ಹದಿಹರೆಯದವರ ಆನ್‌ಲೈನ್‌ ಚಟಕ್ಕೆ ಬ್ರೇಕ್; ಸಿಂಗಾಪುರದಲ್ಲಿ ದಿನದ ಮಿತಿ, ಫ್ರಾನ್ಸ್‌ನಲ್ಲಿ ಮೊಬೈಲ್‌ ನಿಷೇಧ

Date:

ಹದಿಹರೆಯದವರ ಅತಿಯಾದ ಸ್ಕ್ರೀನ್‌ಟೈಮ್‌ ಮತ್ತು ಸೋಷಿಯಲ್‌ ಮೀಡಿಯಾ ಬಳಕೆಯಿಂದ ಉಂಟಾಗಬಹುದಾದ ಅಪಾಯಗಳನ್ನು ನಿಯಂತ್ರಿಸಲು ವಿವಿಧ ದೇಶಗಳು ಕಠಿಣ ಕ್ರಮಗಳತ್ತ ಸಾಗುತ್ತಿವೆ. ಸಿಂಗಾಪುರದಲ್ಲಿ ಹದಿಹರೆಯದವರ ಸೋಷಿಯಲ್‌ ಮೀಡಿಯಾ ಬಳಕೆಗೆ ದೈನಂದಿನ ಸಮಯದ ಮಿತಿ ವಿಧಿಸುವ ಸಾಧ್ಯತೆಯಿದ್ದು, ಫ್ರಾನ್ಸ್‌ನಲ್ಲಿ 15ರಿಂದ 18 ವರ್ಷದ ವಿದ್ಯಾರ್ಥಿಗಳ ಶಾಲಾ ಅವಧಿಯ ಮೊಬೈಲ್‌ ಬಳಕೆಗೆ ಇಂದಿನಿಂದಲೇ (ಸೆ.1ರಿಂದ) ನಿರ್ಬಂಧ ಜಾರಿಗೆ ಬರುತ್ತಿದೆ.

- Advertisement -

ಹದಿಹರೆಯದವರನ್ನು ಸೋಷಿಯಲ್‌ ಮೀಡಿಯಾದಲ್ಲಿನ ಅಪಾಯಕಾರಿ ವಿಷಯಗಳು ಹಾಗೂ ಅಪರಿಚಿತರಿಂದ ಬರುವ ನೇರ ಸಂದೇಶಗಳಿಂದ ರಕ್ಷಿಸಲು ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಸಿಂಗಾಪುರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ನಿರ್ದಿಷ್ಟ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಹದಿಹರೆಯದವರು ಪ್ರತಿದಿನ ಬಳಸಬಹುದಾದ ಸಮಯಕ್ಕೆ ಮಿತಿ ವಿಧಿಸುವ ಸಾಧ್ಯತೆಯೂ ಇದೆ ಎಂದು ಡಿಜಿಟಲ್‌ ಅಭಿವೃದ್ಧಿ ಮತ್ತು ಮಾಹಿತಿ ಸಚಿವೆ ಜೋಸೆಫಿನ್‌ ಟಿಯೋ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಮುಂದಿನ ವರ್ಷದ ಆರಂಭದಲ್ಲಿ ಈ ಕುರಿತು ಕಾನೂನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಹೊಸ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಅಥವಾ ಇಚ್ಛಿಸುವುದಿಲ್ಲ ಎನ್ನುವ ವೇದಿಕೆಗಳ ಕನಿಷ್ಠ ಬಳಕೆ ವಯಸ್ಸನ್ನು 18 ವರ್ಷಕ್ಕೆ ಹೆಚ್ಚಿಸುವ ಆಯ್ಕೆಯನ್ನೂ ಸರ್ಕಾರ ಪರಿಗಣಿಸುತ್ತಿದೆ. ಅಪರಿಚಿತರಿಂದ ಹದಿಹರೆಯದವರಿಗೆ ಬರುವ ನೇರ ಸಂದೇಶಗಳು, ಬಳಕೆದಾರರನ್ನು ನಿರಂತರವಾಗಿ ವೇದಿಕೆಯಲ್ಲೇ ಉಳಿಸುವ ಅಲ್ಗಾರಿದಮಿಕ್‌ ಫೀಡ್‌, ಆಟೋಪ್ಲೇ ಮತ್ತು ಇನ್ಫಿನಿಟ್‌ ಸ್ಕ್ರೋಲ್‌ ವ್ಯವಸ್ಥೆಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ನಿರಂತರ ಸ್ಕ್ರೋಲ್‌ಗೆ ಸ್ವಾಭಾವಿಕ ಅಂತ್ಯವನ್ನು ಸೃಷ್ಟಿಸುವುದು ಹಾಗೂ ನಿರ್ದಿಷ್ಟ ವೇದಿಕೆಯಲ್ಲಿ ದಿನಕ್ಕೆ ಎಷ್ಟು ಸಮಯ ಬಳಸಬಹುದು ಎಂಬ ಮಿತಿಯನ್ನು ವಿಧಿಸುವ ಕುರಿತು ಚರ್ಚೆ ನಡೆಯುತ್ತಿದೆ.

ಯುವಜನರ ಮಾನಸಿಕ ಆರೋಗ್ಯದ ಮೇಲೆ ಸೋಷಿಯಲ್‌ ಮೀಡಿಯಾದ ಪರಿಣಾಮದ ಕುರಿತು ಆರೋಗ್ಯ ಸಚಿವಾಲಯ ನೇಮಿಸಿದ್ದ ತಜ್ಞರ ಸಮಿತಿಯ ಪ್ರಕಾರ, 15ರಿಂದ 17 ವರ್ಷದವರ ಪೈಕಿ ಮೂವರಲ್ಲಿ ಒಬ್ಬರು ದಿನಕ್ಕೆ ಮೂರು ಗಂಟೆಗೂ ಹೆಚ್ಚು ಕಾಲ ಸೋಷಿಯಲ್‌ ಮೀಡಿಯಾ ಬಳಸುತ್ತಿದ್ದಾರೆ. 10ರಿಂದ 24 ವರ್ಷದವರ ಪೈಕಿ ಆರು ಮಂದಿಯಲ್ಲಿ ಒಬ್ಬರಲ್ಲಿ ಸಮಸ್ಯಾತ್ಮಕ ಸೋಷಿಯಲ್‌ ಮೀಡಿಯಾ ಬಳಕೆಯ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಮೂರು ಗಂಟೆಯ ಮಿತಿಯೂ ಹೆಚ್ಚೇ ಆಗಬಹುದು; ನಿಗದಿಪಡಿಸುವ ಸಮಯ ಅದಕ್ಕಿಂತ ಕಡಿಮೆ ಇರಬೇಕು ಎಂದು ಸಚಿವೆ ಜೋಸೆಫಿನ್‌ ಟಿಯೋ ಹೇಳಿದ್ದಾರೆ.

ಆದರೆ ಸರ್ಕಾರ ಇನ್ನೂ ನಿರ್ದಿಷ್ಟ ಸಮಯವನ್ನು ಅಂತಿಮಗೊಳಿಸಿಲ್ಲ. ನಿಗದಿತ ಸಮಯಕ್ಕಿಂತ ಒಂದು ನಿಮಿಷ ಕಡಿಮೆ ಬಳಸಿದರೆ ಸುರಕ್ಷಿತ, ಒಂದು ನಿಮಿಷ ಹೆಚ್ಚು ಬಳಸಿದರೆ ಅಪಾಯಕಾರಿ ಎಂಬ ಸರಳ ಲೆಕ್ಕದಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ. ಸಿಂಗಾಪುರದಲ್ಲಿ ಬಹುತೇಕ ಸೋಷಿಯಲ್‌ ಮೀಡಿಯಾ ವೇದಿಕೆಗಳ ಕನಿಷ್ಠ ಬಳಕೆ ವಯಸ್ಸು 13 ವರ್ಷವಾಗಿದೆ. ಆದರೆ ಬಳಕೆದಾರರು ತಮ್ಮ ವಯಸ್ಸನ್ನು ತಾವೇ ಘೋಷಿಸಿಕೊಳ್ಳುವುದನ್ನು ನಂಬುವುದು ಸಾಕಾಗುವುದಿಲ್ಲ ಎಂದು ಪ್ರಧಾನಿ ಲಾರೆನ್ಸ್‌ ವಾಂಗ್ ಹೇಳಿದ್ದಾರೆ.

ಹೀಗಾಗಿ ಬಳಕೆದಾರರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ವಯಸ್ಸಿನ ಅಂದಾಜು, ವಯಸ್ಸಿನ ವ್ಯಾಪ್ತಿಯನ್ನು ನಿರ್ಧರಿಸುವುದು ಹಾಗೂ ಅಧಿಕೃತ ದಾಖಲೆಗಳ ಮೂಲಕ ವಯಸ್ಸು ಪರಿಶೀಲಿಸುವುದು ಸೇರಿದಂತೆ ಹಲವು ವಿಧಾನಗಳನ್ನು ಜಾರಿಗೆ ತರುವ ಉದ್ದೇಶವಿದೆ.

ಫ್ರಾನ್ಸ್‌ನ ಹೈಸ್ಕೂಲ್‌ಗಳಲ್ಲೂ ಮೊಬೈಲ್‌ಗೆ ಬ್ರೇಕ್

ಹದಿಹರೆಯದವರ ಸ್ಕ್ರೀನ್‌ಟೈಮ್‌ ಕಡಿಮೆ ಮಾಡುವ ಉದ್ದೇಶದಿಂದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರೋನ್‌ ಮುಂದಾಗಿರುವ ಮೊಬೈಲ್‌ ನಿಷೇಧವನ್ನು ಜಾರಿಗೆ ತರಲು ದೇಶದ ಹೈಸ್ಕೂಲ್‌ಗಳು ಸಿದ್ಧತೆ ನಡೆಸುತ್ತಿವೆ.

ಸೆಪ್ಟೆಂಬರ್‌ 1ರಿಂದ 15ರಿಂದ 18 ವರ್ಷದ ವಿದ್ಯಾರ್ಥಿಗಳು ಓದುವ ಹೈಸ್ಕೂಲ್‌ಗಳಲ್ಲಿ ಶಾಲಾ ಅವಧಿಯಲ್ಲಿ ಮೊಬೈಲ್‌ ಬಳಕೆಗೆ ನಿರ್ಬಂಧ ಜಾರಿಗೆ ಬರಲಿದೆ. ಈಗಾಗಲೇ 11ರಿಂದ 15 ವರ್ಷದ ಮಕ್ಕಳು ಓದುವ ಮಧ್ಯಮ ಶಾಲೆಗಳು ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಮೊಬೈಲ್‌ ಬಳಕೆಗೆ ನಿರ್ಬಂಧವಿದೆ. ಆದರೆ ಹೊಸ ನಿಯಮವನ್ನು ತರಾತುರಿಯಲ್ಲಿ ಜಾರಿಗೆ ತರುವುದು ಕಷ್ಟ ಎಂದು ಫ್ರಾನ್ಸ್‌ನ ಶಿಕ್ಷಣ ಕ್ಷೇತ್ರದ ಸಂಘಟನೆಗಳು ಎಚ್ಚರಿಸಿವೆ. ಪ್ರತಿಯೊಂದು ಹೈಸ್ಕೂಲ್‌ ತನ್ನ ಆಂತರಿಕ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕಿದ್ದು, ಅದಕ್ಕಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ನಿಯಮಗಳಿಗೆ ಅನುಮೋದನೆ ಪಡೆಯಬೇಕಿದೆ.

ನಿಷೇಧ ಜಾರಿಯಲ್ಲಿ ಪ್ರಾಯೋಗಿಕ ಸಮಸ್ಯೆಗಳೂ ಎದುರಾಗಲಿವೆ. ತರಗತಿ ವೇಳಾಪಟ್ಟಿ, ಕೊಠಡಿ ಬದಲಾವಣೆ ಮತ್ತು ಮನೆಗೆಲಸದ ಮಾಹಿತಿಗಾಗಿ ಕೆಲವು ವಿದ್ಯಾರ್ಥಿಗಳು ಶಾಲೆಯ ಸ್ಮಾರ್ಟ್‌ಫೋನ್‌ ಆ್ಯಪ್‌ಗಳನ್ನು ಬಳಸುತ್ತಾರೆ. ಕೆಲವು ಶಾಲೆಗಳಲ್ಲಿ ಕ್ಯಾಂಟೀನ್‌ಗೆ ಪ್ರವೇಶಿಸಲು ಅಥವಾ ಗ್ರಂಥಾಲಯದಿಂದ ಪುಸ್ತಕ ಪಡೆಯಲು ಕೂಡ ಮೊಬೈಲ್‌ ಆ್ಯಪ್‌ ಗುರುತಿನ ಚೀಟಿಯಾಗಿ ಬಳಕೆಯಾಗುತ್ತಿದೆ. ಇದಲ್ಲದೆ ಕೆಲವು ಹೈಸ್ಕೂಲ್‌ಗಳಲ್ಲಿ ಉನ್ನತ ಶಿಕ್ಷಣದ ಕೋರ್ಸ್‌ಗಳು ಅಥವಾ ಅಪ್ರೆಂಟಿಸ್‌ಶಿಪ್‌ ತರಬೇತಿ ಪಡೆಯುವ 20 ವರ್ಷ ವಯಸ್ಸಿನ ವಿದ್ಯಾರ್ಥಿಗಳೂ ಇರುತ್ತಾರೆ. ಅವರಿಗೂ ಮೊಬೈಲ್‌ ಅಗತ್ಯವಾಗಿರುವ ಸಂದರ್ಭಗಳಿವೆ.

ಇದನ್ನೂ ಓದಿ: ಹದಿಹರೆಯದವರ ಸೋಷಿಯಲ್‌ ಮೀಡಿಯಾ ಅಡಿಕ್ಷನ್‌ಗೆ ಬ್ರೇಕ್‌; ಅಮೆರಿಕದಲ್ಲಿ FB, Insta ಬಳಕೆಗೆ ಹೊಸ ನಿಯಮ

ಮೊಬೈಲ್‌ ನಿಷೇಧವನ್ನು ಇಡೀ ಶಾಲಾ ಆವರಣದಲ್ಲೇ ಜಾರಿಗೊಳಿಸಬೇಕೇ ಅಥವಾ ಆಟದ ಮೈದಾನ, ಕಾರಿಡಾರ್‌ ಮುಂತಾದ ಕಡೆ ವಿನಾಯಿತಿ ನೀಡಬೇಕೇ ಎಂಬುದನ್ನು ಪ್ರತಿ ಶಾಲೆಯೇ ನಿರ್ಧರಿಸಬೇಕಿದೆ. ಶಾಲೆಯ ಹೊರಗೆ ಹೋಗಿ ಮೊಬೈಲ್‌ ಬಳಸಲು ವಿದ್ಯಾರ್ಥಿಗಳು ಮುಂದಾದರೆ ಭದ್ರತೆ ಮತ್ತು ರಸ್ತೆ ಸುರಕ್ಷತೆಯ ಸಮಸ್ಯೆಯೂ ಎದುರಾಗಬಹುದು ಎಂದು ಶಿಕ್ಷಣ ಸಂಘಟನೆಗಳು ಎಚ್ಚರಿಸಿವೆ.

ಹೈಸ್ಕೂಲ್‌ ಮೊಬೈಲ್‌ ನಿಷೇಧದ ಜತೆಗೆ, 15 ವರ್ಷದೊಳಗಿನ ಮಕ್ಕಳಿಗೆ ಟಿಕ್‌ಟಾಕ್‌, ಸ್ನ್ಯಾಪ್‌ಚಾಟ್‌ ಸೇರಿದಂತೆ ಸೋಷಿಯಲ್‌ ಮೀಡಿಯಾ ಬಳಕೆಯನ್ನು ನಿಷೇಧಿಸುವ ಕಾನೂನು ಜಾರಿಗೆ ತರಲು ಮ್ಯಾಕ್ರೋನ್‌ ಸರ್ಕಾರ ಪ್ರಯತ್ನಿಸಿತ್ತು. ಆದರೆ ಮೊದಲ ಕರಡನ್ನು ಫ್ರಾನ್ಸ್‌ನ ಸಾಂವಿಧಾನಿಕ ಮಂಡಳಿ ತಿರಸ್ಕರಿಸಿದೆ.

ಸೋಷಿಯಲ್‌ ಮೀಡಿಯಾದ ವ್ಯಾಖ್ಯಾನ ಸ್ಪಷ್ಟವಾಗಿಲ್ಲದಿರುವುದು ಹಾಗೂ ವಯಸ್ಸು ಪರಿಶೀಲನಾ ವ್ಯವಸ್ಥೆಯಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವ ಸಾಧ್ಯತೆ ಬಗ್ಗೆ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಇದೀಗ ಸರ್ಕಾರ ಕಾನೂನಿನ ಕರಡನ್ನು ಮರುರೂಪಿಸುತ್ತಿದ್ದು, ಮ್ಯಾಕ್ರೋನ್‌ ಅಧಿಕಾರಾವಧಿ ಮುಗಿಯುವ ಮೊದಲು ಅದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...