ಬುಧವಾರ ಮುಂಜಾನೆ, ಪಾಕಿಸ್ತಾನದ 9 ಪ್ರದೇಶಗಳ ಮೇಲೆ ಭಾರತ ದಾಳಿ ಮಾಡಿದೆ. ಈ ದಾಳಿ ಬೆನ್ನಲ್ಲೇ ನಾನಾ ರೀತಿಯ ಸುದ್ದಿಗಳು, ವದಂತಿಗಳು ಹರಿದಾಡುತ್ತಿವೆ. ಇಸ್ರೇಲ್, ಹಮಾಸ್, ಇರಾನ್‌ನಲ್ಲಿ ಇತ್ತೀಚೆಗೆ ನಡೆದಿದ್ದ ದಾಳಿಗಳ ವಿಡಿಯೋಗಳು, ಫೋಟೋಗಳನ್ನು ಭಾರತ ನಡೆಸಿದ ದಾಳಿ ಸಮಯದ ದೃಶ್ಯಾವಳಿಗಳು ಎಂದು ಭಾರತೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಅಲ್ಲದೆ, ಪಾಕಿಸ್ತಾನವೂ ಕೆಲವು ಸುಳ್ಳುಗಳನ್ನು ಹೇಳುತ್ತಿದೆ. ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು, ಸತ್ಯವನ್ನು ತಿಳಿಸುವಲ್ಲಿ ‘ಆಲ್ಟ್ ನ್ಯೂಸ್’ ಸಹ ಸಂಸ್ಥಾಪಕ, ಫ್ಯಾಕ್ಟ್‌ಚೆಕರ್ ಮೊಹಮ್ಮದ್ ಝುಬೇರ್ ತೊಡಗಿದ್ದಾರೆ. ಮುಂಜಾನೆಯಿಂದ ಈವರೆಗೆ ಹತ್ತಾರು ಸುಳ್ಳು ಸುದ್ದಿಗಳನ್ನು ಬೆಳಕಿಗೆ ತಂದಿದ್ದಾರೆ.
ಭಾರತದ ದಾಳಿ ವೇಳೆ, ಭಾರತೀಯ ಸೇನೆ ಸೇರಿದ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಪಾಕ್ ಹೊಡೆದಿರುವುದು ಡ್ರೋನ್‌ಗಳನ್ನಷ್ಟೇ ಎಂಬ ಮಾಹಿತಿಯನ್ನು ಝುಬೇರ್ ಕಲೆ ಹಾಕಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯ ವೇಳೆ ಸಂಭವಿಸಿದ್ದ ಸ್ಪೋಟಗಳ ವಿಡಿಯೋಗಳನ್ನು ಹಲವಾರು ನೆಟ್ಟಿಗರು ಭಾರತದ ಮೇಲೆ ನಡೆಸಿದ ದಾಳಿಯ ದೃಶ್ಯಾವಳಿಗಳೆಂದು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳ ಹಿನ್ನೆಲೆಯನ್ನು ಹುಡುಕಿ ಹೊರತೆಗೆದು ಜನರಿಗೆ ಸತ್ಯಗಳನ್ನು ಝುಬೇರ್ ತಿಳಿಸಿದ್ದಾರೆ.
ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯು ಹಳೆಯ ಮತ್ತು ಎಡಿಟ್ ಮಾಡಿದ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದು, ಅದು ಪಾಕ್ ಮೇಲೆ ಭಾರತ ನಡೆಸಿದ ದಾಳಿಯ ವಿಡಿಯೋವೆಂದು ವರದಿ ಬಿತ್ತರಿಸಿದೆ. ಆ ವಿಡಿಯೋ ನೈಜ ವಿಡಿಯೋ ಅಲ್ಲ. ಅದೊಂದು ಎಡಿಟ್ ಮಾಡಲಾದ ವಿಡಿಯೋ ಎಂಬುದನ್ನು ಝುಬೇರ್ ಕಂಡುಹಿಡಿದಿದ್ದಾರೆ.
That's an edited video of @republic pic.twitter.com/p8AjXKHzsT
— Mohammed Zubair (@zoo_bear) May 7, 2025
ಇನ್ನು, ವಿಡಿಯೋ ಗೇಮ್‌ನ ವಿಡಿಯೋಗಳನ್ನು ಪಾಕ್ ಮೇಲಿನ ದಾಳಿಯ ವಿಡಿಯೋಗಳೆಂದು ಹಲವಾರು ಹಂಚಿಕೊಂಡಿದ್ದಾರೆ. ಅಂತಹ ನಕಲಿ ವಿಡಿಯೋಗಳು, ಸುಳ್ಳು ವದಂತಿಗಳನ್ನು ಝುಬೇರ್ ಬಹಿರಂಗಗೊಳಿಸಿದ್ದಾರೆ.
Old video from Gaza. Not recent from Pakistan. https://t.co/kFXZ5LyhyG pic.twitter.com/jnnMcLtwgT
— Mohammed Zubair (@zoo_bear) May 7, 2025
ಸತ್ಯಶೋಧನೆ ಮತ್ತು ನೈಜ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಝುಬೇರ್ ಅವರನ್ನು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಝುಬೇರ್ ಅವರ ಆಲ್ಟ್‌ನ್ಯೂಸ್ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಇದೇ ಕೆಲಸವನ್ನು ಸರ್ಕಾರ ಮಾಡುವುದಿದ್ದರೆ, 100 ಕೋಟಿ ರೂ. ಬಜೆಟ್ ಮೀಸಲಿಡುತ್ತಿತ್ತು ಎಂದು ಕೆಲವರು ಸರ್ಕಾರವನ್ನು ಟ್ರೋಲ್ ಮಾಡಿದ್ದಾರೆ.
ಸತ್ಯವನ್ನು ಜನರ ಮುಂದಿಡುತ್ತಿರುವ ಝುಬೇರ್ ಅವರು ಭಾರತ ರತ್ನ ಪ್ರಶಸ್ತಿ ಪಡೆಯಲು ಅರ್ಹರು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವು ಭಾರತೀಯರು, ನಾವು ಝುಬೇರ್ ಅವರ ಕೆಲಸವನ್ನು ಮೆಚ್ಚಲೇಬೇಕು ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.
I want thisbook