ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬ್‌ನ ಕೆಲವು ಪುಟಗಳನ್ನು ಹರಿದ ಆರೋಪದ ಹಿನ್ನೆಲೆಯಲ್ಲಿ 19 ವರ್ಷದ ಯುವಕನೊಬ್ಬನನ್ನು ಗ್ರಾಮಸ್ಥರು ಮನಬಂದಂತೆ ಥಳಿಸಿ ಕೊಂದ ಘಟನೆ ಪಂಜಾಬ್‌ನ ಫೆರೋಜ್‌ಪುರ್‌ನಲ್ಲಿನ ಗುರುದ್ವಾರದಲ್ಲಿ ನಡೆದಿದೆ.
ಬಕ್‌ಶೀಶ್ ಸಿಂಗ್ ಎಂಬಾತ ಬಂದಾಳದಲ್ಲಿನ ಗುರುದ್ವಾರವನ್ನು ಅಪವಿತ್ರಗೊಳಿಸಿದ್ದ. ನಂತರ ಕೋಪಗೊಂಡ ಗುಂಪು ಯುವಕನನ್ನು ಹಿಡಿದು ಮನಬಂದಂತೆ ಥಳಿಸಿದೆ ಎಂದು ಡಿಎಸ್‌ಪಿ ಸುಖ್‌ವಿಂದರ್ ಸಿಂಗ್ ತಿಳಿಸಿದ್ದಾರೆ.
ಮೃತನು ಮಾನಸಿಕ ಅಸ್ವಸ್ಥನಾಗಿದ್ದು, ಎರಡು ವರ್ಷಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಎಂದು ಆತನ ತಂದೆ ಲಖ್ವಿಂದರ್ ಸಿಂಗ್ ತಿಳಿಸಿದ್ದಾರೆ. ತಮ್ಮ ಮಗನನ್ನು ಕೊಂದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಲಖ್ವಿಂದರ್ ಸಿಂಗ್ ಆಗ್ರಹಿಸಿದ್ದಾರೆ.
ಸ್ಥಳೀಯರ ಪ್ರಕಾರ ಬಕ್‌ಶೀಶ್ ಈ ಮೊದಲು ಗುರುದ್ವಾರಕ್ಕೆ ಭೇಟಿ ನೀಡಿರಲಿಲ್ಲ. ನಿನ್ನೆ ಗುರುದ್ವಾರಕ್ಕೆ ಭೇಟಿ ನೀಡಿ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹೀಬ್‌ನ ಕೆಲವು ಪುಟಗಳನ್ನು ಹರಿದು ಧಾರ್ಮಿಕ ಕೇಂದ್ರವನ್ನು ಅಪವಿತ್ರಗೊಳಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ತಪ್ಪಿಸಿಕೊಂಡು ಓಡುತ್ತಿದ್ದ ಆತನನ್ನು ಸ್ಥಳೀಯರನ್ನು ಹಿಡಿದು ಥಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬಕ್‌ಶೀಶ್ ಕೈಗಳಿಗೆ ಹಗ್ಗ ಕಟ್ಟಿದ್ದು ದೇಹದಲ್ಲಿ ರಕ್ತ ಸೋರುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ಸಮಯದ ನಂತರ ಮೃತಪಟ್ಟಿದ್ದಾನೆ. ಪರಿಸ್ಥಿತಿ ನಿಯಂತ್ರಣಲ್ಲಿದೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ.
ಬಕ್‌ಶಿಶ್‌ನ ಸಾವು ಅಪರಾಧಿಗಳನ್ನು ಶಿಕ್ಷಿಸುವ ಪ್ರತಿಕ್ರಿಯೆಯಲ್ಲ. ಕಾನೂನು ಕೂಡ ಅಪವಿತ್ರಗೊಳಿಸುವ ಕ್ರಿಯೆಯನ್ನು ತಡೆಯಲಿಲ್ಲ. ಜನರು ಆತನ ಸಾವಿನ ಮೂಲಕ ಬಲವಂತವಾಗಿ ಪಡೆದ ನ್ಯಾಯ ಕೂಡ ಸಮ್ಮತವಲ್ಲ. ಕಾನೂನು ಕೂಡ ತನ್ನ ಕಾರ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯ ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.
