ರಾಜ್ಯಸಭಾ ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ವಿಪಕ್ಷ ಇಂಡಿಯಾ ಒಕ್ಕೂಟದ ಸಂಸದರು ರಾಜ್ಯಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.
ವಿಪಕ್ಷದ ಸುಮಾರು 60 ಸಂಸದರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಸ್‌ಪಿ, ಆರ್‌ಜೆಡಿ, ಎಎಪಿ, ಡಿಎಂಕೆ ಸೇರಿದಂತೆ 60 ಸಂಸದರು ಸಹಿ ಹಾಕಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ವ್ಯಕ್ತಿ ವಿಶೇಷ | ಜಗದೀಪ್ ಧನಖರ್ ಎಂಬ ‘ಸಮರ್ಥ’ ಸಭಾಪತಿ
ಸದನದ ಕಲಾಪದ ವೇಳೆ ರಾಜ್ಯಸಭಾ ಸ್ಪೀಕರ್ ಪಕ್ಷಪಾತ ಮಾಡುತ್ತಾರೆ. ಭಾಷಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ವಿಪಕ್ಷಗಳು ಆರೋಪಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, “ಇಂಡಿಯಾ ಒಕ್ಕೂಟಕ್ಕೆ ಸೇರಿದ ಎಲ್ಲಾ ಪಕ್ಷಗಳಿಗೆ ರಾಜ್ಯಸಭೆಯ ವಿದ್ವಾಂಸ ಗೌರವಾನ್ವಿತ ಸ್ಪೀಕರ್ ವಿರುದ್ಧ ಔಪಚಾರಿಕವಾಗಿ ಅವಿಶ್ವಾಸ ನಿರ್ಣಯವನ್ನು ಸಲ್ಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಹೇಳಿದ್ದಾರೆ.
ALL parties belonging to the INDIA group have had no option but to formally submit a no-confidence motion against the learned Hon'ble Chairman of the Rajya Sabha for the extremely partisan manner in which he has been conducting the proceedings of the Council of States. It has…
— Jairam Ramesh (@Jairam_Ramesh) December 10, 2024
“ಅವರು ಸದನದ ಪ್ರಕ್ರಿಯೆಗಳನ್ನು ಪಕ್ಷಪಾತದಿಂದ ನಡೆಸುತ್ತಾರೆ. ಇಂಡಿಯಾ ಒಕ್ಕೂಟಕ್ಕೆ ಇದು ಅತ್ಯಂತ ನೋವಿನ ನಿರ್ಧಾರವಾಗಿದೆ. ಆದರೆ ಸಂಸದೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ನಾವು ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ” ಎಂದು ತಿಳಿಸಿದ್ದಾರೆ.
