ಜನಪರ ಹೋರಾಟಗಳಿಗೆ ಕೊನೆಯ ‘ಲಾಲ್ ಸಲಾಮ್’ ಹೇಳಿದ ಕಾಮ್ರೇಡ್ ಸುಂದರರಾಜ್

Date:

ಕಾಮ್ರೇಡ್ ಎಂ.ಎನ್ ಸುಂದರರಾಜ್ ಬುಧವಾರ (ಫೆ.14) ಬೆಳಗಿನ ಜಾವ ನಮ್ಮನ್ನೆಲ್ಲ ಅಗಲಿದ್ದಾರೆ. ತೊಂಬತ್ತು ವರ್ಷ ತುಂಬಲು ಆರೇ ತಿಂಗಳು ಬಾಕಿಯಿದ್ದ ಕಾಮ್ರೇಡ್ ‘ಎಂಎನ್‌ಎಸ್’ ಬೀದರ್‌ನ 70-75 ವರ್ಷಗಳ ಎಲ್ಲ ಹೋರಾಟಗಳ, ಎಲ್ಲ ಆಗುಹೋಗುಗಳ ಎನ್‌ಸೈಕ್ಲೋಪೀಡಿಯ-ಕೈಪಿಡಿ-ರೆಡಿರೆಕನರ್, ಅಷ್ಟೇಕೆ, ಒಂದು ಪತ್ರಾಗಾರ(ಆರ್ಕೈವ್)ದಂತೆ ಇದ್ದರು.ಅವರು ಮತ್ತು ಎರಡು ವರ್ಷಗಳ ಹಿಂದೆ ಅಗಲಿದ ವಿಶ್ವನಾಥರಾವ್ ಪಾಟೀಲ್ ‘ದಮನ್’ ಈ ಇಬ್ಬರೂ ಸುಮಾರು 1955-60ರಿಂದಲೂ ಬೀದರ್‌ನ ಎಲ್ಲ ಚಳವಳಿ-ಹೋರಾಟಗಳ ಬಂಡಿಯನ್ನೆಳೆದ ಜೋಡೆತ್ತುಗಳು ಎಂದರೆ ತಪ್ಪಾಗಲಿಕ್ಕಿಲ್ಲ.

- Advertisement -

ಇವರುಗಳ ಜೊತೆ ಹಣಮಂತಪ್ಪಾ ಪಾಟೀಲ್, ಶಿವರಾಜ ಕಾಡೋದೆ, ಬಿ.ಜಿ.ಸಿದ್ದಬಟ್ಟೆ, ಕಾಮ್ರೇಡ್ ಸಂಗ್ರಾಮಪ್ಪ ವಕೀಲರು ಇತ್ಯಾದಿ, ನಂತರದ ಸಾಲಿನ ಚಳವಳಿಗಾರರೂ, ಮುಂದೆ ಯುವ ತಲೆಮಾರಿನವರೂ ಸೇರಿ ಬೀದರ್‌ನ ಮಣ್ಣಲ್ಲಿ ಹೋರಾಗಳ ಗಟ್ಟಿ ಬೀಜಗಳನ್ನು ಬಿತ್ತಿ ಹುಲುಸಾದ ಬೆಳೆ ತೆಗೆದವರು. ಕಾರ್ಮಿಕರ, ರೈತರ, ದಲಿತರ, ಹಿಂದುಳಿದ ವರ್ಗಗಳ, ಮಹಿಳೆಯರ ಮತ್ತಿತರ ಎಲ್ಲ ಶೋಷಿತ ದಮನಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಂಕಟ ಸಂಕಷ್ಟಗಳಿಗೂ ಇವರು ದನಿ ಮಾತ್ರವಲ್ಲ, ಹೆಗಲು ತೋಳು ತೊಡೆ ಬ್ಯಾನರ್ ಭಿತ್ತಿಪತ್ರ ಮೈಕ್ ಎಲ್ಲವೂ ಆಗುತ್ತಿದ್ದರು. ಹಾಗೆಯೇ ದಸಂಸ, ಸಮುದಾಯ, ಬಂಡಾಯ ಮತ್ತಿತರ ಚಳವಳಿಗಳಿಗೂ ಇವರುಗಳು ಸಮೃದ್ಧವಾಗಿ ನೀರು ಗೊಬ್ಬರ ಉಣಿಸಿದವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಕಾಮ್ರೇಡ್ ಸುಂದರರಾಜ್ ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿನ ಎಡಪಂಥೀಯ, ವಿಶೇಷವಾಗಿ ನಕ್ಸಲ್ ಸಹಾನುಭೂತಿಯ ಹೋರಾಟಗಳಲ್ಲಿ ಪಾಲ್ಗೊಂಡವರು. ಆರೂಕಾಲು ಅಡಿಗಿಂತ ಎತ್ತರದ ಆಜಾನುಬಾಹುವಾದ ಅವರು ಇದ್ದಾರೆಂದರೆ ಜೊತೆಗಾರರಿಗೆ ಎಂಟೆದೆಯ ಬಲ ಬರುತ್ತಿತ್ತು. ಎಸ್ಪಿ ಡಿಸಿಗಳಿಗೂ ಕೇರ್ ಮಾಡದ ಅವರ “ತುಮ್ ಕೌನ್ ಹೋತೇ ಹೋ ಪೂಛನೇವಾಲಾ” (“ನೀನ್ಯಾರು ಕೇಳೋಕೆ ?”) ಎಂಬ ಗರ್ಜನೆ ಕೇಳಿದರೆ ಸಾಕು, ಎಂಥ ಎದುರಾಳಿಗಳೂ ಜಾಗ ಖಾಲಿ ಮಾಡುತ್ತಿದ್ದರು.

ಆರೆಂಟು ವರ್ಷಗಳ ಹಿಂದೆ ಲಕ್ವ ಹೊಡೆದರೂ ಇಚ್ಛಾಶಕ್ತಿಯಿಂದಲೋ ಎಂಬಂತೆ ಬೇಗನೆ ಚೇತರಿಸಿಕೊಂಡು, ಓಡಾಡುವುದನ್ನು ಮುಂದುವರಿಸಿದ್ದರು. ಬೀದರ್‌ನಲ್ಲಿ ನಕ್ಸಲ್ ಪ್ರಭಾವಿತ ಚಳವಳಿಗೆ 1990ರ ಮಧ್ಯಭಾಗದ ಹೊತ್ತಿಗೆ ಹಿನ್ನಡೆಯಾದದ್ದು ಅವರಿಗೊಂದು ದೊಡ್ಡ ಕೊರಗಾಗಿಯೇ ಉಳಿದಿತ್ತು. ನಾವುಗಳು ಬೀದರಿಗೆ ಹೋದಾಗಲೆಲ್ಲ “ಇಲ್ಲಿಗೆ ಯಾರನ್ನಾದರೂ (ಕಾರ್ಯಕರ್ತರನ್ನು) ಕಳಿಸ್ರೀ. ಎಲ್ಲಾ ಕೂಡಿ ಮತ್ತೆ ಚಳವಳಿ ಕಟ್ಟೋಣು” ಎಂದು ತಪ್ಪದೆ ಹೇಳುತ್ತಿದ್ದರು.

ಬೀದರ್‌ನ ಜನಪರ ಹೋರಾಟಗಳ ಕೊನೇ ಕೊಂಡಿಯಂತಿದ್ದ ಸುಂದರರಾಜ್ ಅವರ ಸ್ಥಾನ ದೀರ್ಘ ಕಾಲ ಖಾಲಿಯಾಗಿಯೇ ಇರುತ್ತೆ ಎನ್ನುವುದು ಬಹು ದುಃಖದ ವಿಷಯ.

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್
ಸಿರಿಮನೆ ನಾಗರಾಜ್
ಲೇಖಕರು, ಸಾಮಾಜಿಕ ಹೋರಾಟಗಾರರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ರಾಯಚೂರು | ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತ: ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,...

ಹಾವೇರಿ | ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಜೊತೆಗೆ ರೈತರು ಬೆಳೆಯುವ...

ಬೀದರ್‌ | ಪಿಸ್ತೂಲ್‌ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು: ಮುಖ್ಯ ಆರೋಪಿ ಸೇರಿ ನಾಲ್ವರ ಬಂಧನ

ಅಕ್ರಮವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಧೆಕೋರರನ್ನು...