ಭಾರತೀಯ ಕ್ರಿಕೆಟ್ ನಿಯಂತ್ರ ಮಂಡಳಿ ರಾಹುಲ್ ದ್ರಾವಿಡ್ ಅವರನ್ನು ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ವರೆಗೂ ಮುಖ್ಯ ಕೋಚ್ ಆಗಿ ಉಳಿಸಿಕೊಳ್ಳಲು ನಿರ್ಧರಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ದ್ರಾವಿಡ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ನಿರ್ಧಾರವನ್ನು ದೃಢಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷ ಏಕದಿನ ವಿಶ್ವಕಪ್ ಫೈನಲ್ ನಂತರ ಅಂತ್ಯಗೊಂಡಿತ್ತು. ತಮ್ಮ ಅವಧಿ ವಿಸ್ತರಣೆ ಅಂತಿಮಗೊಳ್ಳುವ ಮುನ್ನವೆ ಡಿಸೆಂಬರ್ – ಜನವರಿಯಲ್ಲಿ ನಡೆದ ದಕ್ಷಿಣ ಅಫ್ರಿಕಾ ಪ್ರವಾಸಕ್ಕೆ ಮುಂದುವರೆಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜಯ್ ಶಾ, ಕಳೆದ ವರ್ಷದ ಏಕದಿನ ವಿಶ್ವಕಪ್ ನಂತರ ರಾಹುಲ್ ಅವರು ತಕ್ಷಣವೇ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು.ಇಂದು ಅಂತಿಮವಾಗುವವರೆಗೂ ನಾವು ಅವರನ್ನು ಭೇಟಿ ಮಾಡಿರಲಿಲ್ಲ ಎಂದು ಹೇಳಿದರು.
“ರಾಹುಲ್ ಅವರಂಥ ಹಿರಿಯ ಆಟಗಾರರ ಒಪ್ಪಂದದ ಬಗ್ಗೆ ಏಕೆ ಚಿಂತಿಸುತ್ತೀರಿ? ಅವರು ಟಿ20 ವಿಶ್ವಕಪ್ ವರೆಗೂ ಕೋಚ್ ಆಗಿ ಮುಂದುವರೆಯಲಿದ್ದಾರೆ. ಇತ್ತೀಚಿಗೆ ಸತತವಾಗಿ ಕ್ರಿಕಿಟ್ ಸರಣಿಗಳು ನಡೆಯುತ್ತಿರುವುದರಿಂದ ಸಮಯವಿದ್ದಾಗಲೆಲ್ಲ ನಾನು ಅವರೊಂದಿಗೆ ಮಾತನಾಡಿದ್ದಾನೆ” ಎಂದು ಜಯ್ ಶಾ ಹೇಳಿದರು.
“ಇದು ಬಿಸಿಸಿಐನ ನಿರ್ಧಾರವಾಗಿದೆ. ಬಿಸಿಸಿಐ ಸರ್ವೋಚ್ಛ ಮಂಡಳಿಯಾಗಿದ್ದು, ಮಂಡಳಿ ಏನೇ ನಿರ್ಧಾರ ತೆಗೆದುಕೊಂಡರೂ ಪ್ರಾಂಚೈಸಿಗಳು ಅದನ್ನು ಅನುಸರಿಸಬೇಕಾಗುತ್ತದೆ. ನಾವು ಪ್ರಾಂಚೈಸಿಗಿಂತ ಮೇಲಿದ್ದೇವೆ” ಎಂದು ಜಯ್ ಶಾ ತಿಳಿಸಿದರು.