ಅಕ್ರಮ ಹಣ ವರ್ಗಾವಣೆ : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ರೂ. ದಂಡ

Date:

ಅಕ್ರಮ ಹಣ ವರ್ಗಾವಣೆಯ ವಿರೋಧಿ ನಿಯಮಗಳನ್ನು(ಪಿಎಂಎಲ್‌ಎ) ಉಲ್ಲಂಘಿಸಿದ್ದಕ್ಕಾಗಿ ಭಾರತದ ಆರ್ಥಿಕ ಗುಪ್ತಚರ ದಳ(ಎಫ್‌ಐಯು-ಐಎನ್‌ಡಿ) ಸಂಸ್ಥೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆಗೆ 5,49,00,000 ಕೋಟಿ ರೂ. ದಂಡ ವಿಧಿಸಿದೆ.

ಪಿಎಂಎಲ್‌ಎ ಅಡಿ ಕಾರ್ಯನಿರ್ವಹಿಸುವ ಎಫ್‌ಐಯು-ಐಎನ್‌ಡಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆ ವಿರುದ್ಧ ನಿಯಮಗಳ ಉಲ್ಲಂಘನೆಗಾಗಿ ಈ ಕ್ರಮ ಕೈಗೊಂಡಿದೆ.

ಬ್ಯಾಂಕ್ ಪಿಎಂಎಲ್‌ಎ ಹಾಗೂ ಇದರ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿರುವ ವಿವರಗಳನ್ನು ಒಳಗೊಂಡ ನಿಯಮಗಳನ್ನು ಎಫ್‌ಐಯು-ಐಎನ್‌ಡಿ ನಿರ್ದೇಶಕರು ಜಾರಿಗೊಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆನ್‌ಲೈನ್‌ ಜೂಜಾಟ ಒಳಗೊಂಡ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಕಾನೂನು ಜಾರಿ ಸಂಸ್ಥೆಗಳು ಒದಗಿಸಿರುವ ನಿರ್ದಿಷ್ಟ ಮಾಹಿತಿಯಿಂದ ತನಿಖೆಯನ್ನು ಕೈಗೊಳ್ಳಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ

ಅಪರಾಧ ಎಂದು ಪರಿಗಣಿಸಲಾದ ಈ ಚಟುವಟಿಕೆಗಳಿಂದ ಬಂದ ಹಣದಿಂದ ಪೇಮೆಂಟ್ಸ್‌ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆ ಲಾಭ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ.

ಪಿಎಂಎಲ್ ನಿಯಮಗಳ ಹಲವು ಸೆಕ್ಷನ್‌ಗಳನ್ನು ಉಲ್ಲಂಘಿಸಿದ ಲಭ್ಯವಾದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆಗೆ ಎಫ್‌ಐಯು-ಐಎನ್‌ಡಿ ಹಲವು ನಿಯಮಗಳಡಿ ನೋಟಿಸ್ ಜಾರಿಗೊಳಿಸಿತ್ತು.

ಲಿಖಿತ ಹಾಗೂ ಮೌಖಿಕ ವಾದಗಳನ್ನು ಪರಿಗಣಿಸಿದ ನಂತರ ಎಫ್‌ಐಯು-ಐಎನ್‌ಡಿ ನಿರ್ದೇಶಕರು ಪೇಮೆಂಟ್ಸ್‌ ಬ್ಯಾಂಕ್ಸ್ ಲಿಮಿಟೆಡ್ ಸಂಸ್ಥೆ ಅಕ್ರಮಗಳನ್ನು ವೆಸಗಿರುವುದು ರುಜುವಾತಾಗಿದೆ ಎಂದು ನಿರ್ಧರಿಸಿದರು. ಪರಿಣಾಮವಾಗಿ ಸಂಸ್ಥೆಗೆ 5,49,00,000 ಕೋಟಿ ರೂ. ದಂಡ ವಿಧಿಸಲಾಗಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನರೇಂದ್ರ ಮೋದಿಯೇ ಭಾರತದ ದೊಡ್ಡ ಸಮಸ್ಯೆ: ಎಂ ಕೆ ಸ್ಟಾಲಿನ್

ಪ್ರಸ್ತುತ ಭಾರತದ ದೊಡ್ಡ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಗಿದ್ದಾರೆ...

ಟಿಎಂಸಿ ಚುನಾವಣಾ ಪ್ರಣಾಳಿಕೆ ಬಿಡುಗಡೆ: ಸಿಎಎ, ಏಕರೂಪ ನಾಗರಿಕ ಸಂಹಿತೆ ನಿಷೇಧ

ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇಂಡಿಯಾ ಒಕ್ಕೂಟ...

ಬಸ್‌ನ ಡ್ಯಾಶ್‌ಬೋರ್ಡ್‌ನಲ್ಲಿ ‘ಫ್ಯಾಮಿಲಿ ಫೋಟೋ’ ಇರಿಸಲು ಯುಪಿ ಚಾಲಕರಿಗೆ ಮನವಿ!

ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಉತ್ತರ ಪ್ರದೇಶ ಸಾರಿಗೆ ಇಲಾಖೆ...

ಭಾರತದ ಯುವಕರದು ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿ: ರಘುರಾಂ ರಾಜನ್

ಬೃಹತ್ ಸಂಖ್ಯೆಯ ಭಾರತದ ಯುವಕರು ವಿದೇಶಗಳಿಗೆ ಹೋಗಿ ಅಲ್ಲಿ ತಮ್ಮ ಉದ್ಯಮವನ್ನು...