ಸತ್ಯ ಹೇಳುತ್ತೇನೆಂದು ಪ್ರಧಾನಿ ಯಾವಾಗಲು ನನ್ನ ಮಾತುಗಳನ್ನು ತಿರುಚುತ್ತಾರೆ; ರಾಹುಲ್ ಗಾಂಧಿ

Date:

Advertisements

‘ಶಕ್ತಿ’ ವಿಷಯದ ಬಗ್ಗೆ ಹಿಂದೆ ನುಡಿದಿದ್ದ ತಮ್ಮ ಮಾತುಗಳನ್ನು ತಿರುಚಿರುವ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, “ಮೋದಿ ಅವರಿಗೆ ನನ್ನ ಮಾತು ಇಷ್ಟವಿಲ್ಲ. ನಾನು ಆಳವಾದ ಸತ್ಯವನ್ನು ಹೇಳುತ್ತೇನೆ ಎಂಬುದು ಅವರಿಗೆ ಗೊತ್ತಿರುವ ಕಾರಣ ಅವರು ಯಾವಾಗಲು ನನ್ನ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ಬದಲಿಸಲು ಪ್ರಯತ್ನಿಸುತ್ತಾರೆ” ಎಂದು ತಿಳಿಸಿದ್ದಾರೆ.

‘ಶಕ್ತಿ’ಯನ್ನು ನಾನು ಉಲ್ಲೇಖಿಸಿದ್ದು,ಶಕ್ತಿಯ ಮುಖವಾಡ ಹಾಕಿಕೊಂಡಿರುವ ಮೋದಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎಂದು. ಇಂತಹ ಶಕ್ತಿಯು ಇಂದು ಭಾರತದ ತನಿಖಾ ಸಂಸ್ಥೆಗಳಾದ ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮ, ಭಾರತದ ಉದ್ಯಮ ಹಾಗೂ ಭಾರತದ ಸಾಂವಿಧಾನಿಕ ರಚನೆಯನ್ನು ತನ್ನ ಹಿಡಿತಗಳಿಂದ ಭಾರತದ ಧನಿಗಳನ್ನು ಸೆರೆ ಹಿಡಿದುಕೊಂಡಿದೆ ಎಂದು ರಾಹುಲ್ ಹೇಳಿದ್ದಾರೆ.

Advertisements

ಇದೇ ಶಕ್ತಿಯಾದ ನರೇಂದ್ರ ಮೋದಿ ಕೆಲವು ಸಾವಿರ ರೂ.ಗಳ ಸಾಲವನ್ನು ತೀರಿಸದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಶ್ರೀಮಂತರ ಸಾವಿರಾರು ಕೋಟಿ ರೂ. ಸಾಲವನ್ನು ತೀರಿಸುತ್ತದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೇಳುವುದು ಹಬ್ಬ, ಮಾಡುವುದು ಯುದ್ಧ, ಸಾಯುವುದು ಸೈನಿಕರು

“ಇದೇ ಶಕ್ತಿಯು ಅಗ್ನಿವೀರ್‌ ಯೋಜನೆಯ ಮೂಲಕ ಭಾರತದ ಯುವಕರ ಧೈರ್ಯವನ್ನು ಕಸಿದು ಕೆಲವರಿಗೆ ಭಾರತದ ಬಂದರುಗಳು, ಭಾರತದ ವಿಮಾನ ನಿಲ್ದಾಣಗಳನ್ನು ಕೊಡುತ್ತದೆ. ಅದೇ ಶಕ್ತಿ ದಿನವಿಡಿ ಶ್ರೀಮಂತರ ಸೇವೆ ಮಾಡುತ್ತಿದ್ದರೆ, ಭಾರತದ ಮಾಧ್ಯಮಗಳು ಸತ್ಯವನ್ನು ತಿರುಚುತ್ತಿವೆ” ಎಂದು ಹೇಳಿದರು.

ನರೇಂದ್ರ ಮೋದಿ ಅವರು ಅದೇ ಶಕ್ತಿಯ ಗುಲಾಮರಾಗಿ ಬಡವರ ಮೇಲೆ ಜಿಎಸ್‌ಟಿ ವಿಧಿಸಿದ್ದಾರೆ. ಹಣದುಬ್ಬರದ ಮೇಲೆ ಅವರಿಗೆ ನಿಯಂತ್ರಣವಿಲ್ಲ. ಕೆಲವರ ಶಕ್ತಿ ಹೆಚ್ಚಿಸಲು ದೇಶದ ಸ್ವತ್ತನ್ನು ಹರಾಜುಗೊಳಿಸುತ್ತಿದ್ದಾರೆ ಎಂದು ಹೇಳಿದರು.

“ನಾನು ಆ ಶಕ್ತಿಯನ್ನು ಗುರುತಿಸಿದ್ದೇನೆ. ನರೇಂದ್ರ ಮೋದಿ ಕೂಡ ಆ ಶಕ್ತಿಯನ್ನು ಗುರುತ್ತಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಧಾರ್ಮಿಕ ಶಕ್ತಿಗಳಿಲ್ಲ. ಅವರದು ಅಧರ್ಮ, ಭ್ರಷ್ಟಾಚಾರ ಹಾಗೂ ಸುಳ್ಳು ಹೇಳುವ ಶಕ್ತಿ. ಆ ಕಾರಣಕ್ಕಾಗಿ ನಾನು ಯಾವಾಗಲು ಅವರ ವಿರುದ್ಧ ಧನಿ ಎತ್ತುತ್ತೇನೆ. ಇದರಿಂದ ಮೋದಿ ಹಾಗೂ ಅವರ ಯಂತ್ರ ಕೋಪಗೊಳ್ಳುತ್ತದೆ ಹಾಗೂ ಬೇಸರ ಮಾಡಿಕೊಳ್ಳುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದರು.

ಇಂಡಿಯಾ ಒಕ್ಕೂಟ ಅವರ ಪ್ರಣಾಳಿಕೆಗಳು ‘ಹಿಂದು ಶಕ್ತಿ’ಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿವೆ. ಭಾರತೀಯರೆಲ್ಲರೂ ಶಕ್ತಿಯ ರೂಪ. ನಾನು ಭಾರತ ಮಾತೆಯ ಶಕ್ತಿಯ ಆರಾಧಕ ಎಂದು ತೆಲಂಗಾಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X