ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಇಂದು (ಮೇ 14) ದೇಶದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜಸ್ಟೀಸ್ ಗವಾಯಿ ಅವರನ್ನು ಅಭಿನಂದಿಸಿರುವ ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು, “ಗವಾಯಿಯವರು ದೇಶದ ಮೊದಲ ಬೌದ್ಧ ಅಂಬೇಡ್ಕರ್ವಾದಿ ಸಿಜೆಐ” ಎಂದಿದ್ದಾರೆ.
ಈ ಬಗ್ಗೆ ತನ್ನ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ದೇಶಕ್ಕೆ ಸಂವಿಧಾನ ದೊರೆತ 75 ವರ್ಷಗಳ ನಂತರ ಗವಾಯಿಯವರು ದೇಶದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ ಮೊದಲ ಬೌದ್ಧ ಅಂಬೇಡ್ಕರ್ವಾದಿಯಾಗಿದ್ದಾರೆ. ಬಾಬಾಸಾಹೇಬರಿಗೆ ಮತ್ತು ಹೆಚ್ಚು ಸಮಾನತೆಯ ಗಣರಾಜ್ಯದ ಕನಸಿಗೆ ಸೂಕ್ತವಾದ ಗೌರವ ಇದಾಗಿದೆ. ಜೈ ಭೀಮ್, ಜೈ ಹಿಂದ್” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಂವಿಧಾನ ‘ಭೀಮಸ್ಮೃತಿ’ ಎನ್ನುವ ಸಿಜೆಐ- ತಳಸ್ತರದ ಅಸಹಾಯಕರ ನ್ಯಾಯ ಪ್ರತಿಪಾದಕ
ನ್ಯಾಯಮೂರ್ತಿ ಗವಾಯಿ ಅವರು ಹಲವು ರಾಜ್ಯಗಳ ರಾಜ್ಯಪಾಲರಾಗಿದ್ದ ಪ್ರಸಿದ್ಧ ರಾಜಕಾರಣಿ ಆರ್ ಎಸ್ ಗವಾಯಿ ಅವರ ಪುತ್ರ. ಬಿ ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ಆಳಕ್ಕೆ ಅಳವಡಿಸಿಕೊಂಡ ಕುಟುಂಬಕ್ಕೆ ಸೇರಿದವರು. ಅವರ ತಂದೆ ಅಂಬೇಡ್ಕರ್ವಾದಿ ಮತ್ತು ಮಾಜಿ ಸಂಸತ್ ಸದಸ್ಯರು. ನ್ಯಾಯಮೂರ್ತಿ ಗವಾಯಿ ಅವರೂ ಬೌದ್ಧ- ಅಂಬೇಡ್ಕರ್ವಾದಿಯಾಗಿದ್ದಾರೆ.
75 years after the country got its constitution, Justice BR Gavai becomes the first neo-Buddhist Ambedkarite to hold the post. Fitting tribute to Babasaheb and the dream of a more egalitarian Republic . Jai Bhim, Jai Hind. 🇮🇳 https://t.co/RcC9DfbttF
— Rajdeep Sardesai (@sardesairajdeep) May 14, 2025
ಗವಾಯಿ ಸಂವಿಧಾನವನ್ನು ‘ಭೀಮಸ್ಮೃತಿ’ ಎಂದು ಕರೆಯುತ್ತಾರೆ. ‘ಅಂಬೇಡ್ಕರ್ ಕನಸುಗಳಿಗೆ ರೆಕ್ಕೆ ನೀಡುವ ಮಾರ್ಗ ಸಂವಿಧಾನ’ ಎಂಬ ತನ್ನ ತಂದೆಯ ಮಾತು ಗವಾಯಿ ಅವರಿಗೆ ದಾರಿದೀಪ ಎನ್ನಬಹುದು.
ಇದನ್ನು ಓದಿದ್ದೀರಾ? 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಬಿ. ಆರ್. ಗವಾಯಿ ಪ್ರಮಾಣ ವಚನ ಸ್ವೀಕಾರ
ಅವರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಎಂದೇ ಪರಿಗಣಿಸಬಹುದು. ನಿವೃತ್ತ ಸಿಜೆಐ ಕೆ ಜಿ ಬಾಲಕೃಷ್ಣನ್ ನಂತರ ಸುಪ್ರೀಂ ಕೋರ್ಟ್ನ ಉನ್ನತ ಸ್ಥಾನವನ್ನು ತಲುಪಿದ ಪರಿಶಿಷ್ಟ ಜಾತಿ ಸಮುದಾಯದ ಎರಡನೇ ವ್ಯಕ್ತಿ ನ್ಯಾಯಮೂರ್ತಿ ಗವಾಯಿ. ಅಂಬೇಡ್ಕರ್ವಾದಿ ಸಿಜೆಐ ಆಗಿರುವುದು ಭರವಸೆ ಹೆಚ್ಚಿಸಿದೆ. ಆದರೆ ಅವರ ಅಧಿಕಾರಾವಧಿ ಕೇವಲ ಆರು ತಿಂಗಳು. 2025ರ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.
