ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ತೀವ್ರ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಡೀಸೆಲ್ ಮತ್ತು ವಿಮಾನ ಇಂಧನದ (ATF) ರಫ್ತು ಮೇಲಿನ ವಿಂಡ್ಫಾಲ್ ತೆರಿಗೆಯನ್ನು ಪ್ರತಿ ಲೀಟರ್ಗೆ ತಲಾ 7 ರೂಪಾಯಿ ಹೆಚ್ಚಿಸಿದೆ. ಆದರೂ, ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು 1.5 ರೂ.ಗಳಷ್ಟು ಕಡಿತಗೊಳಿಸಿದೆ.
ಹೊಸ ಆದೇಶದ ಅನ್ವಯ, ಡೀಸೆಲ್ ರಫ್ತು ಮೇಲಿನ ಸುಂಕವು ಈ ಹಿಂದೆ ಪ್ರತಿ ಲೀಟರ್ಗೆ 8.5 ರೂ. ಇತ್ತು. ಈಗ 15.5 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ, ವಿಮಾನ ಇಂಧನದ ಮೇಲಿನ ರಫ್ತು ಸುಂಕವು ಪ್ರತಿ ಲೀಟರ್ಗೆ 7.5 ರೂ. ಇದ್ದದ್ದು, ಈಗ 14.5 ರೂ.ಗಳಿಗೆ ಏರಿಕೆಯಾಗಿದೆ. ಮತ್ತೊಂದೆಡೆ, ಪೆಟ್ರೋಲ್ ರಫ್ತು ಮೇಲಿನ ತೆರಿಗೆಯು ಈ ಹಿಂದೆ ಪ್ರತಿ ಲೀಟರ್ಗೆ 4 ರೂ. ಇತ್ತು. ಇದೀಗ, 2.5 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ.
ಈ ಎಲ್ಲ ಪರಿಷ್ಕೃತ ಹೊಸ ದರಗಳು ಜುಲೈ 16 ರಿಂದಲೇ ದೇಶಾದ್ಯಂತ ಜಾರಿಗೆ ಬರಲಿವೆ.



