ಆಪರೇಷನ್ ಸಿಂಧೂರ | ಸುಳ್ಳು, ವದಂತಿಗೆ ಮುಗಿಬಿದ್ದ ಭಾರತೀಯ ಮಾಧ್ಯಮಗಳು; ಸತ್ಯ ಬಿಚ್ಚಿಡುತ್ತಿರುವ ಝುಬೇರ್

Date:

ಬುಧವಾರ ಮುಂಜಾನೆ, ಪಾಕಿಸ್ತಾನದ 9 ಪ್ರದೇಶಗಳ ಮೇಲೆ ಭಾರತ ದಾಳಿ ಮಾಡಿದೆ. ಈ ದಾಳಿ ಬೆನ್ನಲ್ಲೇ ನಾನಾ ರೀತಿಯ ಸುದ್ದಿಗಳು, ವದಂತಿಗಳು ಹರಿದಾಡುತ್ತಿವೆ. ಇಸ್ರೇಲ್‌, ಹಮಾಸ್‌, ಇರಾನ್‌ನಲ್ಲಿ ಇತ್ತೀಚೆಗೆ ನಡೆದಿದ್ದ ದಾಳಿಗಳ ವಿಡಿಯೋಗಳು, ಫೋಟೋಗಳನ್ನು ಭಾರತ ನಡೆಸಿದ ದಾಳಿ ಸಮಯದ ದೃಶ್ಯಾವಳಿಗಳು ಎಂದು ಭಾರತೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಅಲ್ಲದೆ, ಪಾಕಿಸ್ತಾನವೂ ಕೆಲವು ಸುಳ್ಳುಗಳನ್ನು ಹೇಳುತ್ತಿದೆ. ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು, ಸತ್ಯವನ್ನು ತಿಳಿಸುವಲ್ಲಿ ‘ಆಲ್ಟ್‌ ನ್ಯೂಸ್‌’ ಸಹ ಸಂಸ್ಥಾಪಕ, ಫ್ಯಾಕ್ಟ್‌ಚೆಕರ್ ಮೊಹಮ್ಮದ್ ಝುಬೇರ್ ತೊಡಗಿದ್ದಾರೆ. ಮುಂಜಾನೆಯಿಂದ ಈವರೆಗೆ ಹತ್ತಾರು ಸುಳ್ಳು ಸುದ್ದಿಗಳನ್ನು ಬೆಳಕಿಗೆ ತಂದಿದ್ದಾರೆ.

- Advertisement -

ಭಾರತದ ದಾಳಿ ವೇಳೆ, ಭಾರತೀಯ ಸೇನೆ ಸೇರಿದ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಪಾಕ್‌ ಹೊಡೆದಿರುವುದು ಡ್ರೋನ್‌ಗಳನ್ನಷ್ಟೇ ಎಂಬ ಮಾಹಿತಿಯನ್ನು ಝುಬೇರ್ ಕಲೆ ಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಗಾಜಾ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯ ವೇಳೆ ಸಂಭವಿಸಿದ್ದ ಸ್ಪೋಟಗಳ ವಿಡಿಯೋಗಳನ್ನು ಹಲವಾರು ನೆಟ್ಟಿಗರು ಭಾರತದ ಮೇಲೆ ನಡೆಸಿದ ದಾಳಿಯ ದೃಶ್ಯಾವಳಿಗಳೆಂದು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳ ಹಿನ್ನೆಲೆಯನ್ನು ಹುಡುಕಿ ಹೊರತೆಗೆದು ಜನರಿಗೆ ಸತ್ಯಗಳನ್ನು ಝುಬೇರ್ ತಿಳಿಸಿದ್ದಾರೆ.

ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯು ಹಳೆಯ ಮತ್ತು ಎಡಿಟ್ ಮಾಡಿದ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದು, ಅದು ಪಾಕ್ ಮೇಲೆ ಭಾರತ ನಡೆಸಿದ ದಾಳಿಯ ವಿಡಿಯೋವೆಂದು ವರದಿ ಬಿತ್ತರಿಸಿದೆ. ಆ ವಿಡಿಯೋ ನೈಜ ವಿಡಿಯೋ ಅಲ್ಲ. ಅದೊಂದು ಎಡಿಟ್ ಮಾಡಲಾದ ವಿಡಿಯೋ ಎಂಬುದನ್ನು ಝುಬೇರ್ ಕಂಡುಹಿಡಿದಿದ್ದಾರೆ.

ಇನ್ನು, ವಿಡಿಯೋ ಗೇಮ್‌ನ ವಿಡಿಯೋಗಳನ್ನು ಪಾಕ್ ಮೇಲಿನ ದಾಳಿಯ ವಿಡಿಯೋಗಳೆಂದು ಹಲವಾರು ಹಂಚಿಕೊಂಡಿದ್ದಾರೆ. ಅಂತಹ ನಕಲಿ ವಿಡಿಯೋಗಳು, ಸುಳ್ಳು ವದಂತಿಗಳನ್ನು ಝುಬೇರ್ ಬಹಿರಂಗಗೊಳಿಸಿದ್ದಾರೆ.

ಸತ್ಯಶೋಧನೆ ಮತ್ತು ನೈಜ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಝುಬೇರ್ ಅವರನ್ನು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಝುಬೇರ್ ಅವರ ಆಲ್ಟ್‌ನ್ಯೂಸ್‌ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಇದೇ ಕೆಲಸವನ್ನು ಸರ್ಕಾರ ಮಾಡುವುದಿದ್ದರೆ, 100 ಕೋಟಿ ರೂ. ಬಜೆಟ್‌ ಮೀಸಲಿಡುತ್ತಿತ್ತು ಎಂದು ಕೆಲವರು ಸರ್ಕಾರವನ್ನು ಟ್ರೋಲ್ ಮಾಡಿದ್ದಾರೆ.

ಸತ್ಯವನ್ನು ಜನರ ಮುಂದಿಡುತ್ತಿರುವ ಝುಬೇರ್ ಅವರು ಭಾರತ ರತ್ನ ಪ್ರಶಸ್ತಿ ಪಡೆಯಲು ಅರ್ಹರು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಭಾರತೀಯರು, ನಾವು ಝುಬೇರ್ ಅವರ ಕೆಲಸವನ್ನು ಮೆಚ್ಚಲೇಬೇಕು ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ

ತಮಿಳುನಾಡು ಸರ್ಕಾರವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‌ಗಳಲ್ಲಿ ಜಾರಿಗೆ...

ಉತ್ತರಾಖಂಡ | ₹135.95 ಕೋಟಿ ಸಂಸದರ ನಿಧಿಯಲ್ಲಿ ಬಳಕೆಯಾಗಿದ್ದು ಕೇವಲ ಶೇ.18 ಮಾತ್ರ

ಉತ್ತರಾಖಂಡದ ಲೋಕಸಭೆ ಮತ್ತು ರಾಜ್ಯಸಭೆಯ ಹಾಲಿ ಸಂಸದರು ತಮಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ...