ಸಾರ್ವಜನಿಕರು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತಗಳಿಂದ ದೂರವಿರಬೇಕು, ಅವರು ವಿಷದ ರೀತಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ಬಿಹಾರದ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು,ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಜನರಿಗೆ ಇದು ಕೊನೆಯ ಅವಕಾಶವಾಗಿದೆ. ಒಂದು ವೇಳೆ ನರೇಂದ್ರ ಮೋದಿ ಗೆದ್ದರೆ ದೇಶದಲ್ಲಿ ಸರ್ವಾಧಿಕಾರ ರಚನೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿತೀಶ್ ಇಂಡಿಯಾ ಒಕ್ಕೂಟ ಬಿಟ್ಟ ಬಗ್ಗೆ ಮಾತನಾಡಿದ ಖರ್ಗೆ “ಒಬ್ಬ ವ್ಯಕ್ತಿ ಮಹಾಘಟಬಂಧನ ಬಿಟ್ಟ ಮಾತ್ರಕ್ಕೆ ನಾವು ದುರ್ಬಲಗೊಳ್ಳುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ
“ಇ.ಡಿ.ಯವರು ಪ್ರತಿಯೊಬ್ಬರಿಗೂ ನೋಟಿಸ್ ನೀಡುತ್ತಿದ್ದಾರೆ. ಅವರು ಜನರನ್ನು ಬೆದರಿಸುತ್ತಿದ್ದಾರೆ. ಏಕಂದರೆ ಅವರಿಗೆ ಪಕ್ಷ ಹಾಗೂ ಒಕ್ಕೂಟವನ್ನು ಬಿಟ್ಟು ಹೋಗುತ್ತಾರೆನ್ನುವ ಭಯವಾಗಿದೆ. ಇದು ನಿಮಗೆ ಮತದಾನ ಮಾಡುವ ಕೊನೆಯ ಅವಕಾಶವಾಗಿದೆ. ಇದಾದ ನಂತರ ಮತದಾನ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಖರ್ಗೆ ಹೇಳಿದರು.
“ರಾಹುಲ್ ಗಾಂಧಿ ಅವರು ಪ್ರೀತಿಯ ಅಂಗಡಿಯ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾರೆ.ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷದ ಅಂಗಡಿ ತೆರೆಯುತ್ತಿದ್ದಾರೆ. ಈ ಕಾರಣದಿಂದ ನೀವು ಎಚ್ಚರಿಕೆಯಿಂದ ಇರಬೇಕು” ಎಂದರು.
ಮೋದಿ ಜಪ ಮಾಡಿರೋ ನೀವೆಲ್ಲ
ಖರ್ಗೆ ಜೊತೆ ಸೇರಿ
ಮೋದಿ ಜಪ ಮಾಡಿರೋ