ಪತಿ ಎಸಗಿದರೂ ಅದು ಅತ್ಯಾಚಾರವೇ; ಲೈಂಗಿಕ ದೌರ್ಜನ್ಯದ ಬಗ್ಗೆ ಮೌನ ಮುರಿದ ಗುಜರಾತ್ ಹೈಕೋರ್ಟ್

Date:

Advertisements

ವಿವಿಧ ದೇಶಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿದ್ದು ಸಂತ್ರಸ್ತೆಯ ಮೇಲೆ ಆಕೆಯ ಪತಿಯೇ ಬಲಾತ್ಕಾರ ಮಾಡಿದರೂ ಅದು ಅತ್ಯಾಚಾರ ಎನಿಸಿಕೊಳ್ಳುತ್ತದೆ ಎಂದು ಗುಜರಾತ್‌ ಹೈಕೋರ್ಟ್‌ ಇತ್ತೀಚಿಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.

ಅಮೆರಿಕಾದ ಐವತ್ತು ರಾಜ್ಯಗಳು, ಆಸ್ಟ್ರೇಲಿಯಾದ ಮೂರು ರಾಜ್ಯಗಳು, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಸೋವಿಯತ್ ಒಕ್ಕೂಟ, ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾ ಮತ್ತಿತರ ಹಲವು ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಅಪರಾಧವಾಗಿದೆ ಎಂದು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಡಿಸೆಂಬರ್ 8 ರಂದು ನೀಡಿದ ಆದೇಶದಲ್ಲಿ ವಿವರಿಸಿದ್ದಾರೆ.

ತನ್ನ ಸೊಸೆಯನ್ನು ಹಿಂಸೆ ಮತ್ತು ಕ್ರಿಮಿನಲ್ ಬೆದರಿಕೆಗೆ ಒಳಪಡಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು ಈ ರೀತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿತು. ಪತಿ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಹಣ ಸಂಪಾದಿಸಲು ಅಶ್ಲೀಲ ಸೈಟ್‌ಗಳಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದ. ಹೆತ್ತವರ ಪ್ರಚೋದನೆಯಿಂದ ಪತಿ ತನಗೆ “ಅಸ್ವಾಭಾವಿಕ” ಕೃತ್ಯಗಳಲ್ಲಿ ತೊಡಗಲು ಒತ್ತಾಯಿಸುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದರು.

Advertisements

ಭಾರತೀಯ ದಂಡ ಸಂಹಿತೆ ಹೆಚ್ಚಾಗಿ ಅನುಸರಿಸುವ ಇಂಗ್ಲೆಂಡ್‌ನಲ್ಲಿ 1991ಲ್ಲಿ ನೀಡಿದ ತೀರ್ಪಿನಂತೆ (ಪತಿಗೆ ಅತ್ಯಾಚಾರ ಆರೋಪದಿಂದ ವಿನಾಯಿತಿ ನೀಡುವ ಸೆಕ್ಷನ್ 376 ಕ್ಕೆ) ವಿನಾಯಿತಿಯನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಆಗಿನ ಆಡಳಿತಗಾರರು ರೂಪಿಸಿದ ಐಪಿಸಿ ಗಂಡಸರಿಗೆ ನೀಡಲಾಗಿದ್ದ ವಿನಾಯಿತಿಯನ್ನು ಖುದ್ದು ರದ್ದುಗೊಳಿಸಿದೆ” ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ಪುರುಷನು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಮಾಡಿದರೆ, ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಶಿಕ್ಷೆಗೆ ಅರ್ಹನಾಗುತ್ತಾನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ

“ಅಂತಹ ಹೆಚ್ಚಿನ ಸಂದರ್ಭಗಳಲ್ಲಿ, ಸಾಮಾನ್ಯ ಅಭ್ಯಾಸವೆಂದರೆ, ಪುರುಷ ಗಂಡನಾಗಿದ್ದು, ಇನ್ನೊಬ್ಬ ಪುರುಷನಂತೆ ಅದೇ ಕೃತ್ಯ ಎಸಗಿದರೆ, ಅವನಿಗೆ ವಿನಾಯಿತಿ ನೀಡಲಾಗುತ್ತದೆ. ನನ್ನ ಪರಿಗಣಿತ ದೃಷ್ಟಿಕೋನದಲ್ಲಿ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪುರುಷ ಎಂದರೆ ಪುರುಷನಷ್ಟೆ, ಕೃತ್ಯ ಕೃತ್ಯವಷ್ಟೇ, ಪುರುಷನಾದ ‘ಪತಿ’ ಮಹಿಳೆಯಾದ ʼಹೆಂಡತಿʼ ಮೇಲೆ ಅತ್ಯಾಚಾರ ನಡೆಸಿದ್ದರೆ ಆ ಅತ್ಯಾಚಾರ ಅತ್ಯಾಚಾರವೇ” ಎಂದು ನ್ಯಾಯಮೂರ್ತಿ ಜೋಶಿ ಒತ್ತಿಹೇಳಿದರು.

ಇದಲ್ಲದೆ, ಹೆಣ್ಣುಮಕ್ಕಳನ್ನು ಹಿಂಬಾಲಿಸುವಿಕೆ ಮತ್ತು ಕಾಡುವಿಕೆಯನ್ನು (ಈವ್‌ ಟೀಸಿಂಗ್‌) ಸಾಮಾನ್ಯೀಕರಿಸುವ ‘ಹುಡುಗರು ಸದಾ ಹುಡುಗರೇ’ ಎಂಬ ಸಾಮಾಜಿಕ ಮನೋಭಾವ ಬದಲಿಸುವ ಅಗತ್ಯತೆ ಕುರಿತು ನ್ಯಾಯಾಲಯ ಮಾತನಾಡಿತು.

ಲೈಂಗಿಕ ಹಿಂಸಾಚಾರವು ವಿವಿಧ ಸ್ವರೂಪ ಹೊಂದಿದ್ದು, ಹಿಂಸಾತ್ಮಕವಾಗಿರಲಿ ಅಥವಾ ಇಲ್ಲದಿರಲಿ ಅದರ ಅತಿರೇಕದ ಹಂತ ಅತ್ಯಾಚಾರ ನಡೆಯುತ್ತದೆ. ಆದರೂ ಲೈಂಗಿಕ ಹಿಂಸಾಚಾರದ ವ್ಯಾಪ್ತಿಯಲ್ಲಿ ಬರುವ ಗಣನೀಯ ಸಂಖ್ಯೆಯ ಘಟನೆಗಳಿವೆ. ಇದು ವಿವಿಧ ದಂಡನಾತ್ಮಕ ಕಾನೂನುಗಳ ಅಡಿಯಲ್ಲಿ ಅಪರಾಧಗಳಿಗೆ ಸಮನಾಗಿರುತ್ತದೆ ಎಂದು ನ್ಯಾಯಾಲಯ ನುಡಿದಿದೆ.

“ಹಿಂಬಾಲಿಸುವುದು, ಈವ್-ಟೀಸಿಂಗ್(ಕಾಡುವಿಕೆ), ಮೌಖಿಕ ಮತ್ತು ದೈಹಿಕ ದಾಳಿ ಮತ್ತು ಕಿರುಕುಳಗಳು ಕಾನೂನುಬಾಹಿರ ನಡವಳಿಕೆಗಳಾಗಿವೆ. ಸಾಮಾಜಿಕ ವರ್ತನೆಗಳು ಸಾಮಾನ್ಯವಾಗಿ ಈ ಎರಡನೆಯ ವರ್ಗದ ಅಪರಾಧಗಳನ್ನು ‘ಸಣ್ಣ ಅಪರಾಧಗಳು’ ಎಂದು ನಿರೂಪಿಸುತ್ತವೆ.

“ಆದ್ದರಿಂದ ಸಿನೆಮಾದಂತಹ ಜನಪ್ರಿಯ ಕಥೆಗಳಲ್ಲಿ ಅವುಗಳಿಗೆ ಉತ್ತೇಜನ ಇರುತ್ತದೆ. ‘ಹುಡುಗರು ಸದಾ ಹುಡುಗರೇ’ ಎಂಬಂತಹ ದೃಷ್ಟಿಕೋನಗಳ ಮೂಲಕ ಅಪರಾಧವನ್ನು ರಂಜನೀಯವಾಗಿಸಿ ಪ್ರೀತಿಯಿಂದ ನೋಡುವ ಮತ್ತು ಅವರನ್ನು ಕ್ಷಮಿಸುವ ಇಂತಹ ವರ್ತನೆಗಳು ಸಂತ್ರಸ್ತರ ಮೇಲೆ ಶಾಶ್ವತ ಮತ್ತು ಹಾನಿಕಾರಕ ಪರಿಣಾಮ ಬೀರುತ್ತವೆ” ಎಂದು ನ್ಯಾಯಮೂರ್ತಿ ಜೋಶಿ ಒತ್ತಿಹೇಳಿದರು.

ಆದ್ದರಿಂದ, ಲಿಂಗಾಧಾರಿತ ಹಿಂಸಾಚಾರದ ಬಗ್ಗೆ ‘ಮೌನ’ ಮುರಿಯುವ ಅಗತ್ಯವಿದೆ. ಭಾರತದಲ್ಲಿ, ಅಪರಾಧಿಗಳು ಹೆಚ್ಚಾಗಿ ಮಹಿಳೆಯರಿಗೆ ತಿಳಿದಿದ್ದರೂ ಅಂತಹ ಅಪರಾಧಗಳನ್ನು ವರದಿ ಮಾಡುವಾಗ ತೆರುವ ಸಾಮಾಜಿಕ ಮತ್ತು ಆರ್ಥಿಕ ‘ದಂಡ’ ದೊಡ್ಡದು ಎಂದು ನ್ಯಾಯಾಲಯ ನುಡಿದಿದೆ.

ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗಟ್ಟುವಲ್ಲಿ ಮತ್ತು ಎದುರಿಸುವಲ್ಲಿ ಬಹುಶಃ ಮಹಿಳೆಯರಿಗಿಂತ ಹೆಚ್ಚಾಗಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಪಾತ್ರ ಪುರುಷರದ್ದಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X