ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿ ಬೆನ್ನಲ್ಲೇ ಸೇನೆ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಾಚರಣೆಯ ಮಾಹಿತಿ ನೀಡಿದ್ದಾರೆ. ಈ ಪತ್ರಿಕಾಗೋಷ್ಠಿಯ ನೇತೃತ್ವವನ್ನು ಇಬ್ಬರು ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಹಿಸಿರುವುದು ವಿಶೇಷ.
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಭಾರತೀಯ ಮಹಿಳಾ ಅಧಿಕಾರಿಗಳಾದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪ್ರಮುಖ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಅಧಿಕೃತ ಪತ್ರಿಕಾಗೋಷ್ಠಿಯ ನೇತೃತ್ವವನ್ನು ವಹಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಇಬ್ಬರು ಅಧಿಕಾರಿಗಳು ಈ ಕಾರ್ಯಾಚರಣೆಯು ಪಾಕಿಸ್ತಾನಕ್ಕೆ ಭಾರತ ನೀಡಿದ ಸಂದೇಶವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಸುಳ್ಳು, ವದಂತಿಗೆ ಮುಗಿಬಿದ್ದ ಭಾರತೀಯ ಮಾಧ್ಯಮಗಳು; ಸತ್ಯ ಬಿಚ್ಚಿಡುತ್ತಿರುವ ಝುಬೇರ್
ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರು ಧರ್ಮವನ್ನು ಕೇಳಿ ಪತ್ನಿ, ಮಕ್ಕಳ ಎದುರೇ ಪುರುಷರನ್ನು ಕೊಂದಿದ್ದಾರೆ. ಈ ದಾಳಿಯ ಬಳಿಕ ನವವಿಹಾಹಿತೆ ಸೇರಿ 25 ಮಹಿಳೆಯರು ವಿಧವೆಯರಾಗಿದ್ದಾರೆ. ಈ ಮಹಿಳೆಯರ ಸಿಂಧೂರವನ್ನು ಅಳಿಸಲಾಗಿದೆ ಎಂಬ ಬಿಂಬವಾಗಿ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ.
Operation Sindoor briefing done by two women officers from two different religions- Col Sofiya Qureshi and Wg Cdr Vyomika Singh. Excellent messaging.
— Rohini Singh (@rohini_sgh) May 7, 2025
pic.twitter.com/chEXi5l5Mo
ಈ ದಾಳಿಯನ್ನು ದೇಶದಲ್ಲಿ ಕೋಮು ಸಂಘರ್ಷ ಸೃಷ್ಟಿಸುವ ದೃಷ್ಟಿಯಿಂದಲೇ ನಡೆಸಲಾಗಿದೆ, ಆದರೆ ವಿಫಲವಾಗಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಈಗಾಗಲೇ ತಿಳಿಸಿದ್ದಾರೆ. ಈ ಕೋಮು ಘರ್ಷಣೆ ಹುಟ್ಟಿಸುವ ತಂತ್ರದ ವಿರುದ್ಧ ನಡೆಸಿದ ಕಾರ್ಯಾಚರಣೆಯ ಮಾಹಿತಿ ನೀಡಿದ ಇಬ್ಬರು ಮಹಿಳೆಯರ ಪೈಕಿ ಒಬ್ಬರು ಮುಸ್ಲಿಂ ಮಹಿಳೆ (ಕರ್ನಲ್ ಸೋಫಿಯಾ ಖುರೇಷಿ) ಎಂಬುದು ಗಮನಾರ್ಹ. ದೇಶದ ಸೌಹಾರ್ದದ ಪ್ರತೀಕ ಎಂದರೂ ತಪ್ಪಾಗಲಾರದು.
ಇದನ್ನು ಓದಿದ್ದೀರಾ? BREAKING NEWS | ಆಪರೇಷನ್ ಸಿಂಧೂರ: ಜಮ್ಮು ಕಾಶ್ಮೀರದಲ್ಲಿ ಮೂರು ಯುದ್ಧ ವಿಮಾನಗಳ ಪತನ
ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಯಾರು?
ಭಾರತೀಯ ಸೇನಾ ತರಬೇತಿ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ. ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರು 2016ರಲ್ಲಿ ಈ ಇತಿಹಾಸವನ್ನು ಬರೆದಿದ್ದಾರೆ. ಏಷ್ಯನ್ ಪ್ಲಸ್ ಬಹುರಾಷ್ಟ್ರೀಯ ಕ್ಷೇತ್ರ ತರಬೇತಿಯಲ್ಲಿ ಭಾಗಿಯಾದ ಮಹಿಳಾ ಅಧಿಕಾರಿ ಖುರೇಷಿ. ಈ ತರಬೇತಿಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಆದರೆ ಏಕೈಕ ಮಹಿಳಾ ಕಮಾಂಡರ್ ಖುರೇಷಿ ಆಗಿದ್ದರು. ಆಗ ಅವರ ವಯಸ್ಸು 35 ಆಗಿತ್ತು. ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ತರಬೇತಿ ಮಾಹಿತಿಗಳನ್ನು ಒದಗಿಸುವಲ್ಲಿ ಅವರ ಪಾತ್ರ ಮಹತ್ತರ. ಕರ್ನಲ್ ಸೋಫಿಯಾ ಖುರೇಷಿ ಹಲವು ವರ್ಷಗಳ ಕಾಲ ಸೇನೆಯಲ್ಲಿ ತರಬೇತಿ ಅನುಭವ ಹೊಂದಿದ್ದಾರೆ.
ಮತ್ತೊಂದೆಡೆ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಬಹು ಅಪಾಯಕಾರಿ ವಾಯು ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಗೆ ಈಗಾಗಲೇ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈಶಾನ್ಯದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳ ಸಮಯದಲ್ಲಿ ಅವರು ನೀಡಿದ ಸೇವೆಗಳಿಗೆ ಸಿಗ್ನಲ್ ಆಫೀಸರ್-ಇನ್-ಚೀಫ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. 2004ರಲ್ಲಿ IAFಗೆ ನೇಮಕಗೊಂಡ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳನ್ನು ಚಲಾಯಿಸುವ ಮೂಲಕ ಹೆಲಿಕಾಪ್ಟರ್ ಹಾರಾಟದಲ್ಲಿ ಒಂದು ಅವಘಡವೂ ಸಂಭವಿಸದೆ ಸೇನೆ ನೀಡಿದ ದಾಖಲೆಯನ್ನು ಹೊಂದಿದ್ದಾರೆ. 2017ರಲ್ಲಿ ವಿಂಗ್ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ಅವರು, IAFನಲ್ಲಿ ಮಹಿಳೆಯರಿಗೆ ಮಹಿಳೆಯರಿಗೆ ಮಾರ್ಗದರ್ಶಕರು.
