ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ತೋರಿಸಿದ ಪ್ರೀತಿಯ ಕುರಿತು ವ್ಯಂಗ್ಯವಾಡಿರುವ ಕೇರಳ ತಲಶ್ಶೇರಿ ಧರ್ಮಪ್ರಾಂತ್ಯದ ಆರ್ಚ್ಬಿಷಪ್ ಮಾರ್ ಜೋಸೆಫ್ ಪಂಪ್ಲನಿ, “ದೌರ್ಜನ್ಯಕ್ಕೊಳಗಾಗಿರುವ ಮಣಿಪುರದ ಸಹೋದರಿಯರ ಮೇಲೂ ಬೈಡನ್ ಅವರಿಗೆ ತೋರಿಸದಷ್ಟೇ ಪ್ರೀತಿಯನ್ನು ತೋರಿಸಿ” ಎಂದು ಹೇಳಿದ್ದಾರೆ.
“ಪ್ರಧಾನಿ ಮೋದಿ ತಾವು ಯಾವುದೇ ಒಂದು ಸಮುದಾಯದ ಪ್ರಧಾನಿ ಅಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು,” ಎಂದು ಕಾಸರಗೋಡು ಸಂಸದ ರಾಜಮೋಹನ್ ಉನ್ನಿತ್ತನ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹದಲ್ಲಿ ಆರ್ಚ್ ಬಿಷಪ್ ಮಾತನಾಡಿದರು.
ಮಣಿಪುರದ ಹಿಂಸಾಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದ ಬಿಷಪ್, ‘ರಾಹುಲ್ ಗಾಂಧಿ ಅವರ ಪ್ರಯತ್ನಗಳು ಅವರು ಅಲ್ಪಸಂಖ್ಯಾತರೊಂದಿಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿದರಷ್ಟೇ ಸಾಲದು. ಎಲ್ಲರ ಮೇಲೂ ಪ್ರೀತಿಯಿರಬೇಕು” ಎಂದೂ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ | ಭಾರತ್–ಪಾಕ್ ಪಂದ್ಯದ ಮೀಸಲು ದಿನದಲ್ಲೂ ಮಳೆ ಕಾಟ; ಫೈನಲ್ ಪಂದ್ಯ ಸ್ಥಳಾಂತರ!
ಸಮಾನ ನಾಗರಿಕ ಸಂಹಿತೆ ಪ್ರಸ್ತಾಪ ಸಹಿತ ಕೇಂದ್ರದ ನಿಲುವನ್ನು ಖಂಡಿಸಿ ಕಾಸರಗೋಡು ಸಂಸದ ಉನ್ನಿತ್ತನ್ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ‘ಜಿ20 ಶೃಂಗಸಭೆಯನ್ನು ಮೋದಿ ತಮ್ಮ ಜನಪ್ರಿಯತೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರವು ತಮ್ಮ ಅಧಿಕೃತ ಕಾರ್ಯಕ್ರಮಗಳಲ್ಲಿ ‘ಭಾರತ್’ ಅನ್ನು ಬಳಸಲು ಪ್ರಾರಂಭಿಸಿತು. ಏಕೆಂದರೆ ಅದು ವಿರೋಧ ಪಕ್ಷದ ಇಂಡಿಯಾ ಒಕ್ಕೂಟಕ್ಕೆ ಹೆದರುತ್ತದೆ” ಎಂದು ಅವರು ಆರೋಪಿಸಿದರು.