ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಧ್ಯಪ್ರದೇಶದಲ್ಲಿ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರವನ್ನು ಜಬಲ್‌ಪುರದಲ್ಲಿ ರೋಡ್‌ಶೋ ಮೂಲಕ ಪ್ರಾರಂಭಿಸಿದ್ದು ಈ ಸಂದರ್ಭದಲ್ಲೇ ವೇದಿಕೆ ಕುಸಿದು ಎಂಟು ಮಂದಿಗೆ ಗಾಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ರಾಜ್ಯ ಪಿಡಬ್ಲ್ಯೂಡಿ ಸಚಿವ ರಾಕೇಶ್ ಸಿಂಗ್ ಮತ್ತು ಪಕ್ಷದ ಜಬಲ್ಪುರ ಲೋಕಸಭಾ ಅಭ್ಯರ್ಥಿ ಆಶಿಶ್ ದುಬೆ ಅವರೊಂದಿಗೆ ಈ ಪ್ರಚಾರ ಕಾರ್ಯವನ್ನು ನಡೆಸಿದ್ದಾರೆ.
#WATCH | Around four people including one police personnel injured after a stage collapsed after PM Modi’s rally passed in Jabalpur, earlier today.
The injured were taken to the Victoria Hospital, Jabalpur, Madhya Pradesh pic.twitter.com/fTobikbvEH
— ANI (@ANI) April 7, 2024
ಈ ಪ್ರಚಾರದ ಬಳಿಕ ಬಹಿರಂಗ ಸಭೆಯ ಸಂದರ್ಭದಲ್ಲಿ ಜನರಿಗಾಗಿ ಮರದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಈ ಮರದ ವೇದಿಕೆಯಲ್ಲಿ ನಿಲ್ಲಲು ನೂಕುನುಗ್ಗಲು ಉಂಟಾಗಿದ್ದು ವೇದಿಕೆಯೇ ಕುಸಿದು ಬಿದ್ದಿದೆ.
ಇದನ್ನು ಓದಿದ್ದೀರಾ? ಕೇರಳ | ಅಭ್ಯರ್ಥಿ ಇಲ್ಲದೆಯೇ ಮೋದಿ ರೋಡ್‌ಶೋ; ‘ನನ್ನ ಕರೆದಿಲ್ಲ’ ಎಂದ ಸಲಾಮ್!
ವೇದಿಕೆ ಕುಸಿದ ಕಾರಣದಿಂದಾಗಿ ಓರ್ವ ಪೊಲೀಸ್ ಸೇರಿದಂತೆ ಸುಮಾರು ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕೋಪಯೋಗಿ ಸಚಿವ ರಾಕೇಶ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
“ಕೆಲವರು ಪ್ರಥಮ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ 4-5 ಜನರು ಸಣ್ಣ ಗಾಯಗಳನ್ನು ಹೊಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಸಚಿವ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಜಬಲ್ಪುರ್ ರಾಜ್ಯದ ಮಹಾಕೋಶಲ್ ಪ್ರದೇಶದ ಭಾಗವಾಗಿದೆ. ಇದು 2019 ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ವಿಫಲವಾದ ಏಕೈಕ ಲೋಕಸಭಾ ಕ್ಷೇತ್ರವಾದ ಛಿಂದ್ವಾರಾವನ್ನು ಸಹ ಒಳಗೊಂಡಿದೆ. ಉಳಿದ 28 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.
ಸಿಧಿ, ಶಹದೋಲ್ (ಎಸ್‌ಟಿ), ಮಂಡ್ಲಾ (ಎಸ್‌ಟಿ) ಮತ್ತು ಬಾಲಾಘಾಟ್ ಸೇರಿದಂತೆ ಜಬಲ್ಪುರ್ ಮತ್ತು ಛಿಂದ್ವಾರಾದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.