ವಿಶ್ವದಲ್ಲಿ ಬರೀ ಮೂರನೇ ಒಂದು ಬಾಗದಷ್ಟು ದೇಶಗಳಲ್ಲಿ ಮಾತ್ರ ‘ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ’ ಎಂಬ ಲೇಬಲ್ ಅನ್ನು ಮದ್ಯದ ಬಾಟಲಿಗಳಲ್ಲಿ ಹಾಕಲಾಗಿರುತ್ತದೆ. ಎಲ್ಲಾ ದೇಶಗಳಲ್ಲಿ ಈ ಲೇಬಲ್ ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ಲಾನ್ಸೆಟ್ ತನ್ನ ಇತ್ತೀಚಿನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಮದ್ಯಪಾನ ಸೇವನೆ ಮಾಡುವುದರಿಂದ ಕ್ಯಾನ್ಸರ್, ಯಕೃತ್ತಿಗೆ ಹಾನಿ, ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ಅದೆಷ್ಟೋ ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಆದ್ದರಿಂದ ಮದ್ಯಪಾನ ಮಾಡುವುದರಿಂದಾಗುವ ಆರೋಗ್ಯ ಸಮಸ್ಯೆ ಬಗ್ಗೆ ಬಾಟಲಿಗಳ ಮೂಲಕವೇ ಎಚ್ಚರಿಕೆ ಸಂದೇಶ ನೀಡುವ ಅಗತ್ಯವಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮದ್ಯ ಕುಡಿದು ಶಾಲೆಯಲ್ಲಿ ಮಲಗಿದ್ದ ಮುಖ್ಯಶಿಕ್ಷಕ ಅಮಾನತು
ಮದ್ಯಪಾನದಿಂದ ಉಂಟಾಗುವ ಆರೋಗ್ಯ, ಇತರೆ ಸಮಸ್ಯೆಗಳು ಅತೀ ಹೆಚ್ಚು ಕಾಳಜಿ ವಹಿಸಬೇಕಾಗಿರುವುದು. ಆಗ್ನೇಯ ಏಷ್ಯಾದಲ್ಲಿ ಈ ಬಗ್ಗೆ ಅಧಿಕ ಎಚ್ಚರಿಕೆ ನೀಡುವ ಅಗತ್ಯವಿದೆ. ಈಗಾಗಲೇ ಈ ಭಾಗದಲ್ಲಿ ಮದ್ಯ ಸೇವನೆ ಹೆಚ್ಚಾಗುತ್ತಿದ್ದು, ಇನ್ನಷ್ಟು ಅಧಿಕವಾಗುವ ಆತಂಕವಿದೆ ಎಂದು ತಿಳಿಸಿದೆ.
ಈ ಸಂಶೋಧನೆಯಲ್ಲಿ ಭಾಗಿಯಾಗಿರುವ ಡಾ ಯಾತನ್ ಪಾಲ್ ಸಿಂಗ್ ಬಲ್ಹಾರ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಭಾರತದಲ್ಲಿ ಮದ್ಯದ ಬಾಟಲಿಗಳಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಜಾಹೀರಾತಿನಲ್ಲೂ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಗರ್ಭಿಣಿಯರು, ಬಾಲಕರು ಮದ್ಯಪಾನ ಮಾಡುವುದರಿಂದಾಗುವ ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚರಿಕೆ ನೀಡಿಲ್ಲ. ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಎಚ್ಚರಿಕೆ ನೀಡಿಲ್ಲ” ಎಂದು ಹೇಳಿದ್ದಾರೆ.
ಇನ್ನು ಭಾರತದಲ್ಲಿ ಮದ್ಯದ ಬಾಟಲಿಗಳಲ್ಲಿ “ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಮದ್ಯ ಸೇವಿಸಿ ವಾಹನ ಚಲಾಯಿಸುವುದು ಸುರಕ್ಷಿತವಲ್ಲ” ಎಂಬ ಲೇಬಲ್ ಹಾಕುವುದು ಕಡ್ಡಾಯವಾಗಿದೆ. ಆದರೆ ಗರ್ಭಿಣಿಯರಿಗೆ ಸಂಬಂಧಿಸಿದ ಯಾವುದೇ ಎಚ್ಚರಿಕೆಯು ಲೇಬಲ್ನಲ್ಲಿ ಇರುವುದಿಲ್ಲ. ಸಿನಿಮಾಗಳಲ್ಲಿಯೂ ಮದ್ಯ ಸೇವನೆ ದೃಶ್ಯದ ವೇಳೆ ಎಚ್ಚರಿಕೆ ಸಂದೇಶ ಹಾಕುವುದು ಕಡ್ಡಾಯವಾಗಿದೆ.
