ಸುದ್ದಿಸಂಸ್ಥೆ ಎಎನ್‌ಐ ಮೀಡಿಯಾ ಪ್ರೈವೇಟ್ ಲಿಮಿಟೆಡ್, ವಿಕಿಪೀಡಿಯಾ ಸಂಸ್ಥೆ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಂತರ ಪರಿಹಾರಕ್ಕಾಗಿ ಎಎನ್‌ಐ ಪರ ಅರ್ಜಿ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ನೋಟಿಸ್ ಜಾರಿಗೊಳಿಸಿದ್ದು, ಪ್ರಕರಣವನ್ನು ಆಗಸ್ಟ್ 20 ರಂದು ವಿಚಾರಣೆ ನಡೆಸಲಾಗುತ್ತದೆ.
ವಿಕಿಪೀಡಿಯಾ ಮಾನಹಾನಿ ಸುದ್ದಿ ಪ್ರಕಟಿಸಿರುವ ಆರೋಪ ಮಾಡಿರುವ ಎಎನ್‌ಐ, ವೆಬ್‌ಸೈಟ್‌ನಿಂದ ಈ ವಿಷಯವನ್ನು ತೆಗೆದುಹಾಕುವಂತೆ ಹೇಳಿದೆ. ಇದರ ಜೊತೆ ಮಾನನಷ್ಟಕ್ಕಾಗಿ 2 ಕೋಟಿ ರೂ. ಪರಿಹಾರವನ್ನು ನೀಡುವಂತೆ ಕೋರಿದೆ.
ಎಎನ್‌ಐ ಬಗ್ಗೆ ವಿಕಿಪೀಡಿಯಾ ಪುಟದಲ್ಲಿ “ಕೇಂದ್ರ ಸರ್ಕಾರದ ಅಧೀನದ ಸುದ್ದಿಸಂಸ್ಥೆಯಾಗಿ ಎಎನ್‌ಐ ಕಾರ್ಯನಿರ್ವಹಿಸುತ್ತಿದ್ದು, ನಕಲಿ ಸುದ್ದಿ ವೆಬ್‌ಸೈಟ್‌ಗಳ ಜಾಲದಿಂದ ವಿಷಯಗಳನ್ನು ಭಿತ್ತರಿಸುವುದು ಹಾಗೂ ತಪ್ಪಾದ ಸುದ್ದಿಗಳನ್ನು ವರದಿ ಮಾಡಲಾಗುತ್ತಿದೆ” ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?
ಎಎನ್‌ಐ ಪರ ವಕೀಲರಾದ ಸಿದ್ಧಾಂತ್ ಕುಮಾರ್, ವಿಕಿಪೀಡಿಯಾ ಮಾನನಷ್ಟ ವರದಿಗಳನ್ನು ತನ್ನ ಪುಟದಲ್ಲಿ ವಿವರಿಸಲಾಗಿದೆ. ಸಾರ್ವಜನಿಕ ಉಪಯುಕ್ತತೆಯ ವೇದಿಕೆಯಾಗಿದ್ದು, ಖಾಸಗಿ ವಲಯದಂತೆ ವರ್ತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಕಿಪೀಡಿಯಾದ ಎಎನ್‌ಐ ಮಾಹಿತಿ ಪುಟದಲ್ಲಿ ತನ್ನ ಸ್ವಂತ ತಿದ್ದುಪಡಿ ಸಂಪಾದಕರನ್ನು ಹೊರತುಪಡಿಸಿ ಬಾಹ್ಯ ತಿದ್ದುಪಡಿ ಮಾಡುವವರಿಗೆ ಅನುಮತಿಯನ್ನು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ನವಿನ್ ಚಾವ್ಲಾ, ವಿಕಿಪೀಡಿಯಾ ತನ್ನ ಅಭಿಪ್ರಾಯಗಳಿಗೆ ಬದ್ಧವಾಗಿದೆ ಆದರೆ ನ್ಯಾಯಾಲಯದ ಮುಂದೆ ಈ ಮಾಹಿತಿಯ ಬಗ್ಗೆ ವಿವರಣೆ ನೀಡಬೇಕು ಎಂದು ತಿಳಿಸಿದರು.
ವಿಕಿಪೀಡಿಯಾ ಎಎನ್‌ಐ ಬಗ್ಗೆ ತನ್ನ ಪುಟದಲ್ಲಿ ಪ್ರಕಟಿಸಿರುವ ಮಾಹಿತಿ ಸುಳ್ಳಿನಿಂದ ಕೂಡಿದ್ದು, ಸಂಸ್ಥೆಯ ಘನತೆಗೆ ಧಕ್ಕೆ ತರುವಂತ ಕೆಲಸ ಮಾಡಿದೆ. ಒಳ್ಳೆಯ ಉತ್ತಮ ಸಂಸ್ಥೆಯ ಬಗ್ಗೆ ಅಪಖ್ಯಾತಿ ತರುವ ಗುರಿಯನ್ನು ಹೊಂದಿದೆ ಎಂದು ಎಎನ್‌ಐ ಆರೋಪಿಸಿದೆ.