ದೇಶದಲ್ಲಿ ಭಾರೀ ವಿವಾದ ಎಬ್ಬಿಸಿರುವ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದಿಂದಾಗಿ ಜೂನ್ 25ರಿಂದ 27ರ ನಡುವೆ ನಿಗದಿಪಡಿಸಿದ್ದ 2024ನೇ ಸಿಎಸ್‌ಐಆರ್ ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮುಂದೂಡಿದ ಬೆನ್ನಲ್ಲೇ, ಜೂನ್ 23ರ ಭಾನುವಾರದಂದು ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ದಿಢೀರ್ ಆಗಿ ಮುಂದೂಡಲಾಗಿದೆ.
#Breaking– #NEET PG EXAM POSTPONED. #NEET PG Entrance exam, scheduled to be held on June 23, is POSTPONED.
– Fresh date will be announced at the earliest, says Union Health Ministry.
– Govt will undertake thorough assessment of robustness of exam process.#NEETRow pic.twitter.com/8NsgugpgfF— Rishika Sadam (@RishikaSadam) June 22, 2024
ಈ ಬಗ್ಗೆ ಶನಿವಾರ ತಡರಾತ್ರಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಇಲಾಖೆಯು, “ಇತ್ತೀಚಿನ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ನಾಳೆ(ಜೂನ್ 23ರ ಭಾನುವಾರ) ನಡೆಯಬೇಕಿದ್ದ ನೀಟ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನು ಮುಂದೂಡಿದ್ದೇವೆ. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಲಿದ್ದೇವೆ” ಎಂದು ತಿಳಿಸಿದೆ.
ಎನ್‌ಟಿಎ ಮುಖ್ಯಸ್ಥನನ್ನು ಬದಲಿಸಿದ ಕೇಂದ್ರ ಸರ್ಕಾರ
ಈ ಎಲ್ಲ ಬೆಳವಣಿಗೆಯ ನಡುವೆಯೇ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಮುಖ್ಯಸ್ಥನನ್ನೂ ಕೂಡ ಕೇಂದ್ರ ಸರ್ಕಾರ ಬದಲಿಸಿದೆ.
NTA Director General Subodh Kumar Singh removed, put on “compulsory wait” in DoPT amid controversy over irregularities in exams
— Press Trust of India (@PTI_News) June 22, 2024
NEET-NET ಪರೀಕ್ಷೆಯ ವಿವಾದದ ನಡುವೆಯೇ NTA ಮುಖ್ಯಸ್ಥನ ಸ್ಥಾನದಿಂದ ಸುಬೋಧ್ ಕುಮಾರ್ ಅವರನ್ನು ತೆಗೆದುಹಾಕಿದ್ದು, ಅವರ ಸ್ಥಾನಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ.
NEET-PG exam scheduled for tomorrow has been postponed!
NTA gets much needed overhaul
NTA Chief Subodh Kumar removed amid #NEET-NET exam controversy
Replaced by retired IAS officer Pradeep Singh Kharola👇🏻 pic.twitter.com/ulGUkrEmwk
— Nabila Jamal (@nabilajamal_) June 22, 2024
