ತರಬೇತಿ ವಿಮಾನ ಪತನವಾಗಿ ಪೈಲಟ್ ಸಾವನ್ನಪ್ಪಿರುವ ಘಟನೆ ಏಪ್ರಿಲ್ 22ರಂದು ಗುಜರಾತ್‌ನ ಅಮ್ರೇಲಿಯಲ್ಲಿ ನಡೆದಿದೆ. ಈ ವಿಮಾನ ಪತನದಿಂದಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅಮ್ರೇಲಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕಾಠಟ್, “ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಕಾರಣ ತಿಳಿದಿಲ್ಲ. ಪೈಲಟ್ ಮೃತಪಟ್ಟಿದ್ದು, ಬೇರೆ ಯಾರೂ ಗಾಯಗೊಂಡಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಮೆಜಾನ್ ಕಾಡಿನಲ್ಲಿ ಪತನಗೊಂಡ ವಿಮಾನ; ಬದುಕುಳಿದ ಮಕ್ಕಳ ನೈಜ ಕಥನಕ್ಕೆ ಕಾದಿದೆ ಜಗತ್ತು
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯಲಿದೆ. ಇದು ತರಬೇತಿಗಾಗಿ ಇರುವ ಏಕ ಪ್ರಯಾಣಿಕ ವಿಮಾನವಾಗಿದೆ ವರದಿಯಾಗಿದೆ.
VIDEO | Gujarat: A small private plane crashes in Amreli. The pilot of the plane has reportedly been killed in the crash. More details are awaited.#GujaratNews #planecrash
— Press Trust of India (@PTI_News) April 22, 2025
(Full video available on PTI Videos – https://t.co/n147TvrpG7) pic.twitter.com/5wagJlFOrq
ವಿಮಾನ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದು ಬೆಂಕಿ ಹತ್ತಿಕೊಂಡಿದೆ. ಸ್ಥಳದಲ್ಲಿ ಬೇರೆ ಯಾವುದೇ ಹಾನಿಯಾಗಿಲ್ಲ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಅಮ್ರೇಲಿ ಕಲೆಕ್ಟರ್ ಅಜಯ್ ದಹಿಯಾ ಹೇಳಿದ್ದಾರೆ.
