ಜಮ್ಮು ಕಾಶ್ಮೀರದ ಮುಂದಿನ ಸಿಎಂ ಒಮರ್ ಅಬ್ದುಲ್ಲಾ , ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಘೋಷಣೆ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಮುನ್ನಡೆ ಪಡೆಯುತ್ತಿದ್ದಂತೆ ಮಾಧ್ಯದೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, “ಜನರು ಜನಾದೇಶವನ್ನು ನೀಡಿದ್ದಾರೆ, ಅವರು ಆಗಸ್ಟ್ 5 ರಂದು ತೆಗೆದುಕೊಂಡ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ”, ಎಂದು ಹೇಳಿದ್ದಾರೆ.
ಕಾಂಗ್ರೆಸ್ ಎನ್‌ಸಿ ಮೈತ್ರಿಕೂಟವು ಒಟ್ಟು 90 ಸ್ಥಾನಗಳಲ್ಲಿ 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸುಲಭವಾಗಿ ಗೆಲುವು ಬಹುಮತ ಪಡಿಯಲಿದೆ. ಬಿಜೆಪಿ 27 ಸ್ಥಾನಗಳಲ್ಲಿ ಮುಂದಿದೆ. ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೇವಲ ಎರಡು ಸ್ಥಾನಗಳಲ್ಲಿ ಮುಂದಿದೆ.
