ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ, ಎಎಪಿ ರಾಜ್ಯಸಭಾ ಸದಸ್ಯ ಹಾಗೂ ಮತ್ತಿತ್ತರರ ನಾಯಕರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಇ.ಡಿ ಅಧಿಕಾರಿಗಳು ದೆಹಲಿ, ಚಂಡೀಗಡ ಹಾಗೂ ವಾರಣಾಸಿಯ 12 ಸ್ಥಳಗಳ ಮೇಲೆ ಪರಿಶೋಧನೆ ನಡೆಸಲಾಗುತ್ತಿದೆ.
ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಬವ್ ಕುಮಾರ್, ರಾಜ್ಯಸಭಾ ಸದಸ್ಯ ಎನ್ ಡಿ ಗುಪ್ತ, ದೆಹಲಿಯ ಮಾಜಿ ಜಲಮಂಡಳಿಯ ಸದಸ್ಯ ಶಲಾಭ್ ಕುಮಾರ್ ದಾಳಿಗೊಳಗಾದ ನಾಯಕರು.
ದಾಳಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಶಿಕ್ಷಣ ಸಚಿವೆ ಆತಿಶಿ,”ನಾವು ಎದರುವುದಿಲ್ಲ. ಅಕ್ರಮಗಳ ಬಗ್ಗೆ ಯಾವುದೇ ಪುರಾವೆಗಳು ದೊರಕಿಲ್ಲ. ತನಿಖಾ ಸಂಸ್ಥೆಯು ಅಬಕಾರಿ ನೀತಿ ಪ್ರಕರಣದ ತನಿಖೆಯಲ್ಲಿ ಕೆಲವೊಂದು ಪ್ರಕರಣಗಳಲ್ಲಿ ಸಾಕ್ಷಿಗಳ ಹೇಳಿಕೆಯ ಆಡಿಯೋ ದಾಖಲೆಗಳನ್ನು ಅಳಿಸಿಹಾಕಿದೆ. ಪ್ರಕರಣದ ಸಾಕ್ಷಿಗಳಲ್ಲಿ ಕೂಡ ಮೋಸ ನಡೆದಿರುವುದು ಕೂಡ ಬೆಳಕಿಗೆ ಬಂದಿದೆ. ತನಿಖಾ ಸಂಸ್ಥೆಯು ಸಿಸಿ ವಿಡಿಯೋಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪ್ರಶ್ನಿಸುವುದಾಗಿ” ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ
“ಎರಡು ವರ್ಷಗಳ ತನಿಖೆಯಲ್ಲಿ ಒಂದು ರೂಪಾಯಿಯನ್ನು ಕೂಡ ವಶಪಡಿಸಿಕೊಂಡಿಲ್ಲ. ಸಣ್ಣ ಪ್ರಮಾಣದ ಪುರಾವೆ ಕೂಡ ಇ.ಡಿಗೆ ದೊರಕಿಲ್ಲ. ಇವರ ಪೂರ್ಣ ತನಿಖೆ ಹೇಳಿಕೆಗಳ ಮೇಲೆ ಮಾತ್ರ ನಿಂತಿದ್ದು, ಪ್ರಕರಣದ ಸಾಕ್ಷಿಗಳಲ್ಲೂ ಕೂಡ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ವಂಚನೆಯನ್ನು ಮುಚ್ಚಿಡುವ ಸಲುವಾಗಿ ಇ.ಡಿ ಸಿಸಿ ಟಿವಿಯ ದಾಖಲೆಗಳನ್ನು ಅಳಿಸಿಹಾಕುತ್ತಿದೆ”ಎಂದು ಆತಿಶಿ ಹೇಳಿದರು.
“ಕಳೆದ 2 ವರ್ಷಗಳಲ್ಲಿ ಎಎಪಿ ನಾಯಕರನ್ನು ಬೆದರಿಸಲಾಗುತ್ತಿದೆ. ಅಬಕಾರಿ ಹಗರಣದಲ್ಲಿ ಕೆಲವೊಬ್ಬರು ಮನೆಗಳ ಮೇಲೆ ದಾಳಿ ನಡೆದಿದೆ. ಮತ್ತೂ ಕೆಲವರನ್ನು ಬಂಧಿಸಲಾಗಿದೆ.ಎರಡು ವರ್ಷಗಳ ದಾಳಿಯಲ್ಲಿ ಇ.ಡಿ ಒಂದು ರೂಪಾಯಿಯನ್ನು ವಶಪಡಿಸಿಕೊಂಡಿಲ್ಲ. ಸ್ಪಷ್ಟವಾದ ಸಾಕ್ಷ್ಯಗಳು ದೊರಕಿಲ್ಲ.ನ್ಯಾಯಾಲಯ ಕೂಡ ಸಾಕ್ಷಿ, ಪುರಾವೆ ಒದಗಿಸಿ ಎಂದು ಇ.ಡಿಗೆ ಒತ್ತಾಯಿಸುತ್ತದೆ” ಎಂದರು.