ಶುದ್ಧೀಕರಣ ಕೃತ್ಯ: ತಮಗೆ ಖರ್ಗೆ ಅವರ ಜಾತಿಯೇ ಗೊತ್ತಿರಲಿಲ್ಲ ಎಂದ ರಾಮ ಸೇನೆ

Date:

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರ‍್ಯಾಲಿ ನಡೆಸಿದ ಬಳಿಕ, ಆ ಜಾಗವನ್ನು ‘ಶುದ್ಧೀಕರಣ’ ಮಾಡಿದ್ದ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಜನಾಕ್ರೋಶಕ್ಕೆ ಮಣಿದ ಬಿಜೆಪಿ ಸರ್ಕಾರ, ಕೃತ್ಯ ಎಸಗಿದವರ ವಿರುದ್ಧ ಎಫ್ಐಆರ್‌ ದಾಖಲಿಸಿದೆ. ಇದೀಗ, ತನ್ನ ಕೃತ್ಯಕ್ಕೆ ಸಮಜಾಯಷಿ ನೀಡಿರುವ ಹಲ್ದ್ವಾನಿಯ ‘ರಾಮ ಸೇನಾ’ ಸಂಘಟನೆ, ‘ತಮಗೆ ಖರ್ಗೆ ಅವರ ಜಾತಿ ಯಾವುದು ಎಂಬುದೇ ಗೊತ್ತಿರಲಿಲ್ಲ. ನಮ್ಮ ಶುದ್ಧೀಕರಣ ಯಜ್ಞಕ್ಕೂ ಅವರ ಜಾತಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸಮರ್ಥಿಸಿಕೊಂಡಿದೆ.

- Advertisement -

ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8ರಂದು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಉತ್ತರಾಖಂಡದಲ್ಲಿ 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿರುವ ಹಿನ್ನೆಲೆಯಲ್ಲಿ ಈ ರ‍್ಯಾಲಿ ನಡೆದಿತ್ತು. ರ‍್ಯಾಲಿ ನಡೆದ ಎರಡು ದಿನಗಳ ಬಳಿಕ, ಆಗಸ್ಟ್ 10ರಂದು, ‘ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಯಾಸ್‌’ ಸಂಘಟನೆಯ ಸದಸ್ಯರು ಮೈದಾನದಲ್ಲಿ ಹವನ ನಡೆಸಿ ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಈಗ, ಸಂಘಟನೆಯ ಸದಸ್ಯರು ತಮ್ಮ ಶುದ್ಧೀಕರಣ ಕಾರ್ಯಕ್ರಮದ ಹಿಂದೆ ಜಾತಿ ವಿಚಾರ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ಈ ಕೃತ್ಯ ನಡೆಯುವ ಹಿಂದಿನ ದಿನ ಸಂಘಟನೆಯ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಸಂದೇಶವೊಂದು ಹರಿದಾಡಿತ್ತು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಈ ಸಂದೇಶದಲ್ಲಿ; “ರಾಮಲೀಲಾ ಮೈದಾನವು ಹಿಂದು ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾದ ಪವಿತ್ರ ಸ್ಥಳ. ಕಾಂಗ್ರೆಸ್ ರ‍್ಯಾಲಿಯಲ್ಲಿ ಹಿಂದು ಭಾವನೆಗಳಿಗೆ ವಿರುದ್ಧವಾದ ಘೋಷಣೆಗಳು ಕೇಳಿಬಂದಿವೆ. ‘ಇತರ ಧರ್ಮಿಗಳು’ ಸ್ಥಳದ ಪಾವಿತ್ರ್ಯವನ್ನು ಉಲ್ಲಂಘಿಸಿದ್ದಾರೆ. ಸ್ಥಳದ ಪಾವಿತ್ರ್ಯವನ್ನು ಮರಳಿ ಸ್ಥಾಪಿಸಲು ‘ಶುದ್ಧಿ ಯಜ್ಞ’ ನಡೆಸಬೇಕು” ಎಂದು ಕರೆ ನೀಡಲಾಗಿತ್ತು.

ಅದರ ಮರುದಿನವೇ ರಾಮಲೀಲಾ ಮೈದಾನವನ್ನು ಸ್ವಚ್ಛಗೊಳಿಸಿ, ಹವನ ನಡೆಸಲಾಗಿದೆ.

ಹಿಂದುತ್ವ ಕೋಮುವಾದಿ ಕಾರ್ಯಕರ್ತರು ನಡೆಸಿದ ಈ ಶುದ್ಧೀಕರಣವು ‘ಜಾತಿ ತಾರತಮ್ಯ’ದ ಕೃತ್ಯವಾಗಿದೆ. ಖರ್ಗೆ ಅವರು ದಲಿತ ನಾಯಕರಾಗಿದ್ದು, ಆ ಕಾರಣಕ್ಕಾಗಿಯೇ ಅವರು ಮಾತನಾಡಿದ ವೇದಿಕೆ ಮತ್ತು ಸ್ಥಳವನ್ನು ‘ಶುದ್ಧೀಕರಿಸಿ’ ದಾರ್ಷ್ಟ್ಯ ಮರೆಯಲಾಗಿದೆ. ಇದು ಸ್ಪೃಶ್ಯತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಆಗಸ್ಟ್ 29ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಚಾರವನ್ನು ಪ್ರಸ್ತಾಪಿಸಿ, ಇದು ಅಸ್ಪೃಶ್ಯತೆಯ ಕೃತ್ಯವಾಗಿದ್ದು, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಖರ್ಗೆ ಅವರೂ ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು. ತಮ್ಮ ರ‍್ಯಾಲಿಯಲ್ಲಿ ತಾವು ಯಾವುದೇ ಜಾತಿ ಅಥವಾ ಧರ್ಮದ ಬಗ್ಗೆ ಮಾತನಾಡಿರಲಿಲ್ಲ. ಆದರೂ ತಮ್ಮ ಕಾರ್ಯಕ್ರಮದ ಬಳಿಕ ವೇದಿಕೆಯನ್ನು ‘ಶುದ್ಧೀಕರಿಸಿ’ ತಮ್ಮನ್ನು ಅವಮಾನಿಸಲಾಗಿದೆ. ಈ ಘಟನೆ ತಮ್ಮಲ್ಲಿ ಅಸ್ಪೃಶ್ಯತೆಯ ನೋವನ್ನು ಮೂಡಿಸಿದೆ ಎಂದು ಹೇಳಿದ್ದರು.

ಆದಾಗ್ಯೂ, ಸರ್ಕಾರವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳಿಕ, ಕೇಂದ್ರ ಸಚಿವ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದ ಖರ್ಗೆ, “ಘಟನೆ ನಡೆದು 24 ದಿನಗಳಾದರೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ . ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನಿರ್ದೇಶನ ನೀಡಿ, ‘ಶುದ್ಧೀಕರಣ’ದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದರು.

ಆದರೂ, ಉತ್ತರಾಖಂಡ ಸರ್ಕಾರ ಯಾವುದೇ ಎಫ್‌ಐಆರ್ ದಾಖಲಿಸಿಲ್ಲ. ಈ ನಡುವೆ, ಸೆಪ್ಟೆಂಬರ್ 5ರಂದು ಬೆಂಗಳೂರಿನ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿಯೂ ‘ಝೀರೋ ಎಫ್‌ಐಆರ್‌’ ದಾಖಲಾಗಿದೆ. ಆದರೆ, ಇದು ‘ಝೀರೋ ಎಫ್‌ಐಆರ್‌’ ಆಗಿರುವುದರಿಂದ ಈ ಪ್ರಕರಣವನ್ನು ಬೆಂಗಳೂರಿನ ಪೊಲೀಸರು ತನಿಖೆ ನಡೆಸಲು ಬರುವುದಿಲ್ಲ. ಅವರು ಈ ಪ್ರಕರಣವನ್ನು ಹಲ್ದ್ವಾನಿ ಪೊಲೀಸರಿಗೆ ವರ್ಗಾಯಿಸಬೇಕು.

ಇದೆಲ್ಲದರ ನಡುವೆ, ಘಟನೆ ಬಗ್ಗೆ ‘ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಯಾಸ್‌’ನ ಅಧ್ಯಕ್ಷ ಗಿರೀಶ್ ಪಾಂಡೆ ಹೇಳಿಕೆ ನೀಇದ್ದು, “ಖರ್ಗೆಜಿ ಯಾವ ಜಾತಿಗೆ ಸೇರಿದವರು ಎಂಬುದೇ ನಮಗೆ ತಿಳಿದಿರಲಿಲ್ಲ. ಸಂಘಟನೆಯು ವ್ಯಕ್ತಿಗಳ ಜಾತಿ ಕೇಳುವುದಿಲ್ಲ ಮತ್ತು ನಮ್ಮ ಸಂಘಟನೆಯಲ್ಲಿ ವಿವಿಧ ಸಮುದಾಯಗಳ ಜನರಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ರ‍್ಯಾಲಿ ನಡೆದ ಸ್ಥಳವನ್ನು ಆಗಸ್ಟ್ 9ರಂದು ತಾವೇ ಗುಡಿಸಿ, ಸ್ವಚ್ಛಗೊಳಿಸಿದ್ದಾಗಿ ಪಾಂಡೆ ಹೇಳಿದ್ದಾರೆ. ನಂತರ ಸದಸ್ಯರೆಲ್ಲ ಸೇರಿ ಯಜ್ಞ ನಡೆಸಿದರು. ಇದರ ಉದ್ದೇಶ ಸ್ಥಳವನ್ನು ಸ್ವಚ್ಛಗೊಳಿಸುವುದಾಗಿತ್ತೇ ಹೊರತು ಖರ್ಗೆ ಅವರ ಜಾತಿಯನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಸಮಜಾಯಷಿ ನೀಡಿದ್ದಾರೆ.

ಸಂಘಟನೆಯ ಸದಸ್ಯ ಅಮಿತ್ ಕುಮಾರ್ ಕೂಡ ಇದೇ ನಿಲುವನ್ನು ವ್ಯಕ್ತಪಡಿಸಿದ್ದಾರೆ. “ನಾನು ವಾಲ್ಮೀಕಿ ಸಮುದಾಯಕ್ಕೆ ಸೇರಿದವನು. ನಾನೂ ಕೂಡ ‘ಶುದ್ಧೀಕರಣ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ರ‍್ಯಾಲಿ ಬಳಿಕ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಮತ್ತು ಖಾಲಿ ಮದ್ಯದ ಬಾಟಲಿಗಳು ಬಿದ್ದಿದ್ದವು. ಈ ಕಾರಣಕ್ಕೆ ಸ್ಥಳದ ‘ಧಾರ್ಮಿಕ ಮತ್ತು ಸಾಂಸ್ಕೃತಿಕ ಪಾವಿತ್ರ್ಯ’ವನ್ನು ಪುನಃಸ್ಥಾಪಿಸಲು ಹವನ ನಡೆಸಲಾಯಿತು” ಎಂದು ವಾದಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!

ಅಂದಹಾಗೆ, ಈ ‘ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಯಾಸ್’ ಸಂಘಟನೆಯು ಅಧಿಕೃತವಾಗಿ 2026ರ ಆರಂಭದಲ್ಲಿ ನೋಂದಣಿಯಾಗಿದೆ. ಸಂಘಟನೆಯ ಮಾಹಿತಿ ಪ್ರಕಾರ, ಇದರಲ್ಲಿ ಸುಮಾರು ಏಳು ನೋಂದಾಯಿತ ಸದಸ್ಯರು ಮತ್ತು ಪದಾಧಿಕಾರಿಗಳು, 11 ಸಕ್ರಿಯ ಕಾರ್ಯಕರ್ತರು ಹಾಗೂ ಸುಮಾರು 45 ಸ್ವಯಂಸೇವಕರು ಇದ್ದಾರೆ. ಸದಸ್ಯರ ದೇಣಿಗೆ ಮತ್ತು ಸಾರ್ವಜನಿಕರಿಂದ ಬರುವ ದೇಣಿಗೆಯೇ ಸಂಘಟನೆಯ ಹಣಕಾಸಿನ ಮೂಲವಾಗಿದೆ ಎಂದು ಹೇಳಿಕೊಂಡಿದೆ.

ತಮ್ಮ ಸಂಘಟನೆಯು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿಲ್ಲ. ಬಿಜೆಪಿ, ವಿಶ್ವ ಹಿಂದೂ ಪರಿಷತ್ ಅಥವಾ ಆರ್‌ಎಸ್‌ಎಸ್‌ನೊಂದಿಗೆ ನೇರ ಸಂಬಂಧವಿಲ್ಲ ಎಂದೂ ಅದರ ಪದಾಧಿಕಾರಿಗಳು ಹೇಳಿಕೊಡಿದ್ದಾರೆ. ಆದರೆ, ಆದರೆ ಸಂಘಟನೆಯ ಕೆಲ ಪದಾಧಿಕಾರಿಗಳ ಹಿಂದಿನ ಹಿನ್ನೆಲೆಯು ಬೇರೆಯದ್ದೇ ಕತೆ ಹೇಳುತ್ತದೆ. ಈ ಸಂಘಟನೆಯ ಕಾರ್ಯದರ್ಶಿ ರಾಮ್‌ಜೀ ಅವಸ್ಥಿ ಅವರು 2018–19ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ‘ಸೇವಾ ಪ್ರಮುಖ್’ ಆಗಿ ಕೆಲಸ ಮಾಡಿದ್ದರು. ಅದರ ಅಧ್ಯಕ್ಷ ಗಿರೀಶ್ ಪಾಂಡೆ ಕೂಡ ಸಂಘಪರಿವಾರದೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.

ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಶುದ್ಧೀಕರಣ ಕೃತ್ಯ ಎಸಗಿರುವ ಸಂಘಟನೆಯು ಬಿಜೆಪಿ ಜತೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿದ್ದಾರೆ.  

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...