ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಪಂಜಾಬ್ – ಹರಿಯಾಣ ಗಡಿಯಲ್ಲಿ ಪೊಲೀಸ್ ದಾಳಿಯಿಂದ ಗಾಯಗೊಂಡಿದ್ದ ರೈತರೊಬ್ಬರ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ.
ಫೆ.13ರ ಮಂಗಳವಾರ ರಾತ್ರಿ ದೂರವಾಣಿಯೊಂದಿಗೆ ಗಾಯಗೊಂಡು ಪಂಜಾಬ್‌ನ ಪಾಟಿಯಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಮೀತ್ ಸಿಂಗ್ ಎಂಬ ರೈತರೊಬ್ಬರ ಜೊತೆ ರಾಹುಲ್ ಗಾಂಧಿ ಮಾತನಾಡಿದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ರೈತ ಚಳವಳಿ ಸಂದರ್ಭ ಪೊಲೀಸ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗುರುಮೀತ್ ಸಿಂಗ್ ಅವರೊಂದಿಗೆ ನಾನು ಮಾತನಾಡಿ ಆರೋಗ್ಯವನ್ನು ವಿಚಾರಿಸಿದೆ. ಅವರ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
Congress Leader #RahulGandhi talks to the injured farmer who is admitted in the Rajpura Hospital. #FarmersProtest pic.twitter.com/ShfDGAjd0K
— Akashdeep Thind (@thind_akashdeep) February 14, 2024
“ಇವರು ಯುವಕರಷ್ಟೆ ಅಲ್ಲ, ರೈತರೂ ಹೌದು. ದೇಶದ ರಕ್ಷಕರು ಹಾಗೂ ಅನ್ನದಾತರಾದ ಇಂತಹವರನ್ನು ಪ್ರೋತ್ಸಾಹಿಸುವ ಬದಲು ಮೋದಿ ಸರ್ಕಾರ ಸರ್ವಾಧಿಕಾರದಂತೆ ವರ್ತಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸುವವರಿಗೆ ನೈತಿಕತೆ ಇದ್ದರೆ ಪ್ರಶ್ನೆಗೆ ಬೆಲೆ, ಅಲ್ಲವೇ?
“ನಾವು ನಿಮ್ಮ ಜೊತೆ ಇದ್ದೇವೆ. ಚಿಂತಿಸಬೇಡಿ. ದೇಶಕ್ಕೆ ಯಾವುದು ಮುಖ್ಯವಾಗಿದೆಯೋ ಅದಕ್ಕಾಗಿಯೆ ನೀವು ಹೋರಾಡುತ್ತಿದ್ದೀರಿ. ನೀವು ಈ ಮೊದಲು ದೇಶಕ್ಕಾಗಿ ಸೇವೆ ಸಲ್ಲಿಸಿದ್ದೀರಿ.ಈಗಲೂ ಸಹ ಅದೇ ಕೆಲಸ ಮಾಡುತ್ತಿದ್ದೀರಿ. ನಿಮಗೆ ಒಳ್ಳೆಯದಾಗಲಿ” ಎಂದು ಶುಭ ಕೋರಿದರು.
ಪಂಜಾಬ್ – ಹರಿಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತರನ್ನು ನಿನ್ನೆ(ಫೆ.13) ಪೊಲೀಸರು ಬಲವಂತವಾಗಿ ತಡೆದ ನಂತರ ಒಂದು ದಿನದ ಮಟ್ಟಿಗೆ ವಿರಾಮ ಘೋಷಿಸಲಾಗಿತ್ತು. ಇಂದು ಮತ್ತೆ ದೆಹಲಿ ಚಲೋ ಪುನರಾರಂಭಗೊಂಡಿದೆ.
ನಿನ್ನೆ ಪಂಜಾಬ್ – ಹರಿಯಾಣದ ಶಂಭೂ ಗಡಿಯಲ್ಲಿ ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಿ ಪ್ರತಿಭಟನಾನಿರತಾ ರೈತರು ಮುನ್ನುಗ್ಗಲು ದೆಹಲಿಯತ್ತ ಸಾಗಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ರೈತರ ಮೇಲೆ ಬಲವಂತವಾಗಿ ಅಶ್ರುವಾಯು, ಸ್ಮೋಕ್ ಬಾಂಬ್, ಜಲ ಪಿರಂಗಿಗಳನ್ನು ಬಳಸಿದರು.
ಪೊಲೀಸರು ನಡೆಸಿದ ಅಶ್ರುವಾಯು ಶೆಲ್ ಸಿಡಿತದಲ್ಲಿ 70ಕ್ಕೂ ಹೆಚ್ಚು ಮಂದಿ ರೈತರು ಗಾಯಗೊಂಡಿದ್ದಾರೆ. ಅಲ್ಲದೆ ಅಂಬಾಲಾ ಗಡಿಯಲ್ಲಿ ಕೆಲ ರೈತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.