ಕೇರಳಕ್ಕೆ ಮುಂಗಾರು ವಿಳಂಬ; ಜೂನ್‌ 4ಕ್ಕೆ ಮಳೆ ಸಂಭವ

Date:

Advertisements
  • ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ದಿನಾಂಕ ಜೂನ್ 1
  • ಈ ಬಾರಿಯ ಮುಂಗಾರು ಶೇ 95 ಮಳೆಯಾಗಲಿದೆ ಎಂದು ಐಎಂಡಿ ಹೇಳಿಕೆ

ಕೇರಳದಲ್ಲಿ ಮುಂಗಾರು ಆರಂಭವಾಗುವುದು ನಾಲ್ಕು ದಿನ ತಡವಾಗಲಿದ್ದು, ಜೂನ್ 4ರಂದು ಸಂಭವಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.

ಸಾಮಾನ್ಯವಾಗಿ ಕೇರಳ ಕರಾವಳಿಯಲ್ಲಿ ಮುಂಗಾರು ಪ್ರಾರಂಭವಾಗುವ ದಿನಾಂಕ ಜೂನ್ 1. ಇದು ನಾಲ್ಕು ತಿಂಗಳ ಮುಂಗಾರು ಋತುವಿನ ಆರಂಭವನ್ನು ಸೂಚಿಸಲಿದ್ದು, ಭಾರತದ ವಾರ್ಷಿಕ ಶೇ 75ರಷ್ಟು ಮಳೆಯನ್ನು ತರುತ್ತದೆ.

ಕಳೆದ ಐದು ವರ್ಷಗಳಲ್ಲಿ, ಜೂನ್ 1ರಂದು ಒಮ್ಮೆ ಮಾತ್ರ ಮುಂಗಾರು ಪ್ರಾರಂಭವಾಗಿದ್ದು, ಎರಡು ಸಂದರ್ಭಗಳಲ್ಲಿ, 2018 ಮತ್ತು 2022ರಲ್ಲಿ, ಮೇ 29ರೊಳಗೆ ಆಗಮಿಸಿತ್ತು. ಆದರೆ 2019 ಮತ್ತು 2021ರಲ್ಲಿ ಜೂನ್ ಮೊದಲ ವಾರದಲ್ಲಿ ಮುಂಗಾರು ಶುರುವಾಗಿತ್ತು.

Advertisements

ಮುಂಗಾರು ಆರಂಭವು ಮಳೆಗಾಲದ ಆರಂಭದ ಗುರುತು ಮಾತ್ರ. ಈ ಋತುವಿನಲ್ಲಿ ಆಗುವ ಮಳೆಯ ಪ್ರಮಾಣಕ್ಕೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಾರಿಯ ಮುಂಗಾರಿನಲ್ಲಿ ಶೇ 95ರಷ್ಟು ಮಳೆಗಾಗಲಿದೆ.

ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ಅವಕಾಶ ಕೊಟ್ಟರೆ ಕೇರಳ ಹೊತ್ತಿ ಉರಿಯಲಿದೆ: ಅರುಂಧತಿ ರಾಯ್‌

ಹವಾಮಾನ ವರದಿ ನೀಡುವ ಸ್ಕೈಮ್ಯಾಟ್‌ ಖಾಸಗಿ ಸಂಸ್ಥೆಯ ಪ್ರಕಾರ, ಮೇ 18ರಂದು ಉತ್ತರ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ ಮತ್ತು ಮೇ ಕೊನೆಯ ವಾರದಲ್ಲಿ ಮಳೆ ಸಾಕಷ್ಟು ಪ್ರಬಲವಾಗಲಿದೆ. ಸದ್ಯಕ್ಕೆ, ಮುಂಗಾರು ಆರಂಭವು ದುರ್ಬಲವಾಗಿ ನಂತರದಲ್ಲಿ ತಡವಾಗಿ ವೇಗವನ್ನು ಹೆಚ್ಚಿಸಿಕೊಳ್ಳಲಿದೆ.

ನೈರುತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕಳೆದ ತಿಂಗಳು ತಿಳಿಸಿತ್ತು. ಮುಂಗಾರು ಆಗಮನದ ನಂತರ ರೈತರು ಬೆಳೆಗಳನ್ನು ಬಿತ್ತನೆ ಮಾಡಲು ಪ್ರಾರಂಭಿಸುತ್ತಾರೆ.

ಕಳೆದ ಮೂರು ವರ್ಷ ರಾಜ್ಯದಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದ್ದು, ಈ ಬಾರಿಯೂ ಮುಂಗಾರು ಅವಧಿಯಲ್ಲಿ ನಿರೀಕ್ಷೆಯಂತೆ ಮಳೆಯಾಗಲಿದೆ. ಆದರೆ, ವಾಡಿಕೆ ಪ್ರಮಾಣದಲ್ಲಿ ಶೇ. 95ರಷ್ಟು ಮಳೆಯಾಗಲಿದೆ. ಈ ಪೈಕಿ ಸ್ವಲ್ಪ ಹೆಚ್ಚು ಮತ್ತು ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ಉಂಟಾದಂತೆ ಪ್ರವಾಹ ಸೃಷ್ಟಿಯಾಗುವಂತಹ ಮಳೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

ವಾರ್ಷಿಕವಾಗಿ ರಾಜ್ಯದಲ್ಲಿ ಸುರಿಯುವ ಮಳೆಯಲ್ಲಿ ಶೇ. 70 ರಿಂದ 80ರಷ್ಟು ಮಳೆ ಮುಂಗಾರು ಅವಧಿಯಲ್ಲಿ ಆಗುತ್ತದೆ. ಉಳಿದಂತೆ ಶೇ.20ರಷ್ಟು ಮಳೆ ಹಿಂಗಾರು ಅವಧಿಯಲ್ಲಿ ಆಗುತ್ತದೆ. ಹೀಗಾಗಿ, ನೈಋುತ್ಯ ಮುಂಗಾರು ರಾಜ್ಯಕ್ಕೆ ಅತಿ ಮುಖ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X