ಬಿಜೆಪಿ ಭದ್ರಕೋಟೆ ಗುಜರಾತ್‌ನಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ನೋಟಾ ಮತ!

Date:

Advertisements

ಗುಜರಾತ್ ಲೋಕಸಭಾ ಕ್ಷೇತ್ರಗಳಲ್ಲಿ ನೋಟಾ (ನನ್ ಆಫ್ ದಿ ಎಬೋವ್) ಎಂಬುವುದು ಓರ್ವ ಅಭ್ಯರ್ಥಿಯಾಗಿದ್ದರೆ ಖಂಡಿತವಾಗಿಯೂ ಚುನಾವಣೆಯಲ್ಲಿ ಉತ್ತಮ ಮತಗಳನ್ನು ಪಡೆಯುವುದು ಖಂಡಿತ. ಯಾಕೆಂದರೆ ಬಿಜೆಪಿಯ ಭದ್ರಕೋಟೆ ಗುಜರಾತ್‌ನಲ್ಲೇ ಬರೋಬ್ಬರಿ 4.60 ಲಕ್ಷ ನೋಟಾ ಮತಗಳನ್ನು ಹಾಕಲಾಗಿದೆ.

ಗುಜರಾತ್‌ನಲ್ಲಿ ಬಿಜೆಪಿ 2019ರಲ್ಲಿ ಎಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಬನಸ್ಕಾಂತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆನಿಬೆನ್ ಠಾಕೂರ್ ಅವರು ಬಿಜೆಪಿಯ ರೇಖಾಬೆನ್ ಚೌಧರಿ ಅವರನ್ನು 30,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೂ ಕೂಡಾ ನೋಟಾ ಮತಗಳ ಪ್ರಮಾಣ ಪ್ರಸ್ತುತ ಆಡಳಿತ ಪಕ್ಷದ ವಿರುದ್ಧ ಹೆಚ್ಚುತ್ತಿರುವ ಭಿನ್ನಮತದ ಅಲೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನು ಓದಿದ್ದೀರಾ?  ಕಣದಿಂದ ಹಿಂದೆ ಸರಿದ ಇಂದೋರ್‌ ಕಾಂಗ್ರೆಸ್ ಅಭ್ಯರ್ಥಿ; ನೋಟಾದತ್ತ ಜನರ ಚಿತ್ತ!

Advertisements

ನೋಟಾ

ಗುಜರಾತ್‌ನ ಇಬ್ಬರು ಪ್ರಮುಖ ಬಿಜೆಪಿ ಅಭ್ಯರ್ಥಿಗಳಾದ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತೀ ಅಧಿಕ ಮತಗಳ ಅಂತರದಲ್ಲಿ ಗೆಲುವ ಪಡೆದುಕೊಂಡಿದ್ದಾರೆ. ಅದೇನೇ ಇದ್ದರೂ, ಅವರ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೋಟಾ ಮತಗಳನ್ನು ಜನರು ಹಾಕಿದ್ದಾರೆ.

ಗುಜರಾತ್‌ನಲ್ಲಿ ನೋಟಾಗೆ ಒಟ್ಟು 4,60,341 ಮತಗಳು ಚಲಾವಣೆಯಾಗಿದ್ದು, ಒಟ್ಟು ಮತಗಳ ಶೇಕಡ 1.60 ರಷ್ಟಿದ್ದರೆ, ಸ್ವತಂತ್ರರು ಶೇಕಡ 1.89 ಪಡೆದಿದ್ದಾರೆ. ಅಮಿತ್ ಶಾ ಕ್ಷೇತ್ರವಾದ ಗಾಂಧಿನಗರದಲ್ಲಿ ಸುಮಾರು 22,005 ನೋಟಾ ಮತ ಚಲಾವಣೆಯಾಗಿದೆ. ಸಿ.ಆರ್.ಪಾಟೀಲ ಕ್ಷೇತ್ರವಾದ ನವಸಾರಿಯಲ್ಲಿ 20,462 ನೋಟಾ ಮತಗಳು ದಾಖಲಾಗಿವೆ.

ಅಂಕಿಅಂಶಗಳ ಪ್ರಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಟ್ಟು 10,10,972 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ 2,66,256 ಮತಗಳನ್ನು ಗಳಿಸಿದ್ದಾರೆ. ಅಮಿತ್ ಶಾ ಅವರು ಪಟೇಲ್ ಅವರನ್ನು 7,44,716 ಮತಗಳ ಅಂತರದಿಂದ ಸೋಲಿಸಿದ್ದಾರೆ. ಗುಜರಾತ್‌ನ ನವಸಾರಿಯಲ್ಲಿ ಬಿಜೆಪಿಯ ಸಿಆರ್ ಪಾಟೀಲ್ 7.73 ಲಕ್ಷ ಮತಗಳ ಅಂತರವನ್ನು ಸಾಧಿಸಿದ್ದಾರೆ.

ಇದನ್ನು ಓದಿದ್ದೀರಾ?  Viral video: ಅಮಿತ್ ಶಾ ವಿರುದ್ಧ ಸಿಡಿಮಿಡಿಗೊಂಡ ಯುಪಿ ಬಿಜೆಪಿ ಕಾರ್ಯಕರ್ತ: ವಿಡಿಯೋ ವೈರಲ್!

ದಾಹೋದ್ ಕ್ಷೇತ್ರದಲ್ಲಿ ಅತಿ ಹೆಚ್ಚು ನೋಟಾ ಮತಗಳು (34,938) ದಾಖಲಾಗಿದ್ದರೆ, ಅಹಮದಾಬಾದ್ ಪೂರ್ವದಲ್ಲಿ ಕಡಿಮೆ ನೋಟಾ ಮತಗಳು (10,503) ಹಾಕಲಾಗಿದೆ. ಅಹಮದಾಬಾದ್ ಪಶ್ಚಿಮದಲ್ಲಿ 14,007 ನೋಟಾ ಮತಗಳು, ರಾಜ್‌ಕೋಟ್‌ನಲ್ಲಿ 15,922 ಮತ್ತು ವಡೋದರಾದಲ್ಲಿ 18,388 ನೋಟಾ ಮತ ಚಲಾವಣೆ ಮಾಡಲಾಗಿದೆ.

ಛೋಟಾ ಉದೇಪುರ್ 29655, ಬಾರ್ಡೋಲಿ 25542, ಭರೂಚ್ 23283, ಬನಸ್ಕಾಂತ 22167 ಮತ್ತು ಸಬರ್ಕಾಂತ 21076, ಪಂಚಮಹಲ್ ಕ್ಷೇತ್ರದಲ್ಲಿ 20103, ಭಾವನಗರದಲ್ಲಿ 18765, ಕಛ್‌ನಲ್ಲಿ 18742, ಖೇಡಾದಲ್ಲಿ 18824, ವಲ್ಸಾದ್‌ನಲ್ಲಿ 18373, ಪಟಾನ್‌ನಲ್ಲಿ 16722, ಆನಂದ್‌ನಲ್ಲಿ 15930, ಜುನಾಗಢದಲ್ಲಿ 14013, ಪೋರಬಂದರ್‌ನಲ್ಲಿ 13563, ಸುರೇಂದ್ರನಗರದಲ್ಲಿ 13299, ಮೆಹ್ಸಾನಾದಲ್ಲಿ 11626, ಅಮ್ರೇಲಿಯಲ್ಲಿ 11349 ಮತ್ತು ಜಾಮ್‌ನಗರದಲ್ಲಿ 11084 ಮತಗಳ ಚಲಾವಣೆಯಾಗಿದೆ.

ಅಂಚೆ ಮತಪತ್ರದಲ್ಲಿಯೂ ನೋಟಾ

ಮುಖ್ಯವಾಗಿ, ಅಂಚೆ ಮತಪತ್ರದ ಮತದಾನದಲ್ಲಿಯೂ ನೋಟಾ ಮತಗಳು ಚಲಾವಣೆಯಾಗಿದ್ದು, 11,089 ಚುನಾವಣಾ ಕಾರ್ಯಕರ್ತರು ನೋಟಾ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ. ಭಾವನಗರ ಕ್ಷೇತ್ರದಲ್ಲಿ ಅಂಚೆ ಮತಪತ್ರಗಳಲ್ಲಿ ಅತಿ ಹೆಚ್ಚು ನೋಟಾ ಮತಗಳು ದಾಖಲಾಗಿದ್ದು, 1,048 ಮಂದಿ ನೋಟಾಗೆ ಮತ ಹಾಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X