪ್ರೇಮ್ ನಾರಾಯಣ್ ಸಿಂಗ್ ಅವರ ಪೀಠವು ಮೇ 28 ರಂದು ಅಂತಿಮ ವಿಚಾರಣೆಯನ್ನು ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.
ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಕೃತ್ಯ), ಸೆಕ್ಷನ್ 294 (ದುರುಪಯೋಗ) ಮತ್ತು ಸೆಕ್ಷನ್ 506 (ಬೆದರಿಕೆ) ಅಡಿಯಲ್ಲಿ ಆರೋಪಗಳನ್ನು ಕೈಬಿಟ್ಟಿದೆ. ಆದರೆ ನ್ಯಾಯಾಲಯವು ಸೆಕ್ಷನ್ 498-ಎ (ಹೆಣ್ಣಿಗೆ ಅವಳ ಪತಿ ಅಥವಾ ಸಂಬಂಧಿಕರ ಕ್ರೌರ್ಯ) ಅಪರಾಧಗಳನ್ನು ರದ್ದುಗೊಳಿಸಲು ನಿರಾಕರಿಸಿತು..
20 ಲಕ್ಷ ರೂ. ವರದಕ್ಷಿಣೆಗಾಗಿ ಪತಿ ಮತ್ತು ಆತನ ಕುಟುಂಬದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
