ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಸಂಸ್ಥೆಗೆ ಅಮೆರಿಕದ ನೆವಡಾ ತೆರಿಗೆ ಇಲಾಖೆ ಎರಡು ತ್ರೈಮಾಸಿಕಗಳಲ್ಲಿ ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘನೆಗಾಗಿ 225(18,702 ರೂ.) ಡಾಲರ್ ದಂಡ ವಿಧಿಸಿದೆ.
ಆದಾಗ್ಯೂ ದಂಡದ ಸತ್ಯಾಸತ್ಯತೆ ತಿಳಿಯಲು ಇನ್ಫೋಸಿಸ್ ಕಂಪನಿಯು ಮುಂದಿನ ಹಂತಗಳಲ್ಲಿ ಈ ಬಗ್ಗೆ ನಿರ್ಧರಿಸಲಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಇನ್ಫೋಸಿಸ್, ಜನವರಿ 25ರದು ಅಮೆರಿಕದ ನೆವಡಾ ತೆರಿಗೆ ಇಲಾಖೆಯು ದಂಡದ ಮೊತ್ತದ ತೆರಿಗೆಯನ್ನು ಪಾವತಿಸಬೇಕೆಂದು ಮೇಲ್ ಕಳಿಸಿದೆ. 2021 ತ್ರೈಮಾಸಿಕ ನಾಲ್ಕರಿಂದ 2022 ತ್ರೈಮಾಸಿಕ ಒಂದರವರೆಗೆ ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘನೆ ಮಾಡಿರುವುದಾಗಿ ದಂಡ ವಿಧಿಸಲಾಗಿದೆ” ಎಂದು ತಿಳಿಸಿದೆ.
ಈ ಬೆಳವಣಿಗೆಯಿಂದ ಆರ್ಥಿಕತೆ, ಕಾರ್ಯಾಚರಣೆಗಳು ಅಥವಾ ಕಂಪನಿಯ ಅಭಿವೃದ್ಧಿಯ ಇತರ ಚಟುವಟಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ.
ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘನೆಯು ನಿಗದಿಪಡಿಸಿರುವ ಇನ್‌ವಾಯ್ಸ್ ಮೊತ್ತದಲ್ಲಿ ಭಾಗಶಃ ಅಥವಾ ಕಡಿಮೆ ಮೊತ್ತವನ್ನು ಉಲ್ಲೇಖಿಸಿರುವುದನ್ನು ಒಳಗೊಂಡಿರುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್
ಇನ್ಫೋಸಿಸ್ ಮಾರ್ಪಡಿಸಿದ ವ್ಯವಹಾರದ ಸಣ್ಣ ಪಾವತಿ ಉಲ್ಲಂಘಿಸಿರುವುದು ಇದು ಮೊದಲೇನಲ್ಲ. 2023ರ ಆಗಸ್ಟ್‌ನಲ್ಲಿಯೂ ಅಮೆರಿಕಾದ ಫ್ಲೋರಿಡಾ ತೆರಿಗೆ ಇಲಾಖೆ ಕೂಡ ಇನ್ಫೋಸಿಸ್ ಕಂಪನಿಗೆ 76.92(6387 ರೂ.) ಡಾಲರ್ ದಂಡ ವಿಧಿಸಿತ್ತು.
2023ರ ಅಕ್ಟೋಬರ್‌ನಲ್ಲಿ ಮ್ಯಾಸಚೂಸೆಟ್ಸ್ ಆಫ್ ಕಾಮನ್‌ವೆಲ್ತ್ ಸಂಸ್ಥೆ ಕೂಡ 91,508 ರೂ.(1101 ಡಾಲರ್) ದಂಡ ವಿಧಿಸಿತ್ತು.
ಇದಲ್ಲದೆ ಭಾರತದ ವಾಣಿಜ್ಯ ತೆರಿಗೆ ಇಲಾಖೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಯೋಜಿತ ಸರಕು ಹಾಗೂ ಸೇವಾ ತೆರಿಗೆಯ ಉಲ್ಲಂಘನೆಗಾಗಿ 26.5 ಲಕ್ಷ ರೂ. ದಂಡ ಪಾವತಿಸಬೇಕು ಎಂದು ನೋಟಿಸ್ ನೀಡಿತ್ತು.
ಭಾರತದ ಐಟಿ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ 68,4000 ಕೋಟಿ ರೂ. ಮೌಲ್ಯ ಹೊಂದಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗ್ರಾಹಕರನ್ನು ಹೊಂದಿದ್ದು, 56 ದೇಶಗಳಲ್ಲಿ ಕಂಪನಿ ನೆಲೆಯೂರಿದೆ.