ಕುನೊ ಉದ್ಯಾನದಲ್ಲಿ ನಮೀಬಿಯಾ ಚೀತಾ ಸಾವು: ಭಾರತದಲ್ಲಿ ಮೃತಪಟ್ಟ 10ನೇ ಆಫ್ರಿಕಾ ಚೀತಾ

Date:

Advertisements

ನಮೀಬಿಯಾದಿಂದ ಸೆಪ್ಟೆಂಬರ್ 2022ರಂದು ಕರೆತರಲಾಗಿದ್ದ ಚೀತಾವೊಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೃತಪಟ್ಟಿದೆ.

ಶೌರ್ಯ ಮೃತಪಟ್ಟ ಚೀತಾ, ಮಾರ್ಚ್‌ 2023ರಿಂದ ಇಲ್ಲಿಯವರೆಗೂ 7 ವಯಸ್ಕ ಹಾಗೂ ಮೂರು ಮರಿ ಚೀತಾಗಳು ಮೃತಪಟ್ಟಿವೆ.

“ಬೆಳಗ್ಗೆ 11ರ ವೇಳೆಗೆ ನಮ್ಮ ಪರಿಶೀಲನಾ ತಂಡವು ಶೌರ್ಯ ಚೀತಾವು ಆರೋಗ್ಯದಲ್ಲಿ ಏರುಪೇರಾಗಿ ನಿಧಾನಗತಿಯಲ್ಲಿ ನಡೆಯುತ್ತಿರುವುದನ್ನು ಗಮನಿಸಿತು. ನಂತರ ಪರಿಶೀಲನೆ ನಡೆಸಿದಾಗ ಅಸ್ವಸ್ಥ ಹಾಗೂ ನಿಶ್ಯಕ್ತಿಯಿಂದ ಬಳಲುತ್ತಿರುವುದನ್ನು ಕಂಡುಕೊಂಡಿತು. ಚಿಕಿತ್ಸೆ ನೀಡಿದ ನಂತರವೂ ಹಲವು ಸಮಸ್ಯೆಗಳು ಕಾಣಿಸಿಕೊಂಡವು. ಅಂತಿಮವಾಗಿ ಹೃದಯ ಹಾಗೂ ಶ್ವಾಸಕೋಶದ ಚಿಕಿತ್ಸೆಗೂ ಸ್ಪಂದಿಸಲಿಲ್ಲ. ಸಾವಿನ ಕಾರಣ ಮರಣೋತ್ತರ ಪರೀಕ್ಷೆಯ ನಂತರ ತಿಳಿಯಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ

ಸರ್ಕಾರದ ಚೀತಾ ಯೋಜನೆಯಡಿಯಲ್ಲಿ ಎರಡು ಗುಂಪುಗಳಲ್ಲಿ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಒಟ್ಟು 20 ಪ್ರಾಣಿಗಳನ್ನು ಸ್ಥಳಾಂತರಿಸಲಾಯಿತು. ಮೊದಲ ಗುಂಪು ಸೆಪ್ಟೆಂಬರ್ 2022 ಹಾಗೂ ಎರಡನೇ ಗುಂಪು ಫೆಬ್ರವರಿ 2023 ರಂದು ಆಗಮಿಸಿದ್ದವು.

ಈ ಯೋಜನೆಯು ದೇಶದ ಅರಣ್ಯಗಳಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಕಳೆದ ಏಳು ದಶಕಗಳಲ್ಲಿ ಭಾರತದಲ್ಲಿ ಚೀತಾ ಸಂತತಿ ಅವನತಿ ಹೊಂದಿವೆ.

ಆಗಸ್ಟ್ 2023 ರಲ್ಲಿ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚಿರತೆ ‘ಧಾತ್ರಿ’ ಶವವಾಗಿ ಪತ್ತೆಯಾಗಿತ್ತು. ಕಾಡಿನಲ್ಲಿ ಇನ್ನೂ ಉಳಿದಿರುವ ಎರಡು ಹೆಣ್ಣು ಚಿರತೆಗಳಲ್ಲಿ ಧಾತ್ರಿ ಕೂಡ ಒಂದಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X