“ಜೀವನದಲ್ಲಿ ನೀವು ಏನಾದರೂ ಮಾಡಿ, ಮದುವೆ ಮಾತ್ರ ಆಗಬೇಡಿ” ಎಂದು ಹೇಳಿ 38 ವರ್ಷದ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಡಿಎಲ್‌ಎಫ್ ಕಾಲೋನಿಯಲ್ಲಿ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬುಲಂದ್‌ಶಹರ್‌ನ ನರಸೈನಾ ಪ್ರದೇಶದ ಜಗಜಿತ್ ಸಿಂಗ್ ರಾಣಾ ಎಂದು ಗುರುತಿಸಲಾಗಿದೆ. ಔಷಧಿ ಪೂರೈಕೆ ವ್ಯವಹಾರ ಮಾಡುತ್ತಿದ್ದ ಜಗಜಿತ್ ಸಿಂಗ್ ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಪತ್ನಿ ಹಾಗೂ ಅತ್ತೆಯ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಎರಡು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ.
ಸಿಂಗ್ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ನೋಡಿ ನೆರೆಹೊರೆಯವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಕೆಳಗಿಳಿಸಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಜಗಜಿತ್ ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ್ದ ಎರಡು ವಿಡಿಯೋಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಸಾಲಭಾದೆ : ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಪೊಲೀಸರ ಪ್ರಕಾರ, ಮೂರು ನಿಮಿಷ, ನಾಲ್ಕು ಸೆಕೆಂಡುಗಳ ವಿಡಿಯೋದಲ್ಲಿ ಜಗಜಿತ್ ತನ್ನ ಪತ್ನಿ, ಅತ್ತೆಯರಿಂದ ಜೀವ ಭಯವಿದೆ, ಅದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಬುಲಂದ್‌ಶಹರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತನ್ನ ಅತ್ತೆಯಂದಿರು ವಾಸಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಒಂದು ವಿಡಿಯೋದಲ್ಲಿ ಜಗಜಿತ್ ಸಿಂಗ್ ರಾಣಾ ತನ್ನ ಮೇಲಾದ ಕಿರುಕುಳ ಬಗ್ಗೆ ವಿವರಿಸಿದ್ದಾರೆ. ಹಾಗೆಯೇ “ನನ್ನ ಆಸ್ತಿಯಲ್ಲಿ ಅವರಿಗೆ ಯಾರಿಗೂ ಪಾಲು ನೀಡಬಾರದು, ನನ್ನ ಮುಖವನ್ನೂ ಕೂಡಾ ಅವರಿಗೆ ತೋರಿಸಬಾರದು” ಎಂದು ಹೇಳಿದ್ದಾರೆ. ಜೊತೆಗೆ ತನ್ನ ಅಂತಿಮ ಸಂಸ್ಕಾರವನ್ನು ಪೊಲೀಸರು ಮತ್ತು ಆಡಳಿತ ಮಂಡಳಿಯೇ ನಡೆಸಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಎರಡನೇ ವೀಡಿಯೋದಲ್ಲಿ ಜಗಜಿತ್ ಸಿಂಗ್ ತನ್ನ ಕುತ್ತಿಗೆಗೆ ಕುಣಿಕೆ ಹಾಕುತ್ತಿರುವುದು ಕಂಡುಬಂದಿದೆ. “ಜೀವನದಲ್ಲಿ ನಿಮಗೆ ಬೇಕಾದುದನ್ನು ಮಾಡಿ, ಆದರೆ ಎಂದಿಗೂ ಮದುವೆಯಾಗಬೇಡಿ. ಜೈ ಶ್ರೀ ರಾಮ್” ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಸಿಂಗ್ ಕುಟುಂಬದ ದೂರಿಗಾಗಿ ಕಾಯುತ್ತಿದ್ದಾರೆ.
उत्तर प्रदेश : गाजियाबाद में 38 साल के जगजीत सिंह राणा ने फांसी लगाकर जान दी।
— Sachin Gupta (@SachinGuptaUP) September 3, 2024
मरने से पहले Video में कहा – "सब कुछ कर लेना, पर शादी मत करना। जय श्रीराम…"
जगजीत ने पत्नी और ससुरलवालों पर प्रताड़ित करने के आरोप लगाए हैं। pic.twitter.com/EnHvWE8Uvt
