ಬೆಂಗಳೂರಿನ ನಗರತ್ ಪೇಟೆಯಲ್ಲಿ ನಡೆದಿದ್ದ ‘ಲೌಡ್ ಸ್ಪೀಕರ್’ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವಕರ ವಿರುದ್ದ ಇಂದು ಬಿಜೆಪಿ ಹಾಗೂ ಸಂಘಪರಿವಾರ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಭಾಗವಹಿಸಿದ್ದರು. ಆ ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಪ್ರತಿಭಟನೆಯ ವೇಳೆ ಶೋಭಾ ಕರಂದ್ಲಾಜೆ ಮಾಧ್ಯಮಗಳೊಂದಿಗೆ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ತಮಿಳುನಾಡಿನ ಜನರ ಕಣ್ಣು ಕೆಂಪಗಾಗಿಸಿದೆ.
Union Minister Shobha Karandlaje says “people from Tamil Nadu come here, get trained there and plant bombs here. Placed bomb in cafe”.
What evidence does she have to accuse Tamilians of planting bombs in Karnataka ? pic.twitter.com/KdWI3vby2I
— Arvind Gunasekar (@arvindgunasekar) March 19, 2024
ಪ್ರತಿಭಟನೆಯ ವೇಳೆ ಶೋಭಾ ಕರಂದ್ಲಾಜೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಬೆಂಗಳೂರಿನ ರಾಮೇಶ್ವರಂ ಕೆಫೆ ಘಟನೆಯನ್ನು ಉಲ್ಲೇಖಿಸಿದ್ದಾರೆ. ಈ ವೇಳೆ, “ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಇಲ್ಲಿ ಬಂದು ಬಾಂಬ್ ಹಾಕುತ್ತಾರೆ. ಕೆಫೆಯಲ್ಲಿ ಬಾಂಬ್ ಇಟ್ಟಿದ್ದೂ ಕೂಡ ಅಲ್ಲಿಂದ ಬಂದವರು” ಎಂದು ಹೇಳಿಕೆ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ..
Before she was detailed in Bengaluru today, MoS @ShobhaBJP said “people from Tamil Nadu got trained there & planted bombs in Bengaluru cafe”. Says “man from Kerala attacked 3 women with acid”. pic.twitter.com/yv7FPfVKjP
— Anusha Ravi Sood (@anusharavi10) March 19, 2024
ಅಲ್ಲದೇ, ಇದೇ ವೇಳೆ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ, ದಕ್ಷಿಣ ಕನ್ನಡದ ಕಡಬದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿಯನ್ನು ಕೂಡ ಶೋಭಾ ಕರಂದ್ಲಾಜೆ ಉಲ್ಲೇಖಿಸಿದ್ದಾರೆ.
ತಮಿಳುನಾಡು ಸಿಎಂ ಸ್ಟ್ಯಾಲಿನ್ ಆಕ್ರೋಶ
ಶೋಭಾ ಕರಂದ್ಲಾಜೆ ನೀಡಿರುವ ಈ ಹೇಳಿಕೆಯ ವಿಡಿಯೋವನ್ನು ತಮಿಳುನಾಡಿನ ಪತ್ರಕರ್ತ ಅರವಿಂದ್ ಗುಣಶೇಖರ್ ಹಂಚಿಕೊಂಡಿದ್ದು, “ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಬೆಂಗಳೂರಲ್ಲಿ ಬಾಂಬ್ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ. ತಮಿಳಿಗರ ಮೇಲೆ ಮಾಡಿರುವ ಈ ಆರೋಪಕ್ಕೆ ಸಾಕ್ಷಿ ಏನಿದೆ?” ಎಂದು ಪ್ರಶ್ನಿಸಿದ್ದಾರೆ.
Strongly condemn Union BJP Minister @ShobhaBJP‘s reckless statement. One must either be an NIA official or closely linked to the #RameshwaramCafeBlast to make such claims. Clearly, she lacks the authority for such assertions. Tamilians and Kannadigas alike will reject this… https://t.co/wIgk4oK3dh
— M.K.Stalin (@mkstalin) March 19, 2024
ಈ ವಿಡಿಯೋವನ್ನೇ ಹಂಚಿಕೊಂಡಿರುವ ತಮಿಳುನಾಡು ಸಿಎಂ ಸ್ಟ್ಯಾಲಿನ್, ಕೇಂದ್ರದ ಬಿಜೆಪಿ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಬೇಜವಾಬ್ದಾರಿತನದಿಂದ ಕೂಡಿದ ಹೇಳಿಕೆ ಇದು. ತಮಿಳರು ಮತ್ತು ಕನ್ನಡಿಗರ ನಡುವೆ ಒಡಕುಂಟು ಮಾಡಲು ಈ ಹೇಳಿಕೆ ನೀಡಿದ್ದಾರೆ. ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡಿರುವ ಶೋಭಾ ವಿರುದ್ಧ ಚುನಾವಣಾ ಆಯೋಗ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ತಮಿಳುನಾಡು ಸಿಎಂ ಸ್ಟ್ಯಾಲಿನ್ ಆಗ್ರಹಿಸಿದ್ದಾರೆ.
