ವಿಶ್ವದ ಹಲವು ಭಾಗಗಳಲ್ಲಿ ಇಂದು(ಏ.08) ಸೂರ್ಯ ಗ್ರಹಣ ಗೋಚರಿಸಲಿದೆ. ವಿವಿಧ ದೇಶಗಳಲ್ಲಿ ಇಂದು ಸಂಭವಿಸುವ ಸೂರ್ಯ ಗ್ರಹಣವನ್ನು ಮೂರು ಕೋಟಿಗೂ ಅಧಿಕ ಮಂದಿ ಕಣ್ತುಂಬಿಕೊಳ್ಳಲಿದ್ದಾರೆ. ಭಾರತ ಉಪಖಂಡದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಇದು 2024ನೇ ವರ್ಷದ ಮೊದಲ ಸೂರ್ಯ ಗ್ರಹಣವಾಗಿದೆ.
ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ರಾತ್ರಿ 10.30 ಗ್ರಹಣ ಗೋಚರತೆಯನ್ನು ನೇರ ಪ್ರಸಾರ ಮಾಡಲಿದೆ. ಭಾರತದ ಕಾಲಮಾನದ ಪ್ರಕಾರ ಗ್ರಹಣವು ಇಂದು ರಾತ್ರಿ 9.12ಕ್ಕೆ ಆರಂಭಗೊಂಡರೂ ಸಂಪೂರ್ಣವಾಗಿ ಶುರುವಾಗುವುದು ರಾತ್ರಿ 10.08 ಗಂಟೆಗೆ. ಗ್ರಹಣ ಅಂತ್ಯಗೊಳ್ಳುವುದು ಏ.09 ಮುಂಜಾನೆ 2.22 ಗಂಟೆಗೆ.
ಮೆಕ್ಸಿಕೊದ ಪೆಸಿಫಿಕ್ ಕರಾವಳಿಯಲ್ಲಿ 11.07ಕ್ಕೆ ಆರಂಭಗೊಳ್ಳಲಿದ್ದು,ಇಂಗ್ಲೆಂಡಿನ ಮೈನೆ ಪ್ರದೇಶದಲ್ಲಿ 1.30 ಗಂಟೆಗೆ ಅಂತ್ಯವಾಗಲಿದೆ.ಇಷ್ಟು ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಗೋಚರಿಸುವ ಸಮಯ 4.28 ಸೆಕೆಂಡ್‌ಗಳು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
ಗ್ರಹಣವು ಅಮೆರಿಕ, ಇಂಗ್ಲೆಂಡ್, ಕೆನಡಾ, ಮೆಕ್ಸಿಕೊ, ಬರ್ಮುಡಾ, ರಷ್ಯಾ, ಸ್ಪೇನ್, ಕೊಲಂಬಿಯಾ ನದರ್ಲ್ಯಾಂಡ್, ಐರ್ಲ್ಯಾಂಡ್, ಐಸ್ಲ್ಯಾಂಡ್, ಜಮೈಕಾ, ನಾರ್ವೆ, ಪನಾಮಾ ಸೇರಿದಂತೆ ಹಲವು ದೇಶಗಳಲ್ಲಿ ಗೋಚರವಾಗಲಿದೆ.
ಭಾರತದಲ್ಲಿ ಬೆಂಕಿಯ ಉಂಗುರದ ರೀತಿಯ ಸೂರ್ಯ ಗ್ರಹಣವನ್ನು ವೀಕ್ಷಿಸಬೇಕಾದರೆ ಮೇ 21, 2031ರವರೆಗೆ ಕಾಯಬೇಕು. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವು ಕಡೆ ಬೆಂಕಿಯ ಉಂಗುರದ ರೀತಿಯ ಸೂರ್ಯ ಗ್ರಹಣ ಗೋಚರಿಸಲಿದೆ.
ಆ ಸಮಯದಲ್ಲಿ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಉಪಗ್ರಹವು ಶೇ.28.87 ರಷ್ಟು ಹಾದು ಹೋಗಲಿದೆ.