ಅಕ್ರಮ ಹಣ ವರ್ಗಾವಣೆಯ ವಿರೋಧಿ ನಿಯಮಗಳನ್ನು(ಪಿಎಂಎಲ್‌ಎ) ಉಲ್ಲಂಘಿಸಿದ್ದಕ್ಕಾಗಿ ಭಾರತದ ಆರ್ಥಿಕ ಗುಪ್ತಚರ ದಳ(ಎಫ್‌ಐಯು-ಐಎನ್‌ಡಿ) ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆಗೆ 5,49,00,000 ಕೋಟಿ ರೂ. ದಂಡ ವಿಧಿಸಿದೆ.
ಪಿಎಂಎಲ್‌ಎ ಅಡಿ ಕಾರ್ಯನಿರ್ವಹಿಸುವ ಎಫ್‌ಐಯು-ಐಎನ್‌ಡಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆ ವಿರುದ್ಧ ನಿಯಮಗಳ ಉಲ್ಲಂಘನೆಗಾಗಿ ಈ ಕ್ರಮ ಕೈಗೊಂಡಿದೆ.
ಬ್ಯಾಂಕ್ ಪಿಎಂಎಲ್‌ಎ ಹಾಗೂ ಇದರ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿರುವ ವಿವರಗಳನ್ನು ಒಳಗೊಂಡ ನಿಯಮಗಳನ್ನು ಎಫ್‌ಐಯು-ಐಎನ್‌ಡಿ ನಿರ್ದೇಶಕರು ಜಾರಿಗೊಳಿಸಿದ್ದಾರೆ.
ಆನ್‌ಲೈನ್ ಜೂಜಾಟ ಒಳಗೊಂಡ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಕಾನೂನು ಜಾರಿ ಸಂಸ್ಥೆಗಳು ಒದಗಿಸಿರುವ ನಿರ್ದಿಷ್ಟ ಮಾಹಿತಿಯಿಂದ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ
ಅಪರಾಧ ಎಂದು ಪರಿಗಣಿಸಲಾದ ಈ ಚಟುವಟಿಕೆಗಳಿಂದ ಬಂದ ಹಣದಿಂದ ಪೇಮೆಂಟ್ಸ್ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆ ಲಾಭ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.
ಪಿಎಂಎಲ್ ನಿಯಮಗಳ ಹಲವು ಸೆಕ್ಷನ್‌ಗಳನ್ನು ಉಲ್ಲಂಘಿಸಿದ ಲಭ್ಯವಾದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆಗೆ ಎಫ್‌ಐಯು-ಐಎನ್‌ಡಿ ಹಲವು ನಿಯಮಗಳಡಿ ನೋಟಿಸ್ ಜಾರಿಗೊಳಿಸಿತ್ತು.
ಲಿಖಿತ ಹಾಗೂ ಮೌಖಿಕ ವಾದಗಳನ್ನು ಪರಿಗಣಿಸಿದ ನಂತರ ಎಫ್‌ಐಯು-ಐಎನ್‌ಡಿ ನಿರ್ದೇಶಕರು ಪೇಮೆಂಟ್ಸ್ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆ ಅಕ್ರಮಗಳನ್ನು ವೆಸಗಿರುವುದು ರುಜುವಾತಾಗಿದೆ ಎಂದು ನಿರ್ಧರಿಸಿದರು. ಪರಿಣಾಮವಾಗಿ ಸಂಸ್ಥೆಗೆ 5,49,00,000 ಕೋಟಿ ರೂ. ದಂಡ ವಿಧಿಸಲಾಗಿದೆ.